HomeKarnataka'ಸಂಕ್ರಾಂತಿ' ಗೆ ಮನೆಗೆ ಬಂದ ಮಗಳು - ಅಳಿಯನಿಗೆ 379 ಬಗೆಯ ವಿವಿಧ ಖಾದ್ಯ...!

‘ಸಂಕ್ರಾಂತಿ’ ಗೆ ಮನೆಗೆ ಬಂದ ಮಗಳು – ಅಳಿಯನಿಗೆ 379 ಬಗೆಯ ವಿವಿಧ ಖಾದ್ಯ…!

ಆಂಧ್ರಪ್ರದೇಶದ ಕೆಲವೊಂದು ಮನೆಗಳಲ್ಲಿ ಸಂಕ್ರಾಂತಿ ಹಬ್ಬಕ್ಕೆ ಮನೆಗೆ ಬರುವ ಅಳಿಯನಿಗೆ ವಿವಿಧ ರೀತಿಯ ಖಾದ್ಯಗಳನ್ನು ತಯಾರಿಸಿ ಬಡಿಸುವುದು ಹಿಂದಿನಿಂದಲೂ ನಡೆದುಕೊಂಡು ಬಂದಿರುವ ಪದ್ಧತಿ.

ಈ ಸಂಪ್ರದಾಯವನ್ನು ಈಗಲೂ ಪಾಲಿಸಿಕೊಂಡು ಬಂದಿದ್ದು, ಇದೀಗ ಕುಟುಂಬವೊಂದು ಸಂಕ್ರಾಂತಿ ಹಬ್ಬಕ್ಕೆ ಮನೆಗೆ ಬಂದ ಮಗಳು – ಅಳಿಯನಿಗೆ ಬರೋಬ್ಬರಿ 379 ಬಗೆಯ ವಿವಿಧ ಖಾದ್ಯಗಳನ್ನು ಬಡಿಸುವ ಮೂಲಕ ಎಲ್ಲರ ಗಮನ ಸೆಳೆದಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಆಂಧ್ರ ಪ್ರದೇಶದ ಏಲೂರು ನಗರದ ಕುಟುಂಬ ತಮ್ಮ ಅಳಿಯ ವಿಶಾಖಪಟ್ಟಣದ ಆನಕಾಪಲ್ಲಿ ಮೂಲದ ಬುದ್ಧ ಮುರಳೀಧರ್ ಅವರಿಗೆ ಈ ಭಕ್ಷ ಭೋಜನ ಬಡಿಸಿದ್ದು, ಇವರು ಕುಸುಮಾ ಅವರೊಂದಿಗೆ ಕಳೆದ ವರ್ಷದ ಏಪ್ರಿಲ್ 16 ರಂದು ವಿವಾಹವಾಗಿದ್ದರು.

For Latest News Updates, Join Our Whatsapp Community🚩
RELATED ARTICLES

Most Popular