HomeLive Newsಮಟನ್ ಬೇಗ ಮತ್ತು ಮೆತ್ತಗೆ ಬೇಯಬೇಕೆ ? ಅಡುಗೆ ಮಾಡುವಾಗ ಈ 4 ಟಿಪ್ಸ್ ಪಾಲಿಸಿ

ಮಟನ್ ಬೇಗ ಮತ್ತು ಮೆತ್ತಗೆ ಬೇಯಬೇಕೆ ? ಅಡುಗೆ ಮಾಡುವಾಗ ಈ 4 ಟಿಪ್ಸ್ ಪಾಲಿಸಿ

ಮಟನ್ ಪ್ರಿಯರಿಗೆ ಅಡುಗೆ ಮಾಡುವಾಗ ಎದುರಾಗುವ ಅತಿದೊಡ್ಡ ಸವಾಲು ಅಂದರೆ ಅದು ಮಾಂಸ ಬೇಗ ಬೇಯದಿರುವುದು. ಚಿಕನ್‌ಗಿಂತ ಭಿನ್ನವಾಗಿ ಮಟನ್ ಮೆತ್ತಗಾಗಲು ಗಂಟೆಗಟ್ಟಲೆ ಸಮಯ ಮತ್ತು ಹೆಚ್ಚಿನ ಗ್ಯಾಸ್ ವ್ಯಯವಾಗುತ್ತದೆ. ಆದರೆ, ಅಡುಗೆ ಮಾಡುವ ವಿಧಾನದಲ್ಲಿ ಕೇವಲ ನಾಲ್ಕು ಸರಳ ಬದಲಾವಣೆ ಮಾಡಿಕೊಂಡರೆ ಸಾಕು; ಕೇವಲ 10 ರಿಂದ 15 ನಿಮಿಷಗಳಲ್ಲಿ ಹೋಟೆಲ್ ಶೈಲಿಯ ಸಾಫ್ಟ್ ಮಟನ್ ಸವಿಯಬಹುದು! ತಣ್ಣೀರಿನ ಬದಲು ಬಿಸಿ ನೀರು ಬಳಸುವುದು ಮತ್ತು ಶುಂಠಿ ಪೇಸ್ಟ್‌ನ ಸರಿಯಾದ ಬಳಕೆ ನಿಮ್ಮ ಅಡುಗೆಯನ್ನು ಹೇಗೆ ಸುಲಭವಾಗಿಸುತ್ತದೆ? ಗ್ಯಾಸ್ ಉಳಿತಾಯದೊಂದಿಗೆ ರುಚಿಕರ ಮಟನ್ ತಯಾರಿಸಲು ಈ ಸೀಕ್ರೆಟ್ ಟಿಪ್ಸ್ ತಪ್ಪದೇ ಓದಿ…

ಹೌದು.  ಭಾನುವಾರ ಬಂತೆಂದರೆ ಮಾಂಸಾಹಾರಿಗಳಿಗೆ ಹಬ್ಬದ ಸಂಭ್ರಮ. ಚಿಕನ್ ಅಥವಾ ಮಟನ್ ತಂದು ಸವಿಯುತ್ತಾರೆ. ಚಿಕನ್ ಹೇಗಾದರೂ ಸುಲಭವಾಗಿ ಬೇಯಿಸಬಹುದು, ಆದರೆ ಮಟನ್ ಬೇಯಿಸುವುದು ಸ್ವಲ್ಪ ಕಷ್ಟದ ಕೆಲಸ. ಯಾಕಂದರೆ ಮಟನ್ ಬೇಗ ಬೇಯುವುದಿಲ್ಲ ಮತ್ತು ಅದಕ್ಕೆ ತಾಳ್ಮೆ ಬೇಕು. ಕಡಿಮೆ ಸಮಯದಲ್ಲಿ ಮಟನ್ ಮೆತ್ತಗೆ ಬೇಯಲು ಈ ಕೆಳಗಿನ ಸಲಹೆಗಳನ್ನು ಪಾಲಿಸಿ:

ಮಟನ್ ಬೇಗ ಬೇಯಲು ಪಾಲಿಸಬೇಕಾದ ಟಿಪ್ಸ್:

1. ಬಿಸಿ ನೀರಿನಿಂದ ತೊಳೆಯಿರಿ: ಮಟನ್ ಮಾರುಕಟ್ಟೆಯಿಂದ ತಂದ ತಕ್ಷಣ ಅದನ್ನು ತಣ್ಣೀರಿನಿಂದ ತೊಳೆಯುವ ಬದಲು ಉಗುರುಬೆಚ್ಚಗಿನ ನೀರಿನಿಂದ ತೊಳೆಯಿರಿ. ಹೀಗೆ ಮಾಡುವುದರಿಂದ ಮಾಂಸ ಬೇಗ ಬೇಯುತ್ತದೆ. ತಣ್ಣೀರು ಮಟನ್ ಅನ್ನು ಗಟ್ಟಿಯಾಗಿಸುತ್ತದೆ ಮತ್ತು ಬೇಯಲು ಹೆಚ್ಚು ಸಮಯ ತೆಗೆದುಕೊಳ್ಳುವಂತೆ ಮಾಡುತ್ತದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

2. ಮಸಾಲೆಗಳನ್ನು ಮುಂಚಿತವಾಗಿ ಹಾಕಬೇಡಿ: ಮಟನ್ ಒಲೆಯ ಮೇಲಿರುವಾಗ ಮಸಾಲೆಗಳನ್ನು ಆರಂಭದಲ್ಲೇ ಹಾಕಬೇಡಿ. ಕೇವಲ ಎಣ್ಣೆ, ಅರಿಶಿನ ಮತ್ತು ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಹಾಕಿದರೆ ಸಾಕು. ಶುಂಠಿ ಪೇಸ್ಟ್ ಮಟನ್ ಅನ್ನು ಬೇಗನೆ ಮೆತ್ತಗೆ ಮಾಡುತ್ತದೆ. ಮಾಂಸ ಚೆನ್ನಾಗಿ ಬೆಂದ ನಂತರವಷ್ಟೇ ಮಸಾಲೆಗಳನ್ನು ಸೇರಿಸಿ. ಹಾಗೆಯೇ ಉಪ್ಪನ್ನು ಅತಿಯಾಗಿ ಹಾಕಬೇಡಿ, ಇದು ಮಾಂಸ ಮೆತ್ತಗಾಗುವುದನ್ನು ತಡೆಯುತ್ತದೆ.

3. ಬಿಸಿ ನೀರನ್ನು ಬಳಸಿ: ಮಟನ್ ಬೇಯಿಸುವಾಗ ಪ್ರತಿ ಮೂರು ನಿಮಿಷಕ್ಕೊಮ್ಮೆ ಸ್ವಲ್ಪ ಉಗುರುಬೆಚ್ಚಗಿನ ನೀರನ್ನು ಚಿಮುಕಿಸುತ್ತಿರಿ. ತಣ್ಣೀರನ್ನು ಅಪ್ಪಿತಪ್ಪಿಯೂ ಸುರಿಯಬೇಡಿ. ಬಿಸಿ ನೀರನ್ನು ಬಳಸುವುದರಿಂದ ಮಟನ್ ರುಚಿಯಾಗಿರುತ್ತದೆ ಮತ್ತು ಗ್ಯಾಸ್ ಕೂಡ ಉಳಿತಾಯವಾಗುತ್ತದೆ.

4. ಸಣ್ಣ ತುಂಡುಗಳನ್ನು ಮಾಡಿ: ಮಟನ್ ಬೇಯಿಸುವಾಗ ಯಾವಾಗಲೂ ಸಣ್ಣ ಸಣ್ಣ ತುಂಡುಗಳನ್ನಾಗಿ ಮಾಡಿಕೊಳ್ಳಿ. ಇದರಿಂದ 20 ನಿಮಿಷ ತೆಗೆದುಕೊಳ್ಳುವ ಅಡುಗೆ 10 ನಿಮಿಷದಲ್ಲೇ ಮುಗಿಯುತ್ತದೆ. ಪಾತ್ರೆಗಿಂತ ಕುಕ್ಕರ್ ಬಳಸುವುದರಿಂದ ಮಟನ್ ಅತಿ ವೇಗವಾಗಿ ಮತ್ತು ಮೆತ್ತಗೆ ಬೇಯುತ್ತದೆ. ಮಧ್ಯಮ ಉರಿಯಲ್ಲಿ ಬೇಯಿಸುವುದು ಯಾವಾಗಲೂ ಉತ್ತಮ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular