HomeEntertainmentಕನ್ನಡಿಗರ ಪ್ರೀತಿಗೆ ಬಾಲಿವುಡ್ ಗಾಯಕ ಫುಲ್ ಫಿದಾ: ಇನ್‌ಸ್ಟಾಗ್ರಾಮ್‌ನಲ್ಲಿ ವಿಶಾಲ್ ಮಿಶ್ರಾ ಕನ್ನಡದ ಭಾವನಾತ್ಮಕ...

ಕನ್ನಡಿಗರ ಪ್ರೀತಿಗೆ ಬಾಲಿವುಡ್ ಗಾಯಕ ಫುಲ್ ಫಿದಾ: ಇನ್‌ಸ್ಟಾಗ್ರಾಮ್‌ನಲ್ಲಿ ವಿಶಾಲ್ ಮಿಶ್ರಾ ಕನ್ನಡದ ಭಾವನಾತ್ಮಕ ಸಂದೇಶ ವೈರಲ್

ಬಾಲಿವುಡ್‌ನ ಜನಪ್ರಿಯ ಗಾಯಕ ವಿಶಾಲ್ ಮಿಶ್ರಾ ಕನ್ನಡಿಗರು ಮತ್ತು ಕನ್ನಡ ಭಾಷೆಯ ಮೇಲಿರುವ ತಮ್ಮ ವಿಶೇಷ ಗೌರವವನ್ನು ವ್ಯಕ್ತಪಡಿಸಿದ್ದಾರೆ. ಯಶ್ ಅಭಿನಯದ ಟಾಕ್ಸಿಕ್ ಸಿನಿಮಾದ ತಬಾಹಿ ಹಾಗೂ ಆರದ ಗಾಯ ಹಾಡುಗಳ ಮೂಲಕ ದಕ್ಷಿಣ ಭಾರತದಲ್ಲೂ ಸದ್ದು ಮಾಡುತ್ತಿರುವ ಇವರು, ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಸಂಪೂರ್ಣವಾಗಿ ಕನ್ನಡದಲ್ಲೇ ಭಾವನಾತ್ಮಕ ಸಾಲುಗಳನ್ನು ಬರೆದುಕೊಂಡಿದ್ದಾರೆ.

ಯೋಗರಾಜ್ ಭಟ್ ಸಾಹಿತ್ಯ ಬರೆದು, ವಿಶಾಲ್ ಮಿಶ್ರಾ ಸ್ವತಃ ಸಂಯೋಜಿಸಿ ಹಾಡಿರುವ ಆರದ ಗಾಯ ಹಾಡಿನ ವಿಶೇಷ ವಿಡಿಯೋವನ್ನು ಅಭಿಮಾನಿಗಳಿಗಾಗಿ ಹಂಚಿಕೊಳ್ಳಲಾಗಿದೆ. ಕೈಗೆ ಪೆಟ್ಟಾಗಿದ್ದರೂ ಲೆಕ್ಕಿಸದೆ ಈ ಹಾಡನ್ನು ಹಾಡಿರುವ ಅವರು, ಕರ್ನಾಟಕದ ಮಣ್ಣು, ಭಾಷೆ ಮತ್ತು ಸಂಸ್ಕೃತಿ ತಮ್ಮ ಸಂಗೀತ ಪ್ರಯಾಣಕ್ಕೆ ದೊಡ್ಡ ಶಕ್ತಿಯನ್ನು ತಂದುಕೊಟ್ಟಿದೆ ಎಂದು ಸ್ಮರಿಸಿದ್ದಾರೆ.

ತಮಗೆ ರಾಕಿಂಗ್ ಸ್ಟಾರ್ ಯಶ್ ಅವರಂತಹ ಒಬ್ಬ ಸಹೋದರ ಸಿಕ್ಕಿರುವುದು ಅದೃಷ್ಟ. ಅವರ ಮೂಲಕ ಕನ್ನಡಿಗರ ಪ್ರೀತಿಯನ್ನು ಪಡೆಯಲು ಸಾಧ್ಯವಾಯಿತು ಹಾಗೂ ತಮ್ಮ ಸಂಗೀತದ ಮೂಲಕ ಈ ಪ್ರೀತಿಗೆ ಕೃತಜ್ಞತೆ ಸಲ್ಲಿಸುತ್ತಿರುವುದಾಗಿ ವಿಶಾಲ್ ತಿಳಿಸಿದ್ದಾರೆ. ಬೆಂಗಳೂರಿನ ತಮ್ಮ ಮನೆಗೆ ಶೀಘ್ರದಲ್ಲೇ ಭೇಟಿ ನೀಡಲಿದ್ದು, ಈ ವಿಶೇಷ ಹಾಡನ್ನು ಕರ್ನಾಟಕ ಹಾಗೂ ದಕ್ಷಿಣ ಭಾರತದ ಎಲ್ಲಾ ಅಭಿಮಾನಿಗಳಿಗೆ ಸಮರ್ಪಿಸುವುದಾಗಿ ಅವರು ಹೇಳಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ತಮ್ಮ ವಿಶಿಷ್ಟ ಕಂಠಸಿರಿಯಿಂದ ಈಗಾಗಲೇ ಶ್ರೋತೃಗಳ ಮನಗೆದ್ದಿರುವ ವಿಶಾಲ್ ಮಿಶ್ರಾ, ಕನ್ನಡಿಗರ ಹೃದಯದಲ್ಲಿ ಖಾಯಂ ಸ್ಥಾನ ಗಿಟ್ಟಿಸಿಕೊಳ್ಳುತ್ತಿದ್ದಾರೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular