HomeKarnataka8th Pay Commission:ಕೇಂದ್ರ ಸರ್ಕಾರಿ ನೌಕರರ  ಒಕ್ಕೂಟ ಇಟ್ಟ ಪ್ರಮುಖ ಬೇಡಿಕೆಗಳು ಇಲ್ಲಿವೆ 

8th Pay Commission:ಕೇಂದ್ರ ಸರ್ಕಾರಿ ನೌಕರರ  ಒಕ್ಕೂಟ ಇಟ್ಟ ಪ್ರಮುಖ ಬೇಡಿಕೆಗಳು ಇಲ್ಲಿವೆ 

ನವದೆಹಲಿ: ಕೇಂದ್ರ ಸರ್ಕಾರಿ ನೌಕರರು ಮತ್ತು ಪೆನ್ಷನರ್‌ಗಳ ಬಹುದಿನಗಳ ನಿರೀಕ್ಷೆಯಾದ 8ನೇ ವೇತನ ಆಯೋಗದ (8th Pay Commission) ಪ್ರಕ್ರಿಯೆ ವೇಗ ಪಡೆದುಕೊಂಡಿದೆ. ನೌಕರರ ಒಕ್ಕೂಟವಾದ NCJCM ಇತ್ತೀಚೆಗೆ ಆಯೋಗಕ್ಕೆ ವಿಸ್ತಾರವಾದ ಮನವಿಯನ್ನು ಸಲ್ಲಿಸಿದ್ದು, ವೇತನ ಮತ್ತು ಸೌಲಭ್ಯಗಳಲ್ಲಿ ಭಾರಿ ಬದಲಾವಣೆ ತರಲು ಒತ್ತಾಯಿಸಿದೆ.ಬೆಲೆ ಏರಿಕೆ ಮತ್ತು ಜೀವನಮಟ್ಟವನ್ನು ಗಮನದಲ್ಲಿಟ್ಟುಕೊಂಡು ಮಂಡಿಸಲಾದ 7 ಪ್ರಮುಖ ಬೇಡಿಕೆಗಳು ಇಲ್ಲಿವೆ:

1.ಕನಿಷ್ಠ ಸಂಬಳ ₹69,000ಕ್ಕೆ ಫಿಕ್ಸ್

7ನೇ ವೇತನ ಆಯೋಗದಲ್ಲಿ ಕೇವಲ ₹18,000 ಇದ್ದ ಕನಿಷ್ಠ ಮೂಲ ವೇತನವನ್ನು, ಈಗಿನ ಹಣದುಬ್ಬರಕ್ಕೆ ಅನುಗುಣವಾಗಿ ಬರೋಬ್ಬರಿ ₹69,000ಕ್ಕೆ ನಿಗದಿಪಡಿಸಬೇಕು ಎಂಬುದು ಅತಿ ದೊಡ್ಡ ಬೇಡಿಕೆ. ಇದು ಜಾರಿಯಾದಲ್ಲಿ ಕೆಳಹಂತದ ನೌಕರರ ವೇತನದಲ್ಲೂ ಭಾರಿ ಏರಿಕೆ ಕಂಡುಬರಲಿದೆ.

2.ವಾರ್ಷಿಕ ಇಂಕ್ರಿಮೆಂಟ್ ಶೇ. 6ಕ್ಕೆ ಹೆಚ್ಚಳ

ಪ್ರಸ್ತುತ ವರ್ಷಕ್ಕೆ ಶೇ. 3ರಷ್ಟು ಇರುವ ವಾರ್ಷಿಕ ವೇತನ ಏರಿಕೆಯನ್ನು (Increment) ಶೇ. 6ಕ್ಕೆ ಹೆಚ್ಚಿಸಬೇಕು ಎಂದು ಒತ್ತಾಯಿಸಲಾಗಿದೆ. ಇದರಿಂದ ನೌಕರರ ವೇತನದ ಬೆಳವಣಿಗೆ ಡಬಲ್ ವೇಗದಲ್ಲಿ ನಡೆಯಲಿದೆ

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

3.ಫಿಟ್‌ಮೆಂಟ್ ಫ್ಯಾಕ್ಟರ್ 3.833ಕ್ಕೆ ಏರಿಕೆ

ಸಂಬಳ ಮತ್ತು ಪೆನ್ಷನ್ ಪರಿಷ್ಕರಣೆಗಾಗಿ 3.833 ಫಿಟ್‌ಮೆಂಟ್ ಫ್ಯಾಕ್ಟರ್ ಅನ್ವಯಿಸಬೇಕು ಎಂಬುದು ಎರಡನೇ ದೊಡ್ಡ ಬೇಡಿಕೆ. ಇದರಿಂದ ನೌಕರರ ಕೈಗೆ ಸಿಗುವ ಸಂಬಳ ಗಣನೀಯವಾಗಿ ಹೆಚ್ಚಾಗಲಿದೆ

4.ಪೇ-ಲೆವೆಲ್ ವಿಲೀನ ಮತ್ತು ಸರಳೀಕರಣ

ಹಲವು ಹಂತದ ವೇತನ ಶ್ರೇಣಿಗಳನ್ನು ವಿಲೀನಗೊಳಿಸಿ ಸರಳಗೊಳಿಸಲು ಸೂಚಿಸಲಾಗಿದೆ. ಉದಾಹರಣೆಗೆ:

ಲೆವೆಲ್ 2 ಮತ್ತು 3 ಅನ್ನು ವಿಲೀನಗೊಳಿಸಿ ಲೆವೆಲ್ 3 ಮಾಡುವುದು.

ಲೆವೆಲ್ 4 ಮತ್ತು 5 ಅನ್ನು ವಿಲೀನಗೊಳಿಸಿ ಲೆವೆಲ್ 5 ಮಾಡುವುದು.

ಲೆವೆಲ್ 5 ನೌಕರರಿಗೆ ಒಂದೇ ಬಾರಿಗೆ ಲೆವೆಲ್ 6 ಗೆ ಬಡ್ತಿ ನೀಡುವುದು.

ಪೌಷ್ಟಿಕಾಂಶ ಆಧಾರಿತ ವೇತನ ಲೆಕ್ಕಾಚಾರ

ನೌಕರರ ಆರೋಗ್ಯದ ದೃಷ್ಟಿಯಿಂದ ICMR ಶಿಫಾರಸು ಮಾಡಿರುವ 3,490 kcal ದೈನಂದಿನ ಕ್ಯಾಲೊರಿ ಅಗತ್ಯತೆಯನ್ನು ಆಧರಿಸಿ ಸಂಬಳ ನಿಗದಿಪಡಿಸಬೇಕು. ಇದರಲ್ಲಿ ಪ್ರೋಟೀನ್, ಹಣ್ಣು, ತರಕಾರಿ ಮತ್ತು ಹಾಲಿನ ವೆಚ್ಚವೂ ಸೇರಿರಲಿದೆ.

5.ಮನೆ ಬಾಡಿಗೆ ಮತ್ತು ಜೀವನ ನಿರ್ವಹಣೆ ಭತ್ಯೆ

ವೇತನ ಹಂಚಿಕೆಯಲ್ಲಿ ಈ ಕೆಳಗಿನಂತೆ ಸ್ಪಷ್ಟ ವಿಂಗಡಣೆ ಇರಬೇಕೆಂದು ಕೋರಲಾಗಿದೆ:

ಮನೆ ಬಾಡಿಗೆ: 7.5%

ಇಂಧನ, ನೀರು, ವಿದ್ಯುತ್: 20%

ಕೌಶಲ ಅಭಿವೃದ್ಧಿ: 25%

ಜೀವನಶೈಲಿ ಮತ್ತು ಇತರೆ: 25%

6.ವೇತನ ಪರಿಷ್ಕರಣೆಗೆ 10 ವರ್ಷ ಕಾಯುವಂತಿಲ್ಲ

ಇನ್ಮುಂದೆ ವೇತನ ಪರಿಷ್ಕರಣೆಗಾಗಿ 10 ವರ್ಷ ಕಾಯುವ ಸಂಪ್ರದಾಯ ಬೇಡ. ತುಟ್ಟಿಭತ್ಯೆ (DA) ಶೇ. 50 ದಾಟಿದಾಗ ಅಥವಾ ಮಾರುಕಟ್ಟೆ ಬೆಲೆ ಏರಿಕೆಗನುಗುಣವಾಗಿ ವೇತನ ಸ್ವಯಂಚಾಲಿತವಾಗಿ ಪರಿಷ್ಕರಣೆಯಾಗುವ ವ್ಯವಸ್ಥೆ ಬರಬೇಕು ಎಂದು ಆಗ್ರಹಿಸಲಾಗಿದೆ.

7.ನಿವೃತ್ತರಿಗೂ ಒಂದು ಶ್ರೇಣಿ ಒಂದು ಪಿಂಚಣಿ

ಸೇವೆಯಲ್ಲಿರುವ ನೌಕರರ ವೇತನ ಹೆಚ್ಚಳವಾದಂತೆ, ಅದೇ ಅನುಪಾತದಲ್ಲಿ ನಿವೃತ್ತ ನೌಕರರ ಪಿಂಚಣಿಯೂ ಸಹ ಪರಿಷ್ಕರಣೆಯಾಗಬೇಕು ಎಂದು ಸಮಾನ ಪಿಂಚಣಿ (Pension Parity) ಮಾದರಿಯ ಬೇಡಿಕೆ ಇಡಲಾಗಿದೆ

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

LEAVE A REPLY

Please enter your comment!
Please enter your name here

Most Popular