HomeBusinessಡಾಲರ್ ಅಲ್ಲ ಜಗತ್ತಿನ ಅತ್ಯಂತ ಪ್ರಬಲ ಕರೆನ್ಸಿ ಹಾಗಾದ್ರೆ ನಂಬರ್ 1 ಸ್ಥಾನದಲ್ಲಿರೋದು ಯಾವುದು?

ಡಾಲರ್ ಅಲ್ಲ ಜಗತ್ತಿನ ಅತ್ಯಂತ ಪ್ರಬಲ ಕರೆನ್ಸಿ ಹಾಗಾದ್ರೆ ನಂಬರ್ 1 ಸ್ಥಾನದಲ್ಲಿರೋದು ಯಾವುದು?

ಸಾಮಾನ್ಯವಾಗಿ ನಾವೆಲ್ಲಾ ಅಂದುಕೊಂಡಿರೋದು ಅಮೆರಿಕನ್ ಡಾಲರ್ ಅಂದ್ರೆನೇ ಪ್ರಪಂಚದ ನಂಬರ್ 1 ಕರೆನ್ಸಿ ಅಂತ. ಆದ್ರೆ ಅಸಲಿ ವಿಷಯ ಏನಪ್ಪಾ ಅಂದ್ರೆ, ವ್ಯಾಲ್ಯೂ ವಿಷಯಕ್ಕೆ ಬಂದ್ರೆ ಡಾಲರ್ ಬರೋದು ಬರೋಬ್ಬರಿ 10ನೇ ಸ್ಥಾನದಲ್ಲಿ ಡಾಲರ್‌ಗಿಂತಲೂ ಸಖತ್ ಸ್ಟ್ರಾಂಗ್ ಆಗಿರೋ ಕರೆನ್ಸಿಗಳು ಮಾರುಕಟ್ಟೆಯಲ್ಲಿವೆ.

ಯಾವ ಕರೆನ್ಸಿಗೆ ಎಷ್ಟು ಮೌಲ್ಯ? ಇಲ್ಲಿದೆ ನೋಡಿ ಫುಲ್ ಡೀಟೇಲ್ಸ್:

1.ಅಲ್ಟಿಮೇಟ್ ಕಿಂಗ್ ಕುವೈತ್ ದಿನಾರ್

ಜಗತ್ತಿನಲ್ಲೇ ಅತಿ ಹೆಚ್ಚು ವ್ಯಾಲ್ಯೂ ಇರೋ ಕರೆನ್ಸಿ ಅಂದ್ರೆ ಅದು ಕುವೈತ್ ದಿನಾರ್.ಲೆಕ್ಕಾಚಾರ: ಒಂದು ಕುವೈತ್ ದಿನಾರ್ ಕೊಟ್ಟರೆ ಬರೋಬ್ಬರಿ 3.26 ಅಮೆರಿಕನ್ ಡಾಲರ್ ಸಿಗುತ್ತೆ ಅಂದ್ರೆ ಡಾಲರ್‌ಗಿಂತ ಮೂರು ಪಟ್ಟು ಹೆಚ್ಚು ಪವರ್‌ಫುಲ್.ಅಲ್ಲಿರೋ ಬೆಟ್ಟದಷ್ಟು ತೈಲ ಸಂಪತ್ತು ಮತ್ತು ಸ್ಟ್ರಾಂಗ್ ಎಕಾನಮಿ ಈ ದೇಶವನ್ನ ನಂಬರ್ 1 ಸ್ಥಾನದಲ್ಲಿರಿಸಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

2.ಟಾಪ್ ಪಟ್ಟಿಯಲ್ಲಿ ಅರಬ್ ದೇಶಗಳದ್ದೇ ಹವಾ

ಕುವೈತ್ ಮಾತ್ರವಲ್ಲ, ಬಹ್ರೇನ್ ಮತ್ತು ಒಮಾನ್ ದೇಶಗಳ ಕರೆನ್ಸಿಗಳು ಕೂಡ ಡಾಲರ್‌ಗೆ ಸೆಡ್ಡು ಹೊಡೆಯುತ್ತಿವೆ.ಬಹ್ರೇನಿ ದಿನಾರ್: 1 ದಿನಾರ್ = ಸುಮಾರು 2.65 ಡಾಲರ್.ಒಮಾನಿ ರಿಯಾಲ್: 1 ರಿಯಾಲ್ = ಸುಮಾರು 2.60 ಡಾಲರ್ ಇಲ್ಲಿರೋ ನೈಸರ್ಗಿಕ ಅನಿಲ ಮತ್ತು ತೈಲ ನಿಕ್ಷೇಪಗಳೇ ಈ ಕರೆನ್ಸಿಗಳ ತಾಕತ್ತು

3.ಡಾಲರ್ ಬೆಲೆ ಕುವೈತ್ ದಿನಾರ್‌ಗಿಂತ ಕಮ್ಮಿ ಇರಬಹುದು, ಆದ್ರೆ ಪ್ರಪಂಚದ 85% ಬ್ಯುಸಿನೆಸ್ ನಡೆಯೋದು ಇದೇ ಡಾಲರ್ ಮೂಲಕ! ಇದಕ್ಕಿರೋ ಜಾಗತಿಕ ಡಿಮ್ಯಾಂಡ್ ಬೇರೆ ಯಾವ ಕರೆನ್ಸಿಗೂ ಇಲ್ಲ.

ಅತ್ಯಂತ ವೀಕ್ ಕರೆನ್ಸಿ ಯಾವುದು ಗೊತ್ತಾ?

ವಿಶ್ವದ ಅತಿ ಕಡಿಮೆ ಮೌಲ್ಯದ ಕರೆನ್ಸಿ ಅಂದ್ರೆ ಅದು ಇರಾನಿಯನ್ ರಿಯಲ್. ಅಮೆರಿಕ ಹಾಕಿರೋ ಆರ್ಥಿಕ ನಿರ್ಬಂಧಗಳಿಂದಾಗಿ ಈ ದೇಶದ ಕರೆನ್ಸಿ ಮೌಲ್ಯ ಪಾತಾಳಕ್ಕೆ ಇಳಿದಿದೆ.1 ಡಾಲರ್ ಸಿಗಬೇಕಾದ್ರೆ ನೀವು ಬರೋಬ್ಬರಿ 3,71,992 ಇರಾನಿಯನ್ ರಿಯಲ್ ಕೊಡಬೇಕು

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

LEAVE A REPLY

Please enter your comment!
Please enter your name here

Most Popular