HomeKarnatakaBREAKING: ಸಂತಾನಹರಣ ಶಸ್ತ್ರಚಿಕಿತ್ಸೆ ವೇಳೆ ಮಹಿಳೆ ಹೃದಯಾಘಾತದಿಂದ ಸಾವು

BREAKING: ಸಂತಾನಹರಣ ಶಸ್ತ್ರಚಿಕಿತ್ಸೆ ವೇಳೆ ಮಹಿಳೆ ಹೃದಯಾಘಾತದಿಂದ ಸಾವು

ಚಿಕ್ಕಬಳ್ಳಾಪುರ: ಇತ್ತೀಚಿನ ದಿನಗಳಲ್ಲಿ ಹೃದಯಾಘಾತಕ್ಕೆ ಬಲಿಯಾಗುತ್ತಿರುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಸಂತಾನಹರಣ ಶಸ್ತ್ರಚಿಕಿತ್ಸೆ ವೇಳೆ ಮಹಿಳೆಯೊಬ್ಬರು ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ.

ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲೂಕಿನ ತಾಲೂಕು ಆಸ್ಪತ್ರೆಯಲ್ಲಿ ಈ ದುರಂತ ಸಂಭವಿಸಿದೆ. ಆಂಧ್ರಪ್ರದೇಶದ ಅನಂತಪುರ ಮೂಲದ ಮಹಿಳೆ ಸಿಂಧೂ ಮ್ರ‍ಿತ ದುರ್ದೈವಿ. ಸಂತಾನಹರಣ ಶಸ್ತ್ರಚಿಕಿತ್ಸೆಗೆಂದು ಗುಡಿಬಂಡೆ ತಾಲೂಕು ಆಸ್ಪತ್ರೆಗೆ ದಾಖಲಾಗಿದ್ದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಮಹಿಳೆಗೆ ಆಪರೇಷನ್ ಮಾಡಬೇಕು ಎನ್ನುವಷ್ಟರಲ್ಲಿ ಹೃದಯಾಘಾತ ಸಂಭವಿಸಿ ಮಹಿಳೆ ಮೃತಪಟ್ಟಿದ್ದಾರೆ. ಅನಸ್ತೇಷಿಯಾ ನೀಡಿದ ಬಳಿಕ ಮಹಿಳೆಗೆ ಹೃದಯಘಾತವಾಗಿದೆ ಎನ್ನಲಾಗಿದೆ. ಅನಸ್ತೇಷಿಯಾ ಡೋಸ್ ಹೆಚ್ಚಾಗಿದ್ದರಿಂದಲೇ ಮಹಿಳೆ ಮೃತಪಟ್ಟಿದ್ದು, ತಾಲೂಕು ಆಸ್ಪತ್ರೆಯ ವೈದ್ಯರ ವಿರುದ್ಧ ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಆಸ್ಪತ್ರೆ ವೈದ್ಯರ ನಿರ್ಲಕ್ಷವೇ ದುರಂತಕ್ಕೆ ಕಾರಣ ಎಂದು ಪ್ರತಿಭಟನೆ ನಡೆಸಿದ್ದಾರೆ. ವೈದ್ಯರ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ. ಗುಡಿಬಂಡೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಕೊಳೆತ ಸ್ಥಿತಿಯಲ್ಲಿದ್ದ ಶವ ಮಗನದ್ದೆಂದು ಅಂತ್ಯಕ್ರಿಯೆ ನೆರವೇರಿಸಿದ ಕುಟುಂಬ: ಗಂಡನ ಅಗಲಿಕೆಯಿಂದ ಕಣ್ಣೀರಿಡುತ್ತಿದ್ದ ಪತ್ನಿ ಮುಂದೆ ಜೀವಂತವಾಗಿ ಪ್ರತ್ಯಕ್ಷನಾದ ಪತಿ

ಭುವನೇಶ್ವರ: ಕೊಳೆತ ಸ್ಥಿತಿಯಲ್ಲಿದ್ದ ಅಪರಿಚಿತ ಶವವೊಂದನ್ನು ಕಾಣೆಯಾಗಿದ್ದ ಮಗನೆಂದು ತಿಳಿದು ಕುಟುಂಬಸ್ಥರು ಅಂತ್ಯಕ್ರಿಯೆ ನೆರವೇರಿಸಿದ್ದು, ಘಟನೆ ನಡೆದ ಒಂದು ತಿಂಗಳ ಬಳಿಕ ಮಗ ಪ್ರತ್ಯಕ್ಷನಾಗಿರುವ ಘಟನೆ ಒಡಿಶಾದಲ್ಲಿ ನಡೆದಿದೆ.

ಒಡಿಶಾದ ಧೆಂಕನಾಲ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಸನಾತನ್ ನಾಯಕ್ ಎಂಬ 29 ವರ್ಷದ ಮಗ ನಾಪತ್ತೆಯಾಗಿದ್ದ. ಕೊಳೆತ ಸ್ಥಿತಿಯಲ್ಲಿ ಮೃತದೇಹವೊಂದು ಪತ್ತೆಯಾಗಿದ್ದು, ಅದೇ ಮಗನ ಶವವಿರಬೇಕೆಂದು ಕುಟುಂಬದವರು ಭಾವಿಸಿದ್ದಾರೆ. ಅಲ್ಲದೇ ಸನಾತನ್ ನಾಯಕ್ ಪತ್ನಿ ಕೂಡ ಇದೇ ಗಂಡನ ಮೃತದೇಹವೆಂದುಕೊಂಡು ಅಂತ್ಯಕ್ರಿಯೆ ನೆರವೇರಿಸಿದಾರೆ.

ಅಂತ್ಯ ಸಂಸ್ಕಾರ, ಸಾಂಪ್ರದಾಯಿಕ ಶ್ರಾದ್ಧ ಹಾಗೂ ಉತ್ತರಕ್ರಿಯೆಗಳು ನೆರವೇರಿ ಸುಮಾರು ಒಂದು ತಿಂಗಳ ನಂತರ ವ್ಯಕ್ತಿ ಜೀವಂತವಾಗಿ ಮನೆಗೆ ಬಂದಿದ್ದಾನೆ. ಪತಿ ಅಗಲಿಕೆಯಿಂದ ಕಣ್ಣೀರಿಡುತ್ತಿದ್ದ ಪತ್ನಿ ಹಾಗೂ ಕುಟುಂಬದವರು ಸಾವನ್ನಪ್ಪಿದ್ದಾನೆಂದು ತಿಳಿದು ಅಂತ್ಯಕ್ರಿಯೆ ನೆರವೇಸಿದ್ದ ವ್ಯಕ್ತಿ ಮರಳು ಬಂದಿರುವುದನ್ನು ಕಂಡು ಅರೆ ಸ್ಕ್ಷಣ ದಿಗ್ಭ್ರಾಂತರಾದರೂ ಜೀವಂತವಾಗಿ ವಾಪಸಾಗುತ್ತಿದ್ದಂತೆ ಕುಟುಂಬಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ.

ಆದರೆ ಅಂದು ಕುಟುಂಬದವರು ದಹನ ಮಾಡಿದ್ದು ಯಾರ ಮೃತದೇಹವನ್ನು ಎಂಬ ಪ್ರಶ್ನೆ ಈಗ ಸ್ಥಳೀಯ ಪೊಲೀಸರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.

ಧೆಂಕನಾಲ್‌ನ ನಿವಾಸಿ ಸನಾತನ್ ನಾಯಕ್ ಜುಲೈ 27 ರಂದು ಸೈಕಲ್‌ನಲ್ಲಿ ಮನೆಯಿಂದ ಹೊರಟವನು ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದ. ಕುಟುಂಬಸ್ಥರು ಸಂಬಂಧಿಕರ ಮನೆಗಳಲ್ಲಿ ಹುಡುಕಾಡಿದರೂ ಆತನ ಸುಳಿವು ಸಿಕ್ಕಿರಲಿಲ್ಲ.

ಹತ್ತು ದಿನಗಳ ಬಳಿಕ ಸ್ಥಳೀಯ ಭತ್ತದ ಗದ್ದೆಯ ನೀರಿನಲ್ಲಿ ತೀವ್ರವಾಗಿ ಕೊಳೆತು ಗುರುತು ಸಿಗದ ಸ್ಥಿತಿಯಲ್ಲಿದ್ದ ಶವವೊಂದು ಪೊಲೀಸರಿಗೆ ಪತ್ತೆಯಾಗಿತ್ತು. ಮರಣೋತ್ತರ ಪರೀಕ್ಷೆಯ ಬಳಿಕ, ಆ ಮೃತದೇಹದ ಮೇಲಿದ್ದ ಪ್ಯಾಂಟ್-ಶರ್ಟ್ ನೋಡಿ ಅದು ಸನಾತನ್ ನಾಯಕ್‌ನದ್ದೇ ಎಂದು ಕುಟುಂಬಸ್ಥರು ನಂಬಿ ಸ್ವೀಕರಿಸಿದ್ದರು.

ಹಿಂದೂ ಸಂಪ್ರದಾಯದಂತೆ ಮೃತದೇಹದ ದಹನ ಸಂಸ್ಕಾರ ಮುಗಿಸಿ, ಕುಟುಂಬಸ್ಥರು 11 ದಿನಗಳ ಶುದ್ಧಿಕಾರ್ಯಗಳನ್ನು ಪೂರೈಸಿದ್ದರು. ಸನಾತನ್‌ನ ಪತ್ನಿ ವಿಧವೆಯಂತೆ ಶೋಕಾಚರಣೆಯಲ್ಲಿದ್ದು, ತೀವ್ರ ದುಃಖದಲ್ಲಿದ್ದಳು.

ಅಂತಿಮ ವಿಧಿವಿಧಾನಗಳು ಮುಗಿದು ಒಂದು ತಿಂಗಳು ಕಳೆಯುತ್ತಿದ್ದಂತೆ, ಸನಾತನ್ ನಾಯಕ್ ಸಮೀಪದ ಪಟ್ಟಣವೊಂದರಲ್ಲಿ ಜೀವಂತವಾಗಿ ಪತ್ತೆಯಾಗಿರುವುದಾಗಿ ಪೊಲೀಸರು ಕುಟುಂಬಕ್ಕೆ ಮಾಹಿತಿ ನೀಡಿದರು.

ಸಂಬಂಧಿಕರು ತಕ್ಷಣ ಧಾವಿಸಿ ಆತನನ್ನು ಮನೆಗೆ ಕರೆತಂದರು. ಸತ್ತನೆಂದು ನಂಬಿದ್ದ ಪತಿ ಮನೆಗೆ ಕಾಲಿಡುತ್ತಿದ್ದಂತೆ ಪತ್ನಿ ಹಾಗೂ ತಾಯಿ ಮಂಜು ನಾಯಕ್ ಅವರ ಆನಂದಭಾಷ್ಪ ಮುಗಿಲುಮುಟ್ಟಿತ್ತು. ಸನಾತನ್ ಇಷ್ಟುದಿನ ಎಲ್ಲಿಗೆ ಹೋಗಿದ್ದ, ಯಾಕೆ ಸಂಪರ್ಕಕ್ಕೆ ಸಿಗಲಿಲ್ಲ ಎಂಬುದು ಇನ್ನಷ್ಟೇ ಸ್ಪಷ್ಟವಾಗಬೇಕಿದೆ.

ಸನಾತನ್ ನಾಯಕ್ ಮನೆಗೆ ಮರಳಿದ ಬೆನ್ನಲ್ಲೇ ಗ್ರಾಮದಲ್ಲಿ ಹೊಸ ಆತಂಕ ಶುರುವಾಗಿದೆ. ಕುಟುಂಬವು ಅಂದು ಅಂತ್ಯಕ್ರಿಯೆ ನಡೆಸಿದ ಅಪರಿಚಿತ ವ್ಯಕ್ತಿ ಯಾರು? ಆತನದ್ದು ಕೊಲೆಯೋ ಅಥವಾ ಆಕಸ್ಮಿಕ ಸಾವೋ? ಎಂಬುದು ನಿಗೂಢವಾಗಿದೆ.

ಸಾಮಾನ್ಯವಾಗಿ ಗುರುತಿಸಲಾಗದ ಅಥವಾ ತೀವ್ರವಾಗಿ ಕೊಳೆತ ಶವಗಳು ಪತ್ತೆಯಾದಾಗ ವಿಧಿವಿಜ್ಞಾನ ಪ್ರಯೋಗಾಲಯದ ಮೂಲಕ ಡಿಎನ್‌ಎ ಪರೀಕ್ಷೆ ನಡೆಸಿ ಗುರುತು ದೃಢಪಡಿಸಿಕೊಳ್ಳುವುದು ಕಡ್ಡಾಯ. ಕೇವಲ ಬಟ್ಟೆಗಳ ಆಧಾರದ ಮೇಲೆ ಶವವನ್ನು ಹಸ್ತಾಂತರಿಸಿದ ಸ್ಥಳೀಯ ಪೊಲೀಸ್ ಮತ್ತು ಆಸ್ಪತ್ರೆ ಸಿಬ್ಬಂದಿಯ ನಡೆ ಬಗ್ಗೆ ಪ್ರಶ್ನೆಗಳು ಎದ್ದಿದ್ದು, ಪೊಲೀಸರು ಈಗ ಕಾಣೆಯಾದ ವ್ಯಕ್ತಿಗಳ ಪಟ್ಟಿಯನ್ನು ಮರುಪರಿಶೀಲಿಸುತ್ತಿದ್ದಾರೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular