HomeIndiaBIG NEWS: ಜಾತ್ರೆಯಲ್ಲಿ ಹೀಲಿಯಂ ಬಲೂನ್ ಸ್ಫೋಟ; ನಾಲ್ವರ ಸಾವು

BIG NEWS: ಜಾತ್ರೆಯಲ್ಲಿ ಹೀಲಿಯಂ ಬಲೂನ್ ಸ್ಫೋಟ; ನಾಲ್ವರ ಸಾವು

ಆಘಾತಕಾರಿ ಘಟನೆಯಲ್ಲಿ ಪಶ್ಚಿಮ ಬಂಗಾಳದ ಜಯನಗರದಲ್ಲಿ ಹೀಲಿಯಂ ಬಲೂನ್ ಸ್ಫೋಟಗೊಂಡು ಬಲೂನ್ ಮಾರಾಟಗಾರ ಸೇರಿದಂತೆ ನಾಲ್ವರು ಸಾವನ್ನಪ್ಪಿದ್ದಾರೆ.

ಭಾನುವಾರ ಜಾತ್ರೆ ವೇಳೆ ದಕ್ಷಿಣ 24 ಪರಗಣ ಜಿಲ್ಲೆಯ ಜಯನಗರದಲ್ಲಿ ಈ ದುರ್ಘಟನೆ ನಡೆದಿದೆ. ಮೃತಪಟ್ಟ ನಾಲ್ವರಲ್ಲಿ ಇಬ್ಬರು ಮಕ್ಕಳು .

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

35 ವರ್ಷದ ಮುಚಿರಾಮ್ ಮೊಂಡಲ್ ಮೇಳದಲ್ಲಿ ಬಲೂನ್ ಮಾರಾಟ ಮಾಡುತ್ತಿದ್ದ. ಈ ವೇಳೆ ಹೀಲಿಯಂ ಬಲೂನ್ ಗಳು ಸ್ಫೋಟಗೊಂಡಿದ್ದರಿಂದ ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಈ ಸಂದರ್ಭದಲ್ಲಿ ಸ್ಥಳದಲ್ಲಿದ್ದ ಇನ್ನೂ ಮೂವರು ಸಾವನ್ನಪ್ಪಿದ್ದಾರೆ. ಅವರುಗಳನ್ನು ಶಾಹಿದ್ (13), ಅಬಿರ್ ಗಾಜ್ (8) ಮತ್ತು ಕುತುಬುದ್ದೀನ್ ಮಿಸ್ತ್ರಿ (35) ಎಂದು ಗುರ್ತಿಸಲಾಗಿದೆ.

ಕಾನೂನು ಸುವ್ಯವಸ್ಥೆ ಕಾಪಾಡಲು ಅಲ್ಲಿಗೆ ಆಗಮಿಸಿದ ಪೊಲೀಸ್ ತಂಡ ಮೃತರ ಶವಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದೆ. ದುರ್ಘಟನೆಯಲ್ಲಿ ಹಲವರು ಗಾಯಗೊಂಡಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular