HomeEntertainmentʼಬಿಡುಗಡೆʼ ಕಿರುಚಿತ್ರಕ್ಕೆ ಎರಡನೇ ಬಹುಮಾನ

ʼಬಿಡುಗಡೆʼ ಕಿರುಚಿತ್ರಕ್ಕೆ ಎರಡನೇ ಬಹುಮಾನ

ಶಿವಮೊಗ್ಗ ನಗರದ ಸುವರ್ಣ ಸಾಂಸ್ಕೃತಿಕ ಭವನದಲ್ಲಿ ಅಂಬೆಗಾಲು ಸಂಸ್ಥೆಯಿಂದ ಏರ್ಪಡಿಸಲಾಗಿದ್ದ ಕಿರುಚಿತ್ರ ಅವಾರ್ಡ್ ಸ್ಪರ್ಧೆಯಲ್ಲಿ ಹದಿನೈದು ಚಿತ್ರಗಳು ಆಯ್ಕೆಯಾಗಿದ್ದವು.

ಸ್ಕ್ರೀನಿಂಗ್ ಮಾಡಿ ತೀರ್ಪುದಾರರ ಆಯ್ಕೆಯಂತೆ “ಬಿಡುಗಡೆ” ಕಿರುಚಿತ್ರಕ್ಕೆ ಶ್ರೇಷ್ಟ ಚಿತ್ರವೆಂದು ಪರಿಗಣಿಸಿ ಎರಡನೆಯ ಬಹುಮಾನವನ್ನು ಘೋಷಿಸಲಾಯಿತು.

ಬಹುಮಾನದಲ್ಲಿ ಹದಿನೈದು ಸಾವಿರ ನಗದು ಹಾಗೂ ಪಾರಿತೋಷಕ ಒಳಗೊಂಡಿತ್ತು, ಈ ಚಿತ್ರದಲ್ಲಿ ಪ್ರಮುಖ ಪಾತ್ರಧಾರಿಯಾಗಿದ್ದ ಶಿವಮೊಗ್ಗದ ಪೊಲೀಸ್ ಅಧಿಕಾರಿ ಹಾಗೂ ಚಿತ್ರದ ನಿರ್ಮಾಪಕ ಮಾಲ್ಗುಡಿ ದಾನಂ ರವರಿಗೆ ಶ್ರೇಷ್ಟ ನಟ ಬಹುಮಾನವನ್ನು ಅಂಬೆಗಾಲು ಸಂಸ್ಥೆಯ ಅಧ್ಯಕ್ಷರಾದ ಡಿ.ಎಸ್ ಅರುಣ್ ಮತ್ತು ತಂಡ ನೀಡಿತು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಈ ಚಿತ್ರದಲ್ಲಿನ ಸಂದೇಶ, ಕತೆ, ಚಿತ್ರಕತೆ, ಸಂಭಾಷಣೆ, ನಿರ್ದೇಶನ ಹಾಗೂ ವಿವಿಧ ಪಾತ್ರಗಳ ಕುರಿತಾಗಿ ಪ್ರಶಂಸಿದರು.

For Latest News Updates, Join Our Whatsapp Community🚩
RELATED ARTICLES

Most Popular