ಬೆಂಗಳೂರು: ಜಾಗತಿಕ ಮಾರುಕಟ್ಟೆಯ ಏರಿಳಿತ ಹಾಗೂ ಮಧ್ಯಪ್ರಾಚ್ಯದ ಉದ್ವಿಗ್ನತೆಯ ನಡುವೆಯೂ, ವಾರದ ಆರಂಭದಲ್ಲೇ ಬೆಂಗಳೂರಿನಲ್ಲಿ ಚಿನ್ನದ ಬೆಲೆ ಗಣನೀಯವಾಗಿ ಇಳಿಕೆಯಾಗಿದೆ. ಇಸ್ರೇಲ್ ಅಮೆರಿಕಾ ಮತ್ತು ಇರಾನ್ ನಡುವಿನ ಸಂಘರ್ಷದ ಪರಿಣಾಮ ಜಾಗತಿಕ ಮಟ್ಟದಲ್ಲಿ ತಲ್ಲಣ ಸೃಷ್ಟಿಸಿದ್ದು ಇದರ ನೇರ ಪ್ರಭಾವ ಭಾರತೀಯ ಷೇರು ಮಾರುಕಟ್ಟೆ ಹಾಗೂ ಬಂಗಾರದ ಬೆಲೆಗಳ ಮೇಲೆ ಬೀರಿದೆ.
ಯುದ್ಧದ ಭೀತಿಯಿಂದಾಗಿ ಜಾಗತಿಕ ಹಣಕಾಸು ಮಾರುಕಟ್ಟೆಯಲ್ಲಿ ಅಸ್ಥಿರತೆ ಉಂಟಾಗಿದೆ.ಭಾರತೀಯ ಷೇರು ಮಾರುಕಟ್ಟೆಯಲ್ಲಿ ನಿಫ್ಟಿ 24,000 ಅಂಕಗಳಿಗಿಂತ ಕೆಳಕ್ಕೆ ಕುಸಿದಿರುವುದು ಹೂಡಿಕೆದಾರರಲ್ಲಿ ಆತಂಕ ಮೂಡಿಸಿದೆ.ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿದಿದ್ದು, ದಿನದ ವಹಿವಾಟಿನಲ್ಲಿ ₹113.40 ರಿಂದ ₹124.00 ರವರೆಗೆ ತೀವ್ರ ಏರಿಳಿತ ಕಂಡಿದೆ.
ಇಂದಿನ 24 ಕ್ಯಾರೆಟ್ ಚಿನ್ನದ ದರ ಪಟ್ಟಿ
1 ಗ್ರಾಂ ಚಿನ್ನ: ₹16,168
10 ಗ್ರಾಂ ಚಿನ್ನ :₹1,61,680
100 ಗ್ರಾಂ ಚಿನ್ನ:₹16,16,800
ಭಾರತದ ವಿವಿಧ ನಗರಗಳಲ್ಲಿ ಇಂದಿನ 24 ಕ್ಯಾರೆಟ್ (24K) ಚಿನ್ನದ ಬೆಲೆ (1 ಗ್ರಾಂಗೆ):
ಚೆನ್ನೈ: ₹16,309
ದೆಹಲಿ: ₹16,183
ಅಹಮದಾಬಾದ್: ₹16,173
ವಡೋದರಾ: ₹16,173
ಬೆಂಗಳೂರು: ₹16,168
ಮುಂಬೈ: ₹16,168
ಕೋಲ್ಕತ್ತಾ: ₹16,168
ಹೈದರಾಬಾದ್: ₹16,168
ಪುಣೆ: ₹16,168
ಕೇರಳ: ₹16,168

