HomeLive NewsBREAKING: ಮದುವೆಗೆ ಒಪ್ಪದ ವಿಚ್ಛೇದಿತ ಮಹಿಳೆಗೆ ಚಾಕು ಇರಿದು ಹತ್ಯೆ ಪ್ರಕರಣ: ನೇಣು ಬಿಗಿದುಕೊಂಡು ಆತ್ಮಹತ್ಯೆಗೆ...

BREAKING: ಮದುವೆಗೆ ಒಪ್ಪದ ವಿಚ್ಛೇದಿತ ಮಹಿಳೆಗೆ ಚಾಕು ಇರಿದು ಹತ್ಯೆ ಪ್ರಕರಣ: ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಆರೋಪಿ

ಕಾರವಾರ: ಮದುವೆಗೆ ಒಪ್ಪದ ವಿಚ್ಛೇದಿತ ಮಹಿಳೆಯನ್ನು ಚಾಕು ಇರಿದು ಬರ್ಬರವಾಗಿ ಹತ್ಯೆ ಮಾಡಿದ್ದ ಆರೋಪಿ ತಾನೂ ಕೂಡ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದಲ್ಲಿ ನಡೆದಿದೆ.

ಯಲ್ಲಾಪುರ ನಿವಾಸಿ ರಂಜಿತಾ (30) ಎಂಬ ಮಹಿಳೆಯ ಹಿಂದೆ ಬಿದ್ದಿದ್ದ ಮುಸ್ಲಿಂ ಯುವಕ ರಫೀಕ್, ತನ್ನನ್ನು ಮದುವೆಯಾಗುವಂತೆ ಒತ್ತಾಯಿಸುತ್ತಿದ್ದ. ರಂಜಿತಾ ಮದುವೆಗೆ ಒಪ್ಪಿಲ್ಲ. ಇದರಿಂದ ನಿನ್ನೆ ನಡುರಸ್ತೆಯಲ್ಲಿಯೇ ರಂಜಿತಾಳಿಗೆ ಚಾಕು ಇರಿದು ಬರ್ಬರವಾಗಿ ಹತ್ಯೆ ಮಾಡಿ ಪರಾರಿಯಾಗಿದ್ದ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಘಟನೆಯನ್ನು ತೀವ್ರವಾಗಿ ಖಂಡಿಸಿದ್ದ ಹಿಂದೂಪರ ಸಂಘಟನೆಗಳು ಆರೋಪಿಯನ್ನು ಬ್ತಕ್ಷಣ ಬಂಧಿಸಿ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಇಂದು ಯಲ್ಲಾಪುರ ಬಂದ್ ಗೆ ಕರೆ ಕೊಟ್ಟಿದ್ದವು. ಈ ಬೆಳವಣಿಗೆ ನಡುವೆ ಮಹಿಳೆ ಕೊಂದು ಪರಾರ್ಯಾಗಿದ್ದ ಆರೋಪಿ ರಫೀಕ್ ಆತ್ಮಹತ್ಯೆಗೆ ಶರಣಾಗಿದ್ದಾನೆ.

ಯಲ್ಲಾಪುರದ ಕಾಳಮ್ಮನಗರದ ನಿವಾಸದಲ್ಲಿ ರಫೀಕ್ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆರೋಪಿ ಪತ್ತೆಗಾಗಿ ಶ್ವಾನದಳದೊಂದ್ಗೆ ಇಂದು ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾಗ ಆರೋಪಿ ಶವವಾಗಿ ಪತ್ತೆಯಾಗಿದ್ದಾನೆ.

ವಿಚ್ಛೇದಿತ ಮಹಿಳೆ ರಂಜಿತಾಳಿಗೆ ರಫೀಕ್ ತನ್ನನ್ನು ಮದುವೆಯಾಗುವಂತೆ ಪದೇ ಪದೇ ಸತಾಯಿಸುತ್ತಿದ್ದ. ರಂಜಿತಾಳಿಗೆ ಹತ್ತು ವರ್ಷಗಳ ಹಿಂದೆ ಪತಿ ವಿಚ್ಛೇಧನ ನೀಡಿದ್ದ. ಒಂದು ಮಗು ಕೂಡ ಇದೆ. ಯಲಾಪುರದಲ್ಲಿ ತಂದೆ-ತಾಯಿ ಹಾಗೂ ಅಣ್ಣನ ಜೊತೆ ವಾಸವಾಗಿದ್ದರು. ಸರ್ಕಾರಿ ಶಾಲೆಯೊಂದರಲ್ಲಿ ಬಿಸಿಯೂಟ ಸಹಾಯಕಿಯಾಗಿ ಕೆಲಸ ಮಾಡುತ್ತಿದ್ದರು.

ರಂಜಿತಾ ಕುಟುಂಬಕ್ಕೆ ರಫೀಕ್ ಕುಟುಂಬ ಪರಿಚಯವಿತ್ತು. ರಫೀಕ್ ಆಗಾಗ ರಂಜಿತಾಳ ಮನೆಗೂ ಬಂದು ಹೋಗುತ್ತಿದ್ದ. ರಂಜಿತಾಳನ್ನು ಪ್ರೀತಿಸುತ್ತಿದ್ದ ರಫೀಕ್, ತನ್ನನ್ನು ಮದುವೆಯಾಗುವಂತೆ ಒತ್ತಾಯಿಸಿದ್ದ. ಆದರೆ ರಂಜಿತಾ ಒಪ್ಪಿರಲಿಲ್ಲ. ಕೆಲ ದಿನಗಳಿಂದ ರಫೀಕ್ ರಂಜಿತಾಳಿಗೆ ತನ್ನನ್ನು ಮದುವೆಯಾಗಲೇಬೇಕು ಎಂದು ಬಲವಂತ ಮಡಿದ್ದ. ಇದಕ್ಕೆ ರಂಜಿತಾ ಮದುವೆಯಾಗಲ್ಲ ಎಂದು ಸ್ಪಷ್ಟವಾಗಿ ನಿರಾಕರಿಸಿದ್ದರು. ಈಗಾಗಲೇ ತಾನು ಮದುವೆಯಾಗಿ ಅನುಭವಿಸಿದ ನೋವು, ಸಂಕಷ್ಟಗಳೇ ಸಾಕು. ಮತ್ತೆ ಮದುವೆಯಾಗಲ್ಲ ಎಂದಿದ್ದರು.

ಇಂದು ಎಂದಿನಂತೆ ಶಾಲೆಯಿಂದ ಮನೆಗೆ ಹೋಗುತ್ತಿದ್ದ ರಂಜಿತಾಳನ್ನು ರಸ್ತೆ ಮಧ್ಯೆಯೇ ರಫೀಕ್ ಅಡ್ಡಗಟ್ಟಿದ್ದಾನೆ. ನನ್ನನ್ನು ಮದುವೆಯಾಗುತ್ತಿಯೋ ಇಲ್ಲವೋ? ಎಂದು ಮತ್ತೆ ಪ್ರಶ್ನಿಸಿದ್ದಾನೆ. ರಂಜಿತಾ ತಾನು ಮದುವೆಯಾಗಲ್ಲ ಎಂದು ಖಡಕ್ ಆಗಿ ಹೇಳಿದ್ದಾರೆ. ಇದರಿಂದ ಕೋಪಗೊಂಡ ರಫೀಕ್, ರಂಜಿತಾಳಿಗೆ ಚಾಕುವಿನಿಂದ ಮನಬಂದಂತೆ ಇರಿದು ಪರಾರಿಯಾಗಿದ್ದಾನೆ. ರಕ್ತದ ಮದುವಲ್ಲಿ ಬಿದ್ದಿದ್ದ ರಂಜಿತಾಳನ್ನು ಸ್ಥಳೀಯರು ತಕ್ಷಣ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ರಂಜಿತಾ ಸಾವನ್ನಪ್ಪಿದ್ದಾರೆ. ಈಗ ರಂಜಿತಾಳನ್ನು ಕೊಲೆಗೈದ ಆರೋಪಿ ಕೂಡ ಆತ್ಮಹತ್ಯೆಗೆ ಶರಣಾಗಿದ್ದಾನೆ.

For Latest News Updates, Join Our Whatsapp Community🚩
RELATED ARTICLES

Most Popular