HomeLifestyleಹಣಕ್ಕಿಂತ ಫ್ಯಾಮಿಲಿ ಮತ್ತು ಫ್ರೀಡಂ ಮುಖ್ಯ: ಗೂಗಲ್ ಕೆಲಸ ತೊರೆದ ಮಹಿಳೆಯ ಮಾತು ಈಗ ಸೋಶಿಯಲ್...

ಹಣಕ್ಕಿಂತ ಫ್ಯಾಮಿಲಿ ಮತ್ತು ಫ್ರೀಡಂ ಮುಖ್ಯ: ಗೂಗಲ್ ಕೆಲಸ ತೊರೆದ ಮಹಿಳೆಯ ಮಾತು ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್

ತನು ಪುರಿ ಅವರು ಗೂಗಲ್‌ನಲ್ಲಿ ‘ಪ್ರಿನ್ಸಿಪಾಲ್ ಅನಾಲಿಟಿಕಲ್ ಲೀಡ್’ ಆಗಿ ಕಾರ್ಯನಿರ್ವಹಿಸುತ್ತಿದ್ದರು. ವೃತ್ತಿಜೀವನದಲ್ಲಿ ಅತ್ಯಂತ ವೇಗವಾಗಿ ಪ್ರಗತಿ ಸಾಧಿಸಿದ್ದರೂ, ಅವರಿಗೆ ಸದಾ ಒಂದು ರೀತಿಯ ಅತೃಪ್ತಿ ಕಾಡುತ್ತಿತ್ತು. ಕೇವಲ ಸಂಬಳದಿಂದ ಶ್ರೀಮಂತರಾಗಬಹುದು ಆದರೆ ನಿಜವಾದ ಆರ್ಥಿಕ ಸ್ವಾತಂತ್ರ್ಯ (Financial Freedom) ಗಳಿಸಲು ಸಾಧ್ಯವಿಲ್ಲ ಎಂಬುದು ಅವರ ಬಲವಾದ ನಂಬಿಕೆಯಾಗಿತ್ತು.

ಅವರು ಈ ನಿರ್ಧಾರ ತೆಗೆದುಕೊಳ್ಳಲು ಮೂರು ಮುಖ್ಯ ಕಾರಣಗಳನ್ನು ನೀಡಿದ್ದಾರೆ:

೧. ರಜೆಗೂ ಬೇಕಿತ್ತು ಅನುಮತಿ: ಕೈತುಂಬಾ ಸಂಬಳವಿದ್ದರೂ, ಕೇವಲ ಎರಡು ವಾರಗಳ ಕಾಲ ರಜೆಗೆ ಹೋಗಬೇಕೆಂದರೂ ಕಂಪನಿಯ ಅನುಮತಿಗಾಗಿ ಕಾಯಬೇಕಿತ್ತು. ಈ ‘ಕಾರ್ಪೊರೇಟ್ ಸಂಸ್ಕೃತಿ’ ತಮ್ಮನ್ನು ಕಟ್ಟಿಹಾಕುತ್ತಿದೆ ಎಂದು ಅವರಿಗೆ ಅನಿಸತೊಡಗಿತು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

೨. ಅಮೆರಿಕದ ವೀಸಾ ಕಿರಿಕಿರಿ: ಅಮೆರಿಕದಲ್ಲಿ ವಾಸಿಸುವ ಬಹುತೇಕ ಭಾರತೀಯ ಟೆಕ್ಕಿಗಳನ್ನು ಕಾಡುವ ಎಚ್‌-1ಬಿ (H-1B) ವೀಸಾ ಆತಂಕ ಮತ್ತು ಇಮಿಗ್ರೇಷನ್ ನಿಯಮಗಳು ಇವರನ್ನೂ ಬಿಟ್ಟಿರಲಿಲ್ಲ. ಸದಾ ಕಾಲ ವೀಸಾ ಅನಿಶ್ಚಿತತೆಯಲ್ಲೇ ಬದುಕುವುದು ಇವರಿಗೆ ಇಷ್ಟವಿರಲಿಲ್ಲ.

https://www.instagram.com/reel/DUN28itkWXb/?utm_source=ig_web_copy_link&igsh=NTc4MTIwNjQ2YQ==

೩. ಕುಟುಂಬದಿಂದ ದೂರ: ಅಮೆರಿಕದಲ್ಲಿದ್ದಾಗ ತಮ್ಮ ಪೋಷಕರಿಂದ ಸಾವಿರಾರು ಮೈಲಿ ದೂರವಿರಬೇಕಿತ್ತು. ಆದರೆ ದುಬೈನಲ್ಲಿ ಅವರ ಪೋಷಕರು ಮೊದಲೇ ನೆಲೆಸಿದ್ದರಿಂದ, ತಮ್ಮ ಮಗುವಿನ ಪಾಲನೆಗೆ ಕುಟುಂಬದ ಬೆಂಬಲ ಸಿಗುತ್ತದೆ ಎಂಬ ಉದ್ದೇಶದಿಂದ ಅವರು ದುಬೈ ಆಯ್ದುಕೊಂಡರು.

ದುಬೈನಲ್ಲಿರುವ ತೆರಿಗೆ ಮುಕ್ತ ವಾತಾವರಣ ಮತ್ತು ಉದ್ಯಮಶೀಲತೆಗೆ ಇರುವ ಅವಕಾಶಗಳು ತನು ಪುರಿ ಅವರನ್ನು ಆಕರ್ಷಿಸಿವೆ. ಕೇವಲ ಸಂಬಳದ ಮೇಲೆ ಅವಲಂಬಿತರಾಗುವ ಬದಲು, ಸ್ವಂತ ಉದ್ಯಮ ಅಥವಾ ಇತರ ಹೂಡಿಕೆಗಳ ಮೂಲಕ ಸಂಪತ್ತನ್ನು ವೃದ್ಧಿಸಿಕೊಳ್ಳುವುದು ಅವರ ಈಗಿನ ಗುರಿಯಾಗಿದೆ. “ನಾನು ಗೂಗಲ್‌ನಲ್ಲಿ ಕಳೆದ ಸಮಯವನ್ನು ಪ್ರೀತಿಸುತ್ತೇನೆ, ಆದರೆ ನನಗೆ ಬೇಕಾಗಿದ್ದು ಕೇವಲ ಬೆಳವಣಿಗೆಯಲ್ಲ, ಆರ್ಥಿಕ ಸ್ವಾತಂತ್ರ್ಯ” ಎಂದು ಅವರು ತಮ್ಮ ಇನ್‌ಸ್ಟಾಗ್ರಾಮ್ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular