HomeBusinessವೀಕೆಂಡ್ ಶಾಪಿಂಗ್ ಮಾಡೋರಿಗೆ ಭರ್ಜರಿ ಸಿಹಿಸುದ್ದಿ ಶನಿವಾರ ದಿಢೀರ್ ಕುಸಿದ ಚಿನ್ನದ ಬೆಲೆ: ಬೆಳ್ಳಿ ಕೆಜಿಗೆ...

ವೀಕೆಂಡ್ ಶಾಪಿಂಗ್ ಮಾಡೋರಿಗೆ ಭರ್ಜರಿ ಸಿಹಿಸುದ್ದಿ ಶನಿವಾರ ದಿಢೀರ್ ಕುಸಿದ ಚಿನ್ನದ ಬೆಲೆ: ಬೆಳ್ಳಿ ಕೆಜಿಗೆ ಬರೋಬ್ಬರಿ 5,000 ರೂಪಾಯಿ ಅಗ್ಗ

ಬೆಂಗಳೂರು: ಭಾರತೀಯ ಮಾರುಕಟ್ಟೆಯಲ್ಲಿ ಸತತ ಎರಡು ವಹಿವಾಟುಗಳಲ್ಲಿ ಭಾರಿ ಏರಿಕೆ ಕಂಡಿದ್ದ ಚಿನ್ನದ ಬೆಲೆಯು ವಾರಾಂತ್ಯದಲ್ಲಿ ಅಂದರೆ ಶನಿವಾರ (ಜುಲೈ 11) ಇಳಿಕೆಯತ್ತ ಮುಖಮಾಡಿದೆ. ಪ್ರಸಕ್ತ ವಾರದಲ್ಲಿ ಸತತ ಮೂರು ದಿನಗಳ ಇಳಿಕೆಯ ಬಳಿಕ ನಂತರದ ಎರಡು ಸೆಷನ್‌ಗಳಲ್ಲಿ ಬಂಗಾರದ ಬೆಲೆ ಗಣನೀಯವಾಗಿ ಹೆಚ್ಚಾಗಿತ್ತು. ಆದರೆ ವಾರಾಂತ್ಯದಲ್ಲಿ ಚಿನ್ನದ ಬೆಲೆ ಇಳಿಕೆಯಾಗುವುದರ ಜೊತೆಗೆ ಬೆಳ್ಳಿ ಬೆಲೆಯಲ್ಲೂ ಸಹ ಭಾರಿ ಕುಸಿತ ಕಂಡುಬಂದಿದೆ. ಅದ್ರಲ್ಲೂ ಮುಖ್ಯವಾಗಿ ಬೆಳ್ಳಿ ದರವು ಕೆಜಿಗೆ ಬರೋಬ್ಬರಿ 5,000 ರೂಪಾಯಿಗಳಷ್ಟು ಅಗ್ಗವಾಗಿದ್ದು, ವೀಕೆಂಡ್‌ನಲ್ಲಿ ಚಿನ್ನ-ಬೆಳ್ಳಿ ಖರೀದಿಸಲು ಪ್ಲ್ಯಾನ್ ಮಾಡಿದ್ದ ಗ್ರಾಹಕರಿಗೆ ತುಸು ರಿಲೀಫ್ ಸಿಕ್ಕಂತಾಗಿದೆ.

ಬೆಂಗಳೂರಿನಲ್ಲಿ ಇಂದಿನ ಚಿನ್ನದ ದರ ವಿವರ (Gold Price Today):

ರಾಜಧಾನಿ ಬೆಂಗಳೂರಿನಲ್ಲಿ ಇಂದು 22 ಕ್ಯಾರೆಟ್ ಮತ್ತು 24 ಕ್ಯಾರೆಟ್ ಎರಡೂ ಮಾದರಿಯ ಚಿನ್ನದ ದರಗಳಲ್ಲಿ ಇಳಿಕೆ ದಾಖಲಾಗಿದೆ.

22 ಕ್ಯಾರೆಟ್ ಆಭರಣ ಚಿನ್ನದ ದರ:

1 ಗ್ರಾಂ: 45 ರೂಪಾಯಿ ಕಡಿಮೆಯಾಗಿ 13,230 ರೂಪಾಯಿ ತಲುಪಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

8 ಗ್ರಾಂ : 1,05,840 ರೂಪಾಯಿ ಆಗಿದೆ.

10 ಗ್ರಾಂ: 1,32,300 ರೂಪಾಯಿ ಪಾವತಿಸಬೇಕು.

100 ಗ್ರಾಂ: 13,23,000 ರೂಪಾಯಿ ಇರಲಿದೆ.

24 ಕ್ಯಾರೆಟ್ ಅಪರಂಜಿ ಚಿನ್ನದ ದರ:

1 ಗ್ರಾಂ: 49 ರೂಪಾಯಿ ಅಗ್ಗವಾಗಿ 14,433 ರೂಪಾಯಿ ತಲುಪಿದೆ.

8 ಗ್ರಾಂ: 1,15,464 ರೂಪಾಯಿ ಆಗಿದೆ.

10 ಗ್ರಾಂ: 1,44,330 ರೂಪಾಯಿ ನಿಗದಿಯಾಗಿದೆ.

100 ಗ್ರಾಂ: 14,43,300 ರೂಪಾಯಿ ಇದೆ.

ಬೆಳ್ಳಿ ದರದಲ್ಲೂ ಭಾರಿ ಕುಸಿತ

ಚಿನ್ನದ ಬೆಲೆ ಇಳಿಕೆಯ ಹಾದಿ ಹಿಡಿದರೆ, ಇತ್ತ ಬೆಳ್ಳಿ ಮಾತ್ರ ಗ್ರಾಹಕರಿಗೆ ಬಿಗ್ ಶಾಕ್ ನೀಡುವ ಬದಲು ಬಿಗ್ ಗಿಫ್ಟ್ ನೀಡಿದೆ. ಜಾಗತಿಕ ಮಾರುಕಟ್ಟೆಯ ಏರಿಳಿತಗಳ ಪರಿಣಾಮವಾಗಿ ಬೆಳ್ಳಿ ದರದಲ್ಲಿ ಒಂದೇ ದಿನ ಕೆಜಿಗೆ 5,000 ರೂಪಾಯಿಗಳಷ್ಟು ಬೃಹತ್ ಕುಸಿತ ಕಂಡುಬಂದಿದೆ. ಆಭರಣ ಪ್ರಿಯರಿಗೆ ಹಾಗೂ ಹೂಡಿಕೆದಾರರಿಗೆ ವೀಕೆಂಡ್ ಶಾಪಿಂಗ್ ಮಾಡಲು ಇದು ಸೂಕ್ತ ಸಮಯ ಎಂದು ಮಾರುಕಟ್ಟೆಯ ತಜ್ಞರು ವಿಶ್ಲೇಷಿಸುತ್ತಿದ್ದಾರೆ.

ಬೆಂಗಳೂರು ಸೇರಿದಂತೆ ಪ್ರಮುಖ ನಗರಗಳಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ

ನಗರಗಳ ಹೆಸರು
ಬೆಂಗಳೂರು₹1,44,820
ನಾಗ್ಪುರ₹1,44,820
ಮುಂಬೈ₹1,44,820
ಚೆನ್ನೈ₹1,45,640
ಕೋಲ್ಕತ್ತಾ₹1,44,820
ಪಾಟ್ನಾ₹1,44,870
ಸೂರತ್‌₹1,44,870
ಚಂಡೀಗಢ₹1,44,950
ಲಕ್ನೋ₹1,44,950



For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

LEAVE A REPLY

Please enter your comment!
Please enter your name here

Most Popular