HomeLatest Newsತಾಯಿಯ ಕ್ಯಾನ್ಸರ್ ಬಿಲ್ ನೋಡಿ ಮರುಗಿದ ಬಿಎಂಡಬ್ಲ್ಯು ಮಾಲೀಕ: ಡೆಲಿವರಿ ಬಾಯ್ ಕಣ್ಣೀರು ಒರೆಸಿದ ಸಿದ್ಧಾರ್ಥ್...

ತಾಯಿಯ ಕ್ಯಾನ್ಸರ್ ಬಿಲ್ ನೋಡಿ ಮರುಗಿದ ಬಿಎಂಡಬ್ಲ್ಯು ಮಾಲೀಕ: ಡೆಲಿವರಿ ಬಾಯ್ ಕಣ್ಣೀರು ಒರೆಸಿದ ಸಿದ್ಧಾರ್ಥ್ ಭಾರದ್ವಾಜ್

ಮಾನವೀಯತೆ ಇನ್ನು ಸತ್ತಿಲ್ಲ ಎಂಬುದಕ್ಕೆ ಮುಂಬೈನಲ್ಲಿ ನಡೆದ ಈ ಒಂದು ಘಟನೆ ಸಾಕ್ಷಿಯಾಗಿದೆ. ನಟ ಸಿದ್ಧಾರ್ಥ್ ಭಾರದ್ವಾಜ್ ಅವರ ಐಷಾರಾಮಿ ಬಿಎಂಡಬ್ಲ್ಯು ಕಾರಿಗೆ ಡೆಲಿವರಿ ಬಾಯ್ ಒಬ್ಬರು ಆಕಸ್ಮಿಕವಾಗಿ ಡಿಕ್ಕಿ ಹೊಡೆದಾಗ ನಡೆದ ಘಟನೆಯ ವೀಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಜನರ ಕಣ್ಣಾಲಿಗಳು ಒದ್ದೆಯಾಗುವಂತೆ ಮಾಡಿದೆ.

ರಸ್ತೆಯ ಬದಿಯಲ್ಲಿ ನಿಲ್ಲಿಸಿದ್ದ ಸಿದ್ಧಾರ್ಥ್ ಅವರ ಕಾರಿಗೆ ವಿಶಾಲ್ ಎಂಬ ಡೆಲಿವರಿ ಬಾಯ್ ಡಿಕ್ಕಿ ಹೊಡೆದಿದ್ದರು. ಇದರಿಂದ ಕಾರಿಗೆ ಸಾಕಷ್ಟು ಹಾನಿಯಾಗಿತ್ತು. ಸಿದ್ಧಾರ್ಥ್ ಅವರು ಕಾರಿನ ಬಳಿ ಬಂದು ಎಷ್ಟು ಹಣ ನೀಡುತ್ತೀಯಾ ಎಂದು ಕೇಳಿದಾಗ, ವಿಶಾಲ್ ಕಣ್ಣೀರು ಹಾಕುತ್ತಾ ತನ್ನ ಬಳಿ ಕೇವಲ 3 ರಿಂದ 4 ಸಾವಿರ ರೂಪಾಯಿ ಮಾತ್ರ ಇದೆ ಎಂದು ಹೇಳಿದ್ದಾರೆ. ಅಷ್ಟೇ ಅಲ್ಲದೆ, ತನ್ನ ತಾಯಿಗೆ ಕ್ಯಾನ್ಸರ್ ಇದ್ದು ಅವರು ಕೊನೆಯ ಹಂತದಲ್ಲಿದ್ದಾರೆ ಎಂದು ಹೇಳಿ ಆಸ್ಪತ್ರೆಯ ಬಿಲ್‌ಗಳನ್ನು ತೋರಿಸಿದ್ದಾರೆ.

ಡೆಲಿವರಿ ಬಾಯ್ ಸಂಕಷ್ಟವನ್ನು ಕಂಡ ಸಿದ್ಧಾರ್ಥ್ ಅವರ ಮನಸ್ಸು ಕರಗಿದೆ. ಆತನಿಂದ ಒಂದು ರೂಪಾಯಿ ಹಣವನ್ನೂ ಪಡೆಯದ ಸಿದ್ಧಾರ್ಥ್, ಆತನನ್ನು ಅಪ್ಪಿಕೊಂಡು ಸಮಾಧಾನಪಡಿಸಿದ್ದಾರೆ. “ನನ್ನ ಕಾರನ್ನು ನಾನೇ ಸರಿಪಡಿಸಿಕೊಳ್ಳುತ್ತೇನೆ, ಆ ಹಣವೇ ನಿನ್ನ ತಾಯಿಯ ಚಿಕಿತ್ಸೆಗೆ ನನ್ನ ಕಡೆಯಿಂದ ಅಳಿಲು ಸೇವೆ” ಎಂದು ಹೇಳಿ ಆತನನ್ನು ಕಳುಹಿಸಿಕೊಟ್ಟಿದ್ದಾರೆ. ಈ ದೃಶ್ಯವನ್ನು ಕಂಡ ನೆಟ್ಟಿಗರು ಸಿದ್ಧಾರ್ಥ್ ಅವರ ದೊಡ್ಡ ಗುಣಕ್ಕೆ ಫಿದಾ ಆಗಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಈ ಘಟನೆಯ ನಂತರ ಸಿದ್ಧಾರ್ಥ್ ಆ ಡೆಲಿವರಿ ಬಾಯ್ ನಂಬರ್ ಅನ್ನು ಹಂಚಿಕೊಂಡಿದ್ದರು. ಇದನ್ನು ಗಮನಿಸಿದ ನೆಟ್ಟಿಗರು ವಿಶಾಲ್ ಅವರ ತಾಯಿಯ ಚಿಕಿತ್ಸೆಗಾಗಿ ಸುಮಾರು 30 ಸಾವಿರ ರೂಪಾಯಿ ಸಹಾಯ ಧನ ಕಳುಹಿಸಿದ್ದಾರೆ. ವಿಶೇಷವೆಂದರೆ, ಆ ಹಣ ಬಂದ ತಕ್ಷಣ ವಿಶಾಲ್ ಮತ್ತೆ ಸಿದ್ಧಾರ್ಥ್ ಅವರ ಬಳಿ ಬಂದು, “ಈ ಹಣದಿಂದ ನಿಮ್ಮ ಕಾರು ರಿಪೇರಿ ಮಾಡಿಸಿಕೊಳ್ಳಿ” ಎಂದು ಕೇಳಿಕೊಂಡಿದ್ದಾರೆ. ಆದರೆ ಸಿದ್ಧಾರ್ಥ್ ಆ ಹಣವನ್ನು ನಿನ್ನ ತಾಯಿಯ ಚಿಕಿತ್ಸೆಗೇ ಬಳಸು ಎಂದು ಹೇಳಿ ವಿಶಾಲ್ ಅವರ ಪ್ರಾಮಾಣಿಕತೆಯನ್ನು ಮೆಚ್ಚಿಕೊಂಡಿದ್ದಾರೆ. ಸದ್ಯ ಈ ವೀಡಿಯೋ 25 ಲಕ್ಷಕ್ಕೂ ಹೆಚ್ಚು ವೀಕ್ಷಣೆ ಕಂಡಿದ್ದು, ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.

https://www.instagram.com/reel/DTuecyvjYir/?utm_source=ig_web_copy_link

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

Most Popular