HomeKarnatakaಸ್ಟಿಂಗ್ ವಿಚಾರದಲ್ಲಿ ಹೆಚ್.ಡಿ.ಕುಮಾರಸ್ವಾಮಿಗೆ ಯಾಕಿಷ್ಟು ಆತುರ? ಪ್ರಜ್ವಲ್ ಕೇಸ್ ನಲ್ಲಿಯೂ ಇಲ್ಲಸಲ್ಲದ ಆರೋಪ: ದಾಖಲೆಗಳಿದ್ದರೆ ಕೊಡಿ...

ಸ್ಟಿಂಗ್ ವಿಚಾರದಲ್ಲಿ ಹೆಚ್.ಡಿ.ಕುಮಾರಸ್ವಾಮಿಗೆ ಯಾಕಿಷ್ಟು ಆತುರ? ಪ್ರಜ್ವಲ್ ಕೇಸ್ ನಲ್ಲಿಯೂ ಇಲ್ಲಸಲ್ಲದ ಆರೋಪ: ದಾಖಲೆಗಳಿದ್ದರೆ ಕೊಡಿ ಎಂದ ಗೃಹ ಸಚಿವ

ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಭಾರಿ ಚರ್ಚೆಗೆ ಕಾರಣವಾಗಿರುವ ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧದ ಸ್ಟಿಂಗ್ ಆಪರೇಷನ್ ವಿಚಾರವಾಗಿ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಹಾಗೂ ಗೃಹ ಸಚಿವ ಪ್ರಿಯಾಂಕ್ ಖರ್ಗೆ ನಡುವೆ ಮಾತಿನ ಸಮರ ಮುಂದುವರೆದಿದೆ.

ಬೆಂಗಳೂರಿನಲ್ಲಿ ಮಾತನಾಡಿದ ಪ್ರಿಯಾಂಕ್ ಖರ್ಗೆ, ಹೆಚ್​​.ಡಿ. ಕುಮಾರಸ್ವಾಮಿ ಅವರು ಏನಾದ್ರೂ ಸಾಕ್ಷ್ಯಗಳಿದ್ದರೆ ಕೊಡಲಿ. ಹಿಟ್‌ ಆ್ಯಂಡ್​​ ರನ್‌ ಬೇಡ ಎಂದು ಹೇಳಿದ್ದಾರೆ. ಈ ಮೂಲಕ ಹೆಚ್​​ಡಿಕೆ ಆರೋಪಗಳಿಗೆ ಕೌಂಟರ್​​ ನೀಡಿರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಎಲ್ಲಾ ಆಯಾಮಗಳಲ್ಲೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಕೇಂದ್ರ ಸಚಿವ ಹೆಚ್‌ಡಿಕೆಗೆ ಸ್ಟಿಂಗ್ ವಿಚಾರದಲ್ಲಿ ಏಕೆ ಇಷ್ಟು ಆತುರ? ಪ್ರಜ್ವಲ್ ರೇವಣ್ಣ ಕೇಸ್‌ ಬಗ್ಗೆಯೂ ಹೆಚ್‌ಡಿಕೆ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ. ಆದರೆ ಮೋದಿ ಸರ್ಕಾರವೇ ಪೊಲೀಸರಿಗೆ ಮೆಡಲ್ ಕೊಟ್ಟಿದೆ. ಇದಕ್ಕೆ ಅವರು ಏನು ಹೇಳುತ್ತಾರೆ? ಎಂದು ಪ್ರಶ್ನಿಸಿದರು.

ನಿಮ್ಮ ಕೆಟ್ಟ ಕೆಲಸಗಳಿಗೆ ಪುರಸ್ಕಾರ ಸಿಗಲ್ಲ, ಅಂಟಿರುವ ಕಳಂಕ ಹೋಗಲ್ಲ. ಸತ್ಯಾಂಶ ಹೊರಬರುತ್ತೆ ಸ್ವಲ್ಪ ಕಾಯಿರಿ. ಸ್ಟಿಂಗ್ ಕೇಸ್‌ನಲ್ಲಿ ಪೊಲೀಸರು ಯಾವುದೇ ನಿಮಯ ಉಲ್ಲಂಘಿಸಿಲ್ಲ. ಯಾವುದೇ ಸುಳ್ಳು ಮಾಹಿತಿಯನ್ನು ಸೋರಿಕೆ ಮಾಡಿಲ್ಲ. ಎಲ್ಲರೂ ನಿಯಮಗಳಡಿಯೇ ಕೆಲಸ ಮಾಡಬೇಕಾಗುತ್ತೆ. ಕೇಂದ್ರ ಸಚಿವರಾಗಲಿ, ಯಾರೇ ಆಗಲಿ ಅಗತ್ಯವಿದ್ದರೆ ವಿಚಾರಣೆ ನಡೆಸ್ತೇವೆ. ಸಣ್ಣ ಸಾಕ್ಷ್ಯ ಸಿಕ್ಕದರೂ ಯಾರನ್ನೇ ಆಗಲಿ ಕರೆದು ವಿಚಾರಣೆ ಮಾಡುತ್ತೇವೆ. ಸ್ಟಿಂಗ್ ಪ್ರಕರಣದಲ್ಲೂ ಪೊಲೀಸರಿಗೆ ಅವಾರ್ಡ್ ಸಿಗುತ್ತೆ ಎಂದರು.

ಬಂಧಿತ ರಿತೇಶ್ ಪಾಂಡೆಗೆ ಮೊಬೈಲ್ ಖರೀದಿಸಲು ಹೇಳಿದ್ದು ಯಾರು? ಹೆಚ್‌ಡಿಕೆ ನಿವಾಸದಲ್ಲಿ ರಿತೇಶ್‌ ಬಂಧಿಸಲಾಗಿದೆ ಎಂದು ನಾವು ಹೇಳಿಲ್ಲ. ರಿತೇಶ್ ಪಾಂಡೆ ಜೊತೆ ಏನು ನಂಟಿದೆ ಎಂದು ಹೆಚ್‌ಡಿಕೆ ಹೇಳಬೇಕು ಎಂದರು.

ಹೆಚ್.ಡಿ.ಕುಮಾರಸ್ವಾಮಿಯನ್ನು ಯಾರೂ ಟಚ್ ಮಾಡಲು ಆಗಲ್ಲ ಎಂದಿದ್ದಾರೆ. ಕುಮಾರಸ್ವಾಮಿಯವರನ್ನು ಟಚ್ ಮಾಡುತ್ತೇವೆಂದು ನಾವು ಹೇಳಿದ್ದೇವಾ? ಅವರ ಹೇಳಿಕೆಯಲ್ಲಿ ಕಾಮನ್‌ಸೆನ್ಸ್‌, ಲಾಜಿಕ್ ಇದೆಯಾ? ಇಡೀ ಕೇಂದ್ರದಲ್ಲಿ ಕುಮಾರಸ್ವಾಮಿ ಒಬ್ಬರು ಮಾತ್ರ ಸಚಿವರಾಗಿದ್ದಾರಾ? ಎಂದು​ ಪ್ರಶ್ನಿಸಿದರು. ಕುಮಾರಸ್ವಾಮಿ ಯೋಗ್ಯತೆ ಇಷ್ಟೇನಾ? ಎಲ್ಲವನ್ನೂ ಬಿಟ್ಟು ನಿಂತುಕೊಂಡರೆ ಹೆಚ್‌ಡಿಕೆಗೆ ಕಷ್ಟವಾಗುತ್ತೆ. ನಮಗೆ ಸಿಕ್ಕ ಮಾಹಿತಿಯಂತೆ ನಾವು ತನಿಖೆ ನಡೆಸುತ್ತೇವೆ ಎಂದ ತಿಳಿಸಿದರು.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular