HomeLatest Newsಸಚಿವ ಸತೀಶ್ ಜಾರಕಿಹೊಳಿ ಭೇಟಿ ಬಗ್ಗೆ ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದ್ದೇನು?

ಸಚಿವ ಸತೀಶ್ ಜಾರಕಿಹೊಳಿ ಭೇಟಿ ಬಗ್ಗೆ ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದ್ದೇನು?

ಬೆಂಗಳೂರು: ಉಪಚುನಾವಣೆ ಬಳಿಕ ಕಾಂಗ್ರೆಸ್ ನಲ್ಲಿ ನಡೆಯುತ್ತಿರುವ ಕೆಲ ಬೆಳವಣಿಗೆಗಳ ವಿಚಾರವಾಗಿ ಸಚಿವ ಸತೀಶ್ ಜಾರಕಿಹೊಳಿ ಇಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿಯಾಗಿ ಡ್ಯಾಮೇಜ್ ಕಂಟ್ರೋಲ್ ಬಗ್ಗೆ ಮಾತುಕತೆ ನಡೆಸಿದರು. ಈ ವೇಳೆ ಸುದ್ದಿಗಾಅರರೊಂದಿಗೆ ಮಾತನಾಡಿದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ನಮ್ಮಲ್ಲಿ ಯಾವ ಬಣವೂ ಇಲ್ಲ ಅನಗತ್ಯವಾಗಿ ಮಾಧ್ಯಮದವರೇ ಸಿದ್ದರಾಮಯ್ಯ ಬಣ, ಗುಂಪು, ಡಿ.ಕೆ.ಶಿವಕುಮಾರ್ ಬಣ, ಗುಂಪು ಎಂದು ಸೃಷ್ಟಿ ಮಾಡುತ್ತಿದ್ದೀರಿ. ನನಗೆ ಎಲ್ಲಾ 135 ಶಾಸಕರು ನಮ್ಮವರೇ ಎಂದು ತಿಳಿಸಿದರು. ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

ಸತೀಶ್ ಜಾರಕಿಹೊಳಿ ಇಂದು ನಮ್ಮನ್ನು ಭೇಟಿಯಾಗಿದ್ದಾರೆ. ರೋಡ್ ಬಗ್ಗೆ ಮಾತಾಡಿದ್ದು, ನೆಲ ಮಂಗಲದಲ್ಲಿ ಸಮಸ್ಯೆ ಆಗ್ತಿದೆ ಎಂದಿದ್ದಾರೆ. ಎರಡನೇದಾಗಿ ರಾಜಕಾರಣದ ಬಗ್ಗೆ ಮಾತಾಡಿದ್ದೇವೆ. ರಾಜ್ಯದ ಅಭಿವೃದ್ಧಿ, ಪಕ್ಷದ ಅಭಿವೃದ್ಧಿಗೆ ಏನು ಬೇಕು ಎನ್ನುಬ ಬಗ್ಗೆ ಚರ್ಚೆ ನಡೆಸಿದ್ದೇವೆ ಎಂದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಇದೇ ವೇಳೆ ಕಾಂಗ್ರೆಸ್​ ಮುಸ್ಲಿಂ ನಾಯಕರ ವಿರುದ್ಧ ಹೈಕಮಾಂಡ್ ಕ್ರಮ ಸಂಬಂಧ ಪ್ರತಿಕ್ರಿಯಿಸಿದ ಅವರು, ನನ್ನ ವೈಯಕ್ತಿಕ ವಿಚಾರ ಯಾವುದೂ ಇಲ್ಲ. ಎಲ್ಲವೂ ಪಾರ್ಟಿ ನಿರ್ಧಾರ, ಪಾರ್ಟಿಗೆ ತನ್ನದೇ ಆದ ವರದಿ ಇದೆ. ದೆಹಲಿ ನಾಯಕರ ಸೂಚನೆ ಮೇರೆಗೆ ಕ್ರಮ ತೆಗೆದುಕೊಳ್ಳಬೇಕಾಗುತ್ತೆ. ಎಲ್ಲರೂ ನನ್ನ ಮೇಲೆ ಹೇಳಬಹುದು, ಅದರ ಬಗ್ಗೆ ನನಗೆ ಚಿಂತೆ ಇಲ್ಲ. ಪಕ್ಷದ ಶಿಸ್ತಲ್ಲಿ ನಾವು ಕೆಲಸ ಮಾಡಬೇಕಾಗುತ್ತದೆ. ಎಲ್ಲಾ ವರ್ಗಕ್ಕೆ ನ್ಯಾಯ ಕೊಡುವುದಕ್ಕೆ ಇರೋದೆ ಕಾಂಗ್ರೆಸ್ ಪಕ್ಷ ಎಂದು ತಿಳಿಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular