HomeIndiaಜೈಲಿನಲ್ಲಿ ಪ್ರೀತಿ, ಹೈಕೋರ್ಟ್‌ನಿಂದ ಪೆರೋಲ್: ಹಸೆಮಣೆ ಏರುತ್ತಿದ್ದಾರೆ ರಾಜಸ್ಥಾನದ ಇಬ್ಬರು ಕುಖ್ಯಾತ ಕೊಲೆಗಡುಕರು!

ಜೈಲಿನಲ್ಲಿ ಪ್ರೀತಿ, ಹೈಕೋರ್ಟ್‌ನಿಂದ ಪೆರೋಲ್: ಹಸೆಮಣೆ ಏರುತ್ತಿದ್ದಾರೆ ರಾಜಸ್ಥಾನದ ಇಬ್ಬರು ಕುಖ್ಯಾತ ಕೊಲೆಗಡುಕರು!

ಸಿನಿಮಾ ಕಥೆಗಳನ್ನೂ ಮೀರಿಸುವಂತಹ ವಿಚಿತ್ರ ಪ್ರೇಮಕಥೆಯೊಂದು ರಾಜಸ್ಥಾನದ ಅಲ್ವಾರ್‌ನಲ್ಲಿ ನಡೆದಿದೆ. ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿರುವ ಇಬ್ಬರು ಕುಖ್ಯಾತ ಕೊಲೆ ಆರೋಪಿಗಳು ಪರಸ್ಪರ ಪ್ರೀತಿಸಿ, ಇದೀಗ ವಿವಾಹವಾಗಲು ಸಜ್ಜಾಗಿದ್ದಾರೆ. ಇದಕ್ಕಾಗಿ ರಾಜಸ್ಥಾನ ಹೈಕೋರ್ಟ್ ಇವರಿಬ್ಬರಿಗೂ 15 ದಿನಗಳ ತುರ್ತು ಪೆರೋಲ್ ಮಂಜೂರು ಮಾಡಿದೆ.

ಯಾರೀ ಪ್ರಿಯಾ ಸೇಠ್? ಪ್ರಿಯಾ ಸೇಠ್ ಅಲಿಯಾಸ್ ನೇಹಾ ಸೇಠ್ ಎಂಬಾಕೆ ವೃತ್ತಿಯಲ್ಲಿ ಮಾಡೆಲ್ ಆಗಿದ್ದವಳು. 2018ರಲ್ಲಿ ಡೇಟಿಂಗ್ ಆ್ಯಪ್ ಟಿಂಡರ್ ಮೂಲಕ ಪರಿಚಯವಾಗಿದ್ದ ದುಶ್ಯಂತ್ ಶರ್ಮಾ ಎಂಬ ಯುವಕನನ್ನು ಅಪಹರಿಸಿ, 10 ಲಕ್ಷ ರೂಪಾಯಿ ಬೇಡಿಕೆಯಿಟ್ಟಿದ್ದಳು. ಹಣ ಸಿಕ್ಕ ನಂತರ ತನ್ನ ಗುಟ್ಟು ಬಯಲಾಗಬಹುದು ಎಂಬ ಭಯದಿಂದ ದುಶ್ಯಂತ್‌ನನ್ನು ಬರ್ಬರವಾಗಿ ಕೊಲೆ ಮಾಡಿ, ಶವವನ್ನು ಸೂಟ್‌ಕೇಸ್‌ನಲ್ಲಿ ತುಂಬಿ ಎಸೆದಿದ್ದಳು. ಈ ಪ್ರಕರಣದಲ್ಲಿ ಆಕೆಗೆ ಜೀವಾವಧಿ ಶಿಕ್ಷೆಯಾಗಿದ್ದು, ಸಂಗನೇರ್ ಓಪನ್ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿದ್ದಾಳೆ.

ಐದು ಕೊಲೆ ಮಾಡಿದ್ದ ವರ ಹನುಮಾನ್ ಪ್ರಸಾದ್: ಪ್ರಿಯಾಳನ್ನು ವರಿಸುತ್ತಿರುವ ಹನುಮಾನ್ ಪ್ರಸಾದ್ ಎಂಬಾತ ಕೂಡ ಒಬ್ಬ ಕುಖ್ಯಾತ ಅಪರಾಧಿ. 2017ರಲ್ಲಿ ತನ್ನ ಪ್ರೇಯಸಿ ಸಂತೋಷ್ ಎಂಬಾಕೆಯ ಮಾತು ಕೇಳಿ, ಆಕೆಯ ಪತಿ ಮತ್ತು ನಾಲ್ವರು ಮಕ್ಕಳನ್ನು ಅತ್ಯಂತ ಕ್ರೂರವಾಗಿ ಕೊಲೆ ಮಾಡಿದ್ದ ಆರೋಪ ಈತನ ಮೇಲಿದೆ. ಈತ ಕೂಡ ಅದೇ ಜೈಲಿನಲ್ಲಿದ್ದು, ಕಳೆದ ಆರು ತಿಂಗಳ ಹಿಂದೆ ಇಬ್ಬರ ನಡುವೆ ಪ್ರೇಮಾಂಕುರವಾಗಿತ್ತು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಜೈಲಿನಲ್ಲಿಯೇ ಪ್ರೀತಿ ಬೆಳೆಸಿಕೊಂಡಿದ್ದ ಈ ಜೋಡಿ ಈಗ ಕಾನೂನುಬದ್ಧವಾಗಿ ವಿವಾಹವಾಗಲು ನಿರ್ಧರಿಸಿದ್ದಾರೆ. ತಮ್ಮ ಮದುವೆಗಾಗಿ ಪೆರೋಲ್ ನೀಡಬೇಕೆಂದು ಕೋರಿ ಹೈಕೋರ್ಟ್ ಮೆಟ್ಟಿಲೇರಿದ್ದರು. ಮನವಿಯನ್ನು ಪುರಸ್ಕರಿಸಿದ ನ್ಯಾಯಾಲಯವು ಅಲ್ವಾರ್‌ನ ಬರೋಡಾಮೇವ್‌ನಲ್ಲಿ ಮದುವೆ ಮಾಡಿಕೊಳ್ಳಲು ಇಬ್ಬರಿಗೂ 15 ದಿನಗಳ ಕಾಲ ಬಿಡುಗಡೆ ನೀಡಿದೆ.

ಸಮಾಜವನ್ನೇ ನಡುಗಿಸಿದ್ದ ಇಬ್ಬರು ಕ್ರೂರ ಕೊಲೆಗಡುಕರು ಈಗ ಜೈಲಿನಿಂದ ಹೊರಬಂದು ಹಸೆಮಣೆ ಏರುತ್ತಿರುವುದು ದೊಡ್ಡ ಚರ್ಚೆಗೆ ಕಾರಣವಾಗಿದೆ. ಕ್ರಿಮಿನಲ್ ಲೋಕದಲ್ಲಿ ಶುರುವಾದ ಇವರ ಈ ಬಾಂಧವ್ಯ ಮುಂದೆ ಯಾವ ತಿರುವು ಪಡೆಯಲಿದೆ ಎಂಬುದು ಕುತೂಹಲ ಮೂಡಿಸಿದೆ.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

Most Popular