ಬಾಲಿವುಡ್ ನಟಿ ಆಯೇಷಾ ಖಾನ್ ಅವರ ಇತ್ತೀಚಿನ ಸಾಮಾಜಿಕ ಜಾಲತಾಣದ ಪೋಸ್ಟ್ ಇದೀಗ ಭಾರೀ ಕುತೂಹಲಕ್ಕೆ ಕಾರಣವಾಗಿದೆ. ‘ಧುರಂಧರ್’ ಚಿತ್ರದ ‘ಶರಾರತ್’ ಹಾಡಿನ ಮೂಲಕ ಗಮನ ಸೆಳೆದಿರುವ ಆಯೇಷಾ, ಮಿಸ್ಟರಿ ಮ್ಯಾನ್ ಜೊತೆಗಿನ ರೊಮ್ಯಾಂಟಿಕ್ ಫೋಟೋಗಳನ್ನು ಹಂಚಿಕೊಂಡಿದ್ದು, ಕೈಯಲ್ಲಿ ಡೈಮಂಡ್ ರಿಂಗ್ ಕೂಡ ಕಾಣಿಸಿಕೊಂಡಿದೆ.
ಬಾಲಿವುಡ್ ನಟಿ ಆಯೇಷಾ ಖಾನ್ ಅವರ ಇತ್ತೀಚಿನ ಸಾಮಾಜಿಕ ಜಾಲತಾಣದ ಪೋಸ್ಟ್ ಇದೀಗ ಭಾರೀ ಕುತೂಹಲಕ್ಕೆ ಕಾರಣವಾಗಿದೆ. ‘ಧುರಂಧರ್’ ಚಿತ್ರದ ‘ಶರಾರತ್’ ಹಾಡಿನ ಮೂಲಕ ಗಮನ ಸೆಳೆದಿರುವ ಆಯೇಷಾ, ಮಿಸ್ಟರಿ ಮ್ಯಾನ್ ಜೊತೆಗಿನ ರೊಮ್ಯಾಂಟಿಕ್ ಫೋಟೋಗಳನ್ನು ಹಂಚಿಕೊಂಡಿದ್ದು, ಕೈಯಲ್ಲಿ ಡೈಮಂಡ್ ರಿಂಗ್ ಕೂಡ ಕಾಣಿಸಿಕೊಂಡಿದೆ. ಇದರಿಂದ ನಟಿ ಗುಟ್ಟಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರಾ ಎಂಬ ಚರ್ಚೆ ಶುರುವಾಗಿದೆ. ಆದರೆ ಆಯೇಷಾ ಈ ಬಗ್ಗೆ ಯಾವುದೇ ಅಧಿಕೃತ ಘೋಷಣೆ ಮಾಡಿಲ್ಲ. ಈ ಫೋಟೋಗಳು ಜ್ಯುವೆಲ್ಲರಿ ಬ್ರ್ಯಾಂಡ್‌ನ ಫೋಟೋಶೂಟ್‌ನ ಭಾಗವಾಗಿರಬಹುದು ಎನ್ನಲಾಗಿದ್ದು, ಸದ್ಯ ಅಭಿಮಾನಿಗಳ ಕುತೂಹಲಕ್ಕೆ ತೆರೆ ಬಿದ್ದಿಲ್ಲ.ಸಾಮಾಜಿಕ ಜಾಲತಾಣದಲ್ಲಿ ಅವರು ಹಂಚಿಕೊಂಡಿರುವ ಕೆಲವು ಫೋಟೋಗಳು ಅವರ ನಿಶ್ಚಿತಾರ್ಥದ ಬಗ್ಗೆ ಭಾರೀ ಚರ್ಚೆಗೆ ಕಾರಣವಾಗಿವೆ.
ಆಯೇಷಾ ಖಾನ್ ಅವರು ಬಿಳಿ ಬಣ್ಣದ ಸುಂದರ ಉಡುಗೆಯಲ್ಲಿ ಕಾಣಿಸಿಕೊಂಡಿದ್ದು, ಅವರ ಬೆರಳಿನಲ್ಲಿ ದೊಡ್ಡದಾದ ಡೈಮಂಡ್ ಉಂಗುರವೊಂದು ಗಮನ ಸೆಳೆದಿದೆ. ಇದೇ ವೇಳೆ, ರಹಸ್ಯ ವ್ಯಕ್ತಿಯೊಬ್ಬರ ಜೊತೆ ಆಪ್ತವಾಗಿ ಕಾಣಿಸಿಕೊಂಡಿರುವ ಫೋಟೋಗಳನ್ನು ಅವರು ಹಂಚಿಕೊಂಡಿದ್ದಾರೆ. ಆದರೆ ಫೋಟೋದಲ್ಲಿರುವ ವ್ಯಕ್ತಿಯ ಮುಖವನ್ನು ಆಯೇಷಾ ಬಹಿರಂಗಪಡಿಸಿಲ್ಲ.
ಈ ಫೋಟೋಗಳ ಜೊತೆಗೆ ಆಯೇಷಾ ‘A dream’ ಎಂಬ ಕ್ಯಾಪ್ಷನ್ ಬರೆದಿದ್ದಾರೆ. ಇದರಿಂದ ಅಭಿಮಾನಿಗಳಲ್ಲಿ ‘ಆಯೇಷಾ ಗುಟ್ಟಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರಾ?’ ಎಂಬ ಪ್ರಶ್ನೆ ಮೂಡಿದೆ. ಸಾಮಾಜಿಕ ಜಾಲತಾಣದಲ್ಲೂ ಈ ಬಗ್ಗೆ ಭಾರೀ ಚರ್ಚೆ ನಡೆಯುತ್ತಿದೆ.
ಆದರೆ, ಆಯೇಷಾ ಖಾನ್ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎಂಬುದಕ್ಕೆ ಇದುವರೆಗೆ ಯಾವುದೇ ಅಧಿಕೃತ ದೃಢೀಕರಣವಿಲ್ಲ. ಫೋಟೋಗಳಲ್ಲಿ ಜ್ಯುವೆಲ್ಲರಿ ಬ್ರ್ಯಾಂಡ್‌ನ ಟ್ಯಾಗ್ ಕಾಣಿಸಿಕೊಂಡಿರುವುದರಿಂದ, ಇದು ಆಭರಣದ ಬ್ರ್ಯಾಂಡ್‌ಗಾಗಿ ಮಾಡಿರುವ ಫೋಟೋಶೂಟ್ ಆಗಿರಬಹುದೆಂಬ ವರದಿಗಳೂ ಇವೆ. ಹೀಗಾಗಿ ಸದ್ಯಕ್ಕೆ ನಿಶ್ಚಿತಾರ್ಥದ ಸುದ್ದಿ ಕೇವಲ ವದಂತಿಯಷ್ಟೇ ಎನ್ನಲಾಗಿದೆ.
‘ಬಿಗ್ ಬಾಸ್ 17’ರಲ್ಲಿ ಕಾಣಿಸಿಕೊಂಡಿದ್ದ ಆಯೇಷಾ, ಬಳಿಕ ‘ಧುರಂಧರ್’ ಚಿತ್ರದ ‘ಶರಾರತ್’ ಹಾಡಿನಲ್ಲಿ ಕ್ರಿಸ್ಟಲ್ ಡಿಸೋಜಾ ಜೊತೆ ಕಾಣಿಸಿಕೊಂಡು ಮತ್ತಷ್ಟು ಜನಪ್ರಿಯತೆ ಗಳಿಸಿದ್ದರು. ಇದೀಗ ರಹಸ್ಯ ವ್ಯಕ್ತಿಯ ಜೊತೆಗಿನ ಫೋಟೋ ಹಾಗೂ ಡೈಮಂಡ್ ಉಂಗುರದಿಂದ ಮತ್ತೊಮ್ಮೆ ಸುದ್ದಿಯ ಕೇಂದ್ರವಾಗಿದ್ದಾರೆ.

