ಬೆಂಗಳೂರು: ನೀವು ಚಿನ್ನ ಖರೀದಿಸುವ ಪ್ಲಾನ್ ಮಾಡಿದ್ದೀರಾ? ಹಾಗಿದ್ದರೆ ಇಂದಿನ ಮಾರುಕಟ್ಟೆ ದರ ಒಮ್ಮೆ ನೋಡಿ. ಕಳೆದ ಕೆಲವು ದಿನಗಳಿಂದ ಏರಿಳಿತ ಕಾಣುತ್ತಿದ್ದ ಹಳದಿ ಲೋಹದ ಬೆಲೆ ಇಂದು ದಿಢೀರ್ ಏರಿಕೆ ಕಂಡಿದೆ. ಹಳದಿ ಲೋಹಕ್ಕೆ ಡಿಮ್ಯಾಂಡ್ ಹೆಚ್ಚಿದ್ದು 10 ಗ್ರಾಂಗೆ 1470 ರೂಪಾಯಿ ಜಿಗಿದಿದೆ. ಆದ್ರೆ ಬೆಳ್ಳಿ ಇಳಿಕೆಯತ್ತ ಮುಖಮಾಡಿದೆ
ಭಾರತೀಯ ಮಾರುಕಟ್ಟೆಯಲ್ಲಿ ಶನಿವಾರ ಚಿನ್ನದ ಬೆಲೆಯು ಸಲ್ಪ ಏರಿಕೆಯೊಂದಿಗೆ ಸ್ಥಿರತೆಯನ್ನು ಕಾಯ್ದುಕೊಂಡಿದೆ. ಜಾಗತಿಕ ಮಾರುಕಟ್ಟೆಯ ಏರಿಳಿತ ಮತ್ತು ಭೌಗೋಳಿಕ ರಾಜಕೀಯ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಹೂಡಿಕೆದಾರರು ಎಚ್ಚರಿಕೆಯ ಹೆಜ್ಜೆ ಇಡುತ್ತಿದ್ದಾರೆ.
ಚಿನ್ನದ ಇಂದಿನ ಚಿಲ್ಲರೆ ದರಗಳು (Retail Rates):
24 ಕ್ಯಾರೆಟ್ (ಶುದ್ಧ ಚಿನ್ನ): ಪ್ರತಿ 10 ಗ್ರಾಂಗೆ Rs 1,57,160. (ಶುಕ್ರವಾರಕ್ಕಿಂತ 10 ರೂಪಾಯಿ ಏರಿಕೆ).
22 ಕ್ಯಾರೆಟ್ (ಆಭರಣ ಚಿನ್ನ): ಪ್ರತಿ 10 ಗ್ರಾಂಗೆ Rs 1,44,060.
18 ಕ್ಯಾರೆಟ್: ಪ್ರತಿ 10 ಗ್ರಾಂಗೆ ಸರಿಸುಮಾರು Rs 1,17,870.
ಜಾಗತಿಕ ಮಾರುಕಟ್ಟೆಯಲ್ಲಿನ ಸ್ಥಿರ ಬೇಡಿಕೆಯ ಹಿನ್ನೆಲೆಯಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಇಂದು ಬೆಳ್ಳಿ ದರವು ಏರಿಕೆ ಕಂಡಿದೆ. ಪ್ರತಿ ಕೆಜಿ ಬೆಳ್ಳಿಯ ಬೆಲೆಯು 100 ರೂಪಾಯಿಗಳಷ್ಟು ಅಧಿಕವಾಗಿದ್ದು, ಪ್ರಸ್ತುತ ಮಾರುಕಟ್ಟೆಯಲ್ಲಿ ಒಂದು ಕೆಜಿ ಬೆಳ್ಳಿಯ ಬೆಲೆ 3,40,100 ರೂಪಾಯಿಗಳಿಗೆ ತಲುಪಿದೆ. ಇನ್ನು ಚಿಲ್ಲರೆ ಮಾರಾಟದಲ್ಲಿ ಪ್ರತಿ ಗ್ರಾಂ ಬೆಳ್ಳಿಗೆ 340.10 ರೂಪಾಯಿಗಳ ದರವಿದೆ.
ಇಂದಿನ ಚಿನ್ನದ ದರದ ಸಂಪೂರ್ಣ ವಿವರ (ಜನವರಿ 24, 2026):
24 ಕ್ಯಾರೆಟ್ (ಅಪರಂಜಿ ಚಿನ್ನ): ಶುದ್ಧ ಚಿನ್ನದ ಬೆಲೆ ಇಂದು ಗಗನಕ್ಕೇರಿದೆ.
ನಿನ್ನೆ ಪ್ರತಿ 10 ಗ್ರಾಂಗೆ ರೂ. 1,57,150 ಇದ್ದ ಬೆಲೆ ಇಂದು ರೂ. 1,58,620 ಕ್ಕೆ ತಲುಪಿದೆ.
1 ಗ್ರಾಂ: ರೂ. 15,862 (ಏರಿಕೆ: ರೂ. 147)
10 ಗ್ರಾಂ: ರೂ. 1,58,620 (ಏರಿಕೆ: ರೂ. 1,470)
100 ಗ್ರಾಂ: ರೂ. 15,86,200 (ಏರಿಕೆ: ರೂ. 14,700)
22 ಕ್ಯಾರೆಟ್ (ಆಭರಣ ಚಿನ್ನ): ಸಾಮಾನ್ಯವಾಗಿ ಆಭರಣ ತಯಾರಿಕೆಗೆ ಬಳಸುವ 22 ಕ್ಯಾರೆಟ್ ಚಿನ್ನದ ಬೆಲೆಯಲ್ಲೂ ಗಣನೀಯ ಏರಿಕೆ ಕಂಡುಬಂದಿದೆ.
1 ಗ್ರಾಂ: ರೂ. 14,540 (ಏರಿಕೆ: ರೂ. 135)
10 ಗ್ರಾಂ: ರೂ. 1,45,400 (ಏರಿಕೆ: ರೂ. 1,350)
100 ಗ್ರಾಂ: ರೂ. 14,54,000 (ಏರಿಕೆ: ರೂ. 13,500)
18 ಕ್ಯಾರೆಟ್ ಚಿನ್ನ:
1 ಗ್ರಾಂ: ರೂ. 11,897 (ಏರಿಕೆ: ರೂ. 111)
10 ಗ್ರಾಂ: ರೂ. 1,18,970 (ಏರಿಕೆ: ರೂ. 1,110)
ಬೆಂಗಳೂರು ಸೇರಿದಂತೆ ಪ್ರಮುಖ ನಗರಗಳಲ್ಲಿ ಇಂದಿನ 24 ಕ್ಯಾರೆಟ್ ಚಿನ್ನದ ದರ (ಪ್ರತಿ 10 ಗ್ರಾಂ):
| ನಗರದ ಹೆಸರು | ಇಂದಿನ ಚಿನ್ನದ ಬೆಲೆ (24K) |
| ಬೆಂಗಳೂರು | ₹1,58,620 |
| ಮುಂಬೈ | ₹1,58,620 |
| ಕೋಲ್ಕತ್ತಾ | ₹1,58,620 |
| ನಾಗ್ಪುರ | ₹1,58,620 |
| ಚೆನ್ನೈ | ₹1,59,490 |
| ಲಕ್ನೋ | ₹1,58,770 |
| ಚಂಡೀಗಢ | ₹1,58,770 |
| ಪಾಟ್ನಾ | ₹1,58,670 |
| ಸೂರತ್ | ₹1,58,670 |

