HomeLatest Newsನಾಯಿ ಕಚ್ಚಿದಾಗ ಮೊದಲು ಮಾಡಬೇಕಾದ ಕೆಲಸಗಳಿವು: ರೇಬಿಸ್ ಎಂಬ ಮಾರಣಾಂತಿಕ ಕಾಯಿಲೆಯಿಂದ ಪಾರಾಗಲು ಇಲ್ಲಿವೆ ಟಿಪ್ಸ್

ನಾಯಿ ಕಚ್ಚಿದಾಗ ಮೊದಲು ಮಾಡಬೇಕಾದ ಕೆಲಸಗಳಿವು: ರೇಬಿಸ್ ಎಂಬ ಮಾರಣಾಂತಿಕ ಕಾಯಿಲೆಯಿಂದ ಪಾರಾಗಲು ಇಲ್ಲಿವೆ ಟಿಪ್ಸ್

ಬೀದಿ ನಾಯಿಗಳ ಹಾವಳಿ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿದೆ. ಸಾಕು ನಾಯಿಗಳೇ ಇರಲಿ ಅಥವಾ ಬೀದಿ ನಾಯಿಗಳೇ ಇರಲಿ, ನಾಯಿ ಕಚ್ಚಿದಾಗ ಅಥವಾ ಉಗುರಿನಿಂದ ಪರಚಿದಾಗ ಅದನ್ನು ಅಗುರವಾಗಿ ಪರಿಗಣಿಸುವುದು ಅತಿ ದೊಡ್ಡ ತಪ್ಪಾದೀತು. ನಾಯಿ ಕಚ್ಚಿದ ತಕ್ಷಣ ಸರಿಯಾದ ಚಿಕಿತ್ಸೆ ಪಡೆಯದಿದ್ದರೆ ರೇಬಿಸ್ (Rabies) ನಂತಹ ಮಾರಣಾಂತಿಕ ಕಾಯಿಲೆಗೆ ತುತ್ತಾಗುವ ಅಪಾಯವಿರುತ್ತದೆ. ರೇಬಿಸ್ ವೈರಸ್ ನಾಯಿಯ ಲಾಲಾರಸದ ಮೂಲಕ ಮನುಷ್ಯನ ದೇಹ ಸೇರುತ್ತದೆ, ಇದು ಮೆದುಳಿನ ಮೇಲೆ ಪರಿಣಾಮ ಬೀರಿ ಹೈಡ್ರೋಫೋಬಿಯಾದಂತಹ (ನೀರಿನ ಭಯ) ಗಂಭೀರ ಲಕ್ಷಣಗಳಿಗೆ ಕಾರಣವಾಗಬಹುದು.

ನಾಯಿ ಕಚ್ಚಿದ ತಕ್ಷಣ ನೀವು ಮಾಡಬೇಕಾದ ಪ್ರಮುಖ ಕೆಲಸಗಳು ಇಲ್ಲಿವೆ:

ಗಾಯವನ್ನು ತೊಳೆಯಿರಿ: ನಾಯಿ ಕಚ್ಚಿದ ತಕ್ಷಣ ಆ ಜಾಗವನ್ನು ಹರಿಯುವ ನೀರಿನಲ್ಲಿ (Tap water) ಕನಿಷ್ಠ 5 ರಿಂದ 10 ನಿಮಿಷಗಳ ಕಾಲ ಚೆನ್ನಾಗಿ ತೊಳೆಯಬೇಕು. ಮೃದುವಾದ ಸೋಪನ್ನು ಬಳಸಿ ಗಾಯದ ಸುತ್ತ ಸ್ವಚ್ಛಗೊಳಿಸುವುದರಿಂದ ಸೋಂಕಿನ ಪ್ರಮಾಣವನ್ನು ಕಡಿಮೆ ಮಾಡಬಹುದು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ರಕ್ತಸ್ರಾವ ತಡೆಯಿರಿ: ಗಾಯದಿಂದ ರಕ್ತ ಬರುತ್ತಿದ್ದರೆ, ಸ್ವಚ್ಛವಾದ ಬಟ್ಟೆಯನ್ನು ಬಳಸಿ ಗಾಯದ ಮೇಲೆ ಒತ್ತಿ ಹಿಡಿಯಿರಿ. ಇದರಿಂದ ರಕ್ತಸ್ರಾವ ನಿಲ್ಲುತ್ತದೆ.

ಮುಲಾಮು ಹಚ್ಚಿ: ನಿಮ್ಮ ಬಳಿ ಆಂಟಿಬಯೋಟಿಕ್ ಕ್ರೀಮ್ ಲಭ್ಯವಿದ್ದರೆ ಅದನ್ನು ಗಾಯದ ಮೇಲೆ ಹಚ್ಚಿ, ಸೋಂಕು ಹರಡದಂತೆ ತಡೆಯಬಹುದು. ನಂತರ ಸ್ಟೆರಿಲೈಸ್ ಮಾಡಿದ ಬ್ಯಾಂಡೇಜ್ ಅಥವಾ ಸ್ವಚ್ಛ ಬಟ್ಟೆಯಿಂದ ಗಾಯವನ್ನು ಮುಚ್ಚಿ.

ತಕ್ಷಣ ವೈದ್ಯರನ್ನು ಭೇಟಿ ಮಾಡಿ: ಇಷ್ಟೆಲ್ಲಾ ಪ್ರಾಥಮಿಕ ಚಿಕಿತ್ಸೆ ಮಾಡಿದ ನಂತರ ವಿಳಂಬ ಮಾಡದೆ ವೈದ್ಯರ ಬಳಿ ಹೋಗುವುದು ಅತಿ ಮುಖ್ಯ. ಗಾಯ ಆಳವಾಗಿದ್ದರೆ ವೈದ್ಯರು ಹೊಲಿಗೆ ಹಾಕಬಹುದು ಅಥವಾ ಡ್ರೆಸ್ಸಿಂಗ್ ಮಾಡುತ್ತಾರೆ. ಇದರ ಜೊತೆಗೆ ಟೆಟನಸ್ (Tetanus) ಮತ್ತು ರೇಬಿಸ್ ವಿರೋಧಿ ಚುಚ್ಚುಮದ್ದನ್ನು (Anti-Rabies Vaccine) ತೆಗೆದುಕೊಳ್ಳುವುದು ಕಡ್ಡಾಯ.

ಲಕ್ಷಣಗಳ ಮೇಲೆ ಗಮನವಿರಲಿ: ಚಿಕಿತ್ಸೆಯ ನಂತರವೂ ಗಾಯದ ಜಾಗದಲ್ಲಿ ವಿಪರೀತ ಕೆಂಪಾಗುವುದು, ಊತ, ತೀವ್ರ ನೋವು ಅಥವಾ ಜ್ವರ ಕಾಣಿಸಿಕೊಂಡರೆ ಅದನ್ನು ನಿರ್ಲಕ್ಷಿಸಬೇಡಿ. ಇವು ಸೋಂಕು ಹೆಚ್ಚಾಗುತ್ತಿರುವ ಲಕ್ಷಣಗಳಾಗಿರಬಹುದು.

ನಾಯಿ ಕಚ್ಚಿದಾಗ ಯಾವುದೇ ನಾಟಿ ಔಷಧಿ ಅಥವಾ ಮನೆಮದ್ದಿನ ಮೇಲೆ ಅವಲಂಬಿತರಾಗದೆ ವೈಜ್ಞಾನಿಕ ಚಿಕಿತ್ಸೆ ಪಡೆಯುವುದು ಜೀವ ಉಳಿಸಿಕೊಳ್ಳಲು ಇರುವ ಏಕೈಕ ದಾರಿ.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

Most Popular