HomeUncategorizedಹಾವಿಗೂ ಹೊಡೆಯುತ್ತಿದೆ ಬಿಸಿಲಿನ ಶಾಖ ಬಿಲ ಬಿಟ್ಟು ಹೊರಬರುತ್ತಿವೆ ನಾಗರಹಾವುಗಳು: ಇಲ್ಲಿದೆ ಸೈಂಟಿಫಿಕ್ ಕಾರಣ.

ಹಾವಿಗೂ ಹೊಡೆಯುತ್ತಿದೆ ಬಿಸಿಲಿನ ಶಾಖ ಬಿಲ ಬಿಟ್ಟು ಹೊರಬರುತ್ತಿವೆ ನಾಗರಹಾವುಗಳು: ಇಲ್ಲಿದೆ ಸೈಂಟಿಫಿಕ್ ಕಾರಣ.

ಬೆಂಗಳೂರು: ರಾಜ್ಯದಾದ್ಯಂತ ತಾಪಮಾನ ಏರಿಕೆಯಾಗುತ್ತಿದೆ, ಇದರ ಬೆನ್ನಲ್ಲೇ ಜನವಸತಿ ಪ್ರದೇಶಗಳಲ್ಲಿ ಹಾವುಗಳು ಕಾಣಿಸಿಕೊಳ್ಳುವ ಪ್ರಕರಣಗಳೂ ಹೆಚ್ಚುತ್ತಿವೆ. ಸೆಖೆ ತಾಳಲಾರದೆ ಹಾವುಗಳು ರಾತ್ರಿ ವೇಳೆ ಗಾಳಿ ಸೇವಿಸಲು ಹೊರಬರುತ್ತಿವೆ ಎಂದು ನೀವು ಅಂದುಕೊಂಡಿದ್ದರೆ, ಆ ನಂಬಿಕೆ ತಪ್ಪು ಎನ್ನುತ್ತಾರೆ ತಜ್ಞರು. ಈ ಬಗ್ಗೆ ಕೀಟಶಾಸ್ತ್ರಜ್ಞ ವಿಜಯಕುಮಾರ್ ಬ್ಲತ್ತೂರು ಅವರು ಹಾವುಗಳ ನಡವಳಿಕೆಯ ಹಿಂದಿನ ಆಸಕ್ತಿದಾಯಕ ಸತ್ಯಗಳನ್ನು ಬಿಚ್ಚಿಟ್ಟಿದ್ದಾರೆ.

ಹಾವುಗಳು ನಮ್ಮಂತೆ ಸೆಖೆ ಅನುಭವಿಸಲ್ಲ

ಮನುಷ್ಯರಾದ ನಾವು ಬಿಸಿಯಾದಾಗ ಫ್ಯಾನ್ ಹಾಕಿಕೊಳ್ಳುತ್ತೇವೆ ಅಥವಾ ಬೆವರುತ್ತೇವೆ. ಏಕೆಂದರೆ ನಾವು ಬೆಚ್ಚಗಿನ ರಕ್ತದ (Warm-blooded) ಪ್ರಾಣಿಗಳು. ಆದರೆ ಹಾವುಗಳು ಹಾಗಲ್ಲ ಅವು ಶೀತ ರಕ್ತದ (Cold-blooded) ಜೀವಿಗಳು. ವಿಜ್ಞಾನದ ಭಾಷೆಯಲ್ಲಿ ಇವುಗಳನ್ನು ಎಕ್ಟೋಥರ್ಮಿಕ್ (Ectothermic) ಎಂದು ಕರೆಯಲಾಗುತ್ತದೆ. ಇದರರ್ಥ ಇವುಗಳ ದೇಹದ ಉಷ್ಣತೆಯು ಪರಿಸರದ ತಾಪಮಾನಕ್ಕೆ ತಕ್ಕಂತೆ ಬದಲಾಗುತ್ತದೆ.

ಹಾಗಾದರೆ ಬಿಸಿಲಿದ್ದಾಗ ಹಾವುಗಳು ಏನು ಮಾಡುತ್ತವೆ?

ಸನ್ ಬಾತ್ (Basking): ಬೆಳಿಗ್ಗೆ ಬಿಸಿಲು ಬಂದಾಗ ಹಾವುಗಳು ಕಲ್ಲಿನ ಮೇಲೆ ಮಲಗಿ ಸೂರ್ಯನ ಶಾಖವನ್ನು ಹೀರಿಕೊಳ್ಳುತ್ತವೆ. ಈ ಶಾಖದಿಂದಲೇ ಅವುಗಳ ಸ್ನಾಯುಗಳು ಸಕ್ರಿಯಗೊಳ್ಳುತ್ತವೆ. ಉಷ್ಣತೆ ಇಲ್ಲದಿದ್ದರೆ ಇವುಗಳಿಗೆ ಚಲಿಸಲು ಕೂಡ ಸಾಧ್ಯವಾಗುವುದಿಲ್ಲ

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ತಂಪಿನ ಹುಡುಕಾಟ: ಮಧ್ಯಾಹ್ನ ಬಿಸಿಲು ಅತಿಯಾದಾಗ ಹಾವುಗಳು ಬಿಲಗಳು ಅಥವಾ ಎಲೆಗಳ ರಾಶಿಯ ಅಡಿ ಅವಿತುಕೊಳ್ಳುತ್ತವೆ. ಈಗ ಸುತ್ತಮುತ್ತಲಿನ ಕೆರೆ-ಕುಂಟೆಗಳು ಬತ್ತಿಹೋಗಿರುವುದರಿಂದ, ತಂಪು ಮತ್ತು ನೀರನ್ನು ಹುಡುಕುತ್ತಾ ಅವು ನಮ್ಮ ತೋಟ ಅಥವಾ ಮನೆಗಳತ್ತ ಬರುವುದು ಸಹಜ.

ರಾತ್ರಿ ಯಾಕೆ ಹೊರಬರುತ್ತವೆ?

ಹಾವುಗಳು ರಾತ್ರಿ ಹೊರಬರುವುದು ಕೇವಲ ತಂಗಾಳಿಗಾಗಿ ಅಲ್ಲ, ಬದಲಾಗಿ ಆಹಾರದ ಹುಡುಕಾಟಕ್ಕಾಗಿ. ಇಲಿಗಳು, ಹಲ್ಲಿಗಳು ಅಥವಾ ಸಣ್ಣ ಹಾವುಗಳನ್ನು ಬೇಟೆಯಾಡಲು ಈ ಸಮಯ ಇವುಗಳಿಗೆ ಸೂಕ್ತ. ಇನ್ನು ಚಳಿಗಾಲದಲ್ಲಿ ಪರಿಸರ ಅತಿಯಾಗಿ ತಂಪಾದಾಗ, ಬೆಚ್ಚಗಿನ ಜಾಗ ಹುಡುಕುತ್ತಾ ಇವು ನಿಮ್ಮ ಬೆಡ್‌ಶೀಟ್ ಅಥವಾ ಮನೆಯ ಮೂಲೆಗಳಿಗೆ ಸೇರಿಕೊಳ್ಳುವ ಸಾಧ್ಯತೆಯೂ ಇರುತ್ತದೆ.

ಈಗ ಹಾವುಗಳ ಸಂತಾನೋತ್ಪತ್ತಿ ಅವಧಿಯಾಗಿದೆ. ಮೊಟ್ಟೆಯಿಂದ ಹೊರಬಂದ ಮರಿ ಹಾವುಗಳು ಆಹಾರಕ್ಕಾಗಿ ಎಲ್ಲೆಂದರಲ್ಲಿ ಸಂಚರಿಸುತ್ತವೆ. ನೆನಪಿರಲಿ, ಮರಿ ಹಾವುಗಳಲ್ಲೂ ಮನುಷ್ಯನನ್ನು ಕೊಲ್ಲುವಷ್ಟು ವಿಷವಿರುತ್ತದೆ.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

LEAVE A REPLY

Please enter your comment!
Please enter your name here

Most Popular