ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಾದ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ (ಮನರೇಗಾ) ಹೆಸರು ಬದಲಾವಣೆ ದೇಶದಲ್ಲಿ ಭಾರೀ ಚರ್ಚೆಯ ವಿಚಾರ. ಈ ಹೆಸರು ಬದಲಾವಣೆಗೆ ಕಾಂಗ್ರೆಸ್ ತೀವ್ರ ವಿರೋಧ ವ್ಯಕ್ತಪಡಿಸುತ್ತಿದೆ.
ಈಗ ರಾಜ್ಯದ ಎಲ್ಲಾ ಜಿಲ್ಲಾ ಪಂಚಾಯತಿಗಳ ಮುಖ್ಯಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಗ್ರಾಮೀಣಾಭಿವೃದ್ಧಿ ಆಯುಕ್ತಾಲಯ ಪತ್ರವೊಂದನ್ನು ಬರೆದಿದೆ. ಕೇಂದ್ರ ಗ್ರಾಮೀಣಾಭಿವೃದ್ಧಿ ಮಂತ್ರಾಲಯದ ಅಧಿಕಾರಿಗಳ ತಂಡವು ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಅನುಷ್ಠಾನಗೊಳಿಸಲಾಗಿರುವ ಕಾಮಗಾರಿಗಳನ್ನು ಪರಿಶೀಲಿಸಿ ಸಲ್ಲಿಸಿರುವ ಅನುಪಾಲನಾ ವರದಿ ಕುರಿತು ಎಂಬ ವಿಷಯವನ್ನು ಪತ್ರ ಒಳಗೊಂಡಿದೆ.
ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ಕೇಂದ್ರ ಗ್ರಾಮೀಣಾಭಿವೃದ್ಧಿ ಮಂತ್ರಾಲಯದ ಅಧಿಕಾರಿಗಳ ತಂಡವು ವಿವಿಧ ಜಿಲ್ಲೆಗಳಿಗೆ ಭೇಟಿ ನೀಡಿ ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಅನುಷ್ಠಾನಗೊಳಿಸಿದ ಕಾಮಗಾರಿಗಳು ಹಾಗೂ ಕಡತಗಳನ್ನು ಪರಿಶೀಲಿಸಿ ವರದಿಗಳನ್ನು ಸಲ್ಲಿಸಿರುತ್ತಾರೆ.
ಮಂದುವರೆದು, ಕೇಂದ್ರ ಗ್ರಾಮೀಣಾಭಿವೃದ್ಧಿ ಮಂತ್ರಾಲಯದವರ ವರದಿಯಲ್ಲಿನ ಮುಖ್ಯ ಅಂಶಗಳು ಈ ಕೆಳಕಂಡಂತಿದೆ ಎಂದು ಹೇಳಿದೆ.
* ಕಾಮಗಾರಿಗಳ ಹೆಸರು ಮತ್ತು ಕಾಮಗಾರಿ ವರ್ಗೀಕರಣವನ್ನು ತಪ್ಪಾಗಿ ಆಯ್ಕೆ ಮಾಡಿರುವುದು.
* ಕಾಮಗಾರಿಗಳಲ್ಲಿ ನಾಗರಿಕ ಮಾಹಿತಿ ಫಲಕ ಅಳವಡಿಸದೇ ಇರುವುದು ಅಥವಾ ದುಸ್ಥಿತಿಯಲ್ಲಿರುವುದು.
* ಅನುಷ್ಠಾನ ಇಲಾಖೆಗಳ ಕಾಮಗಾರಿಗಳನ್ನು ಕಡ್ಡಾಯವಾಗಿ ಗ್ರಾಮ ಪಂಚಾಯತಿಯ ವಾರ್ಷಿಕ ಕ್ರಿಯಾ ಯೋಜನೆಯಲ್ಲಿ ಅಳವಡಿಸದೇ, ಗ್ರಾಮ ಸಭೆಯಲ್ಲಿ ಮಂಡಿಸದೇ ಇರುವುದು.
* ಒಬ್ಬ ಫಲಾನುಭವಿಗೆ ಹಲವಾರು ವರ್ಷ ವೈಯಕ್ತಿಕ ಸೌಲಭ್ಯ ಒದಗಿಸಿರುವುದು.
* SECURE ತಂತ್ರಾಂಶದ ಮೂಲಕ estimate ಸೃಜನೆ ಮಾಡುವುದನ್ನು ತಪ್ಪಿಸಲು, ಒಗ್ಗೂಡಿಸುವಿಕೆಯಡಿ ಕಾಮಗಾರಿಗಳನ್ನು MIS ನಲ್ಲಿ ದಾಖಲಿಸಿರುವುದು.
* ವಿವರವಾದ estimate ಪ್ರತಿ ಗ್ರಾಮ ಸಭಾ ನಡವಳಿ ಪ್ರತಿ ಸಾಮಗ್ರಿಗಳ ನಿರ್ಮಾಣಕ್ಕೆ ಬಳಸಲಾದ ಬಿಲ್ ಪ್ರುತಿ ಮತ್ತು ಕಾಮಗಾರಿ ಪ್ರಾರಂಭ ಮುನ್ನ ಛಾಯಚಿತ್ರಗಳ ಪ್ರತಿಗಳು ಭೌತಿಕ ಕಡತದಲ್ಲಿ ದಾಖಲಿಸದೇ ಇರುವುದು.
* ಮಾರ್ಗಸೂಚಿಗಳ ಪ್ರಕಾರ ಕಾಮಗಾರಿಗಳು ಅನುಷ್ಠಾನಗೊಳ್ಳದಿರುವುದು.
* ತೆರೆದ ಬಾವಿಗಳನ್ನು ಅನುಷ್ಠಾನಿಸುವ ಮುನ್ನ, ಜಲವಿಜ್ಞಾನ (Hydrogeological survey) ಸಮೀಕ್ಷೆ ನಡೆಸದಿರುವುದು.
* ತೆರೆದ ಬಾವಿಗಳ ನಿರ್ಮಾಣಕ್ಕಾಗಿ- ಜಿಯೋಸೋಷಿಯಲ್ ತಂತ್ರಜ್ಞಾನವನ್ನು ಬಳಸಿಕೊಂಡು ಯೋಜನೆ ಮಾಡುವಾಗ ದಿಶಾಂಕ್ (ಭೂ ದಾಖಲೆಗಳನ್ನು ಪರಿಶೀಲಿಸಲು) ಮೊಬೈಲ್ ಅಪ್ಲಿಕೇಶನ್ ಅನ್ನು ಬಳಸದಿರುವುದು.
* ಸಿವಿಲ್ ಕಾಮಗಾರಿಗಳಾದ ರಸ್ತೆ, ಚರಂಡಿ ಕಟ್ಟಡಗಳು, ಶೌಚಾಲಯಗಳು, ಕಸ ವಿಂಗಡಣೆ ಘಟಕ, ಗ್ರಾಮೀಣ ಸಂತೆ ಇತ್ಯಾದಿಗಳ ಕಾಮಗಾರಿ ನಕ್ಷೆ ವಿನ್ಯಾಸ ಇತ್ಯಾದಿಗಳನ್ನು ಕಡತದಲ್ಲಿ ನಿರ್ವಹಿಸದೇ ಇರುವುದು.
* ಕಡತದಲ್ಲಿ ಅನುಮೋದಿತ ಕ್ರಿಯಾ ಯೋಜನೆ, ಗ್ರಾಮ ಸಭಾ ನಡವಳಿ, ಅಳತೆ ಪುಸ್ತಕ, ಸಾಮಾ ಖರೀದಿ, ಬಿಲ್ಟ್ ಗಳು ಇತ್ಯಾದಿ ದಾಖಲೆಗಳ ನಿರ್ವಹಣೆ ಸಮರ್ವಕವಾಗಿ ನಿರ್ವಹಿಸದೇ ಇರುವುದು.
* ಚೆಕ್ ಮೆಷರ್‌ಮೆಂಟ್, ಕಾಮಗಾರಿಗಳ ವರ್ಗೀಕರಣ, ಗ್ರಾಮ ಸಭೆಯಲ್ಲಿ ಅನುಮೋದನೆ ಪಡೆದ ಕಾಮಗಾರಿಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ ಎಂಬುದನ್ನು. ತಾಲೂಕು ಮಟ್ಟದಲ್ಲಿ ಕಾಮಗಾರಿ ಅನುಮೋದನೆ ನೀಡುವ ಸಂದರ್ಭದಲ್ಲಿ ಪರಿಶೀಲಿಸದೇ ಇರುವುದು.
ಸದರಿ ಅಂಶಗಳು ಎಲ್ಲಾ ಎಲ್ಲಾ ಜಿಲ್ಲೆಗಳಿಗೂ ಅನ್ವಯಿಸುವುದರಿಂದ, ಕಾಮಗಾರಿಗಳನ್ನು ಕೈಗೊಳ್ಳುವಾಗ ನರೇಗಾ ಮಾರ್ಗಸೂಚಿಗಳ ಅನ್ವಯ ಯಾವುದೇ ಲೋಪ ದೋಷಗಳಾಗದಂತ ಅನುಷ್ಠಾನಗೊಳಿಸಲು ಈ ಮೂಲಕ ತಿಳಿಸಿದೆ ಎಂದು ಪತ್ರದಲ್ಲಿ ಹೇಳಿದೆ.

