HomeIndia'RCB' ಗೆಲುವಿನ ಬಳಿಕ ಅನುಷ್ಕಾ ಶರ್ಮಾಗೆ 'ಫ್ಲೈಯಿಂಗ್ ಕಿಸ್' ಕೊಟ್ಟ ವಿರಾಟ್ ಕೊಹ್ಲಿ ; ವೀಡಿಯೋ...

‘RCB’ ಗೆಲುವಿನ ಬಳಿಕ ಅನುಷ್ಕಾ ಶರ್ಮಾಗೆ ‘ಫ್ಲೈಯಿಂಗ್ ಕಿಸ್’ ಕೊಟ್ಟ ವಿರಾಟ್ ಕೊಹ್ಲಿ ; ವೀಡಿಯೋ ವೈರಲ್ |WATCH VIDEO

ಬೆಂಗಳೂರು: ಶನಿವಾರ ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 2026ರ ಉದ್ಘಾಟನಾ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ (SRH) ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಆರು ವಿಕೆಟ್‌ಗಳ ಭರ್ಜರಿ ಜಯ ದಾಖಲಿಸಿದೆ.

ಈ ಗೆಲುವಿನ ರೂವಾರಿ ವಿರಾಟ್ ಕೊಹ್ಲಿ, ಪಂದ್ಯದ ನಂತರ ಗ್ಯಾಲರಿಯಲ್ಲಿ ಕುಳಿತಿದ್ದ ತಮ್ಮ ಪತ್ನಿ ಅನುಷ್ಕಾ ಶರ್ಮಾಗೆ ‘ಫ್ಲೈಯಿಂಗ್ ಕಿಸ್’ ನೀಡುವ ಮೂಲಕ ಸಂಭ್ರಮಿಸಿದರು.ಅನುಷ್ಕಾ ಶರ್ಮಾ ಅವರೊಂದಿಗೆ ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಆಟಗಾರ್ತಿಯರು ಹಾಗೂ ಆರ್‌ಸಿಬಿ ಮಹಿಳಾ ತಂಡದ ನಾಯಕಿ ಸ್ಮೃತಿ ಮಂಧಾನ ಕೂಡ ಉಪಸ್ಥಿತರಿದ್ದರು. ಕೇವಲ 38 ಎಸೆತಗಳಲ್ಲಿ 5 ಸಿಕ್ಸರ್ ಹಾಗೂ 5 ಬೌಂಡರಿಗಳ ನೆರವಿನಿಂದ 69 ರನ್ ಸಿಡಿಸಿದ ಕೊಹ್ಲಿ, ತಂಡವನ್ನು ಗೆಲುವಿನ ದಡ ಸೇರಿಸಿದರು.

ವಿರಾಮದ ನಂತರ ಕಮ್‌ಬ್ಯಾಕ್: ಕಳೆದ ವರ್ಷದ ಐಪಿಎಲ್ ಫೈನಲ್ ನಂತರ ಕೊಹ್ಲಿ ಆಡುತ್ತಿರುವ ಮೊದಲ ಟಿ20 ಪಂದ್ಯ ಇದಾಗಿದ್ದರೂ, ಅವರ ಬ್ಯಾಟಿಂಗ್‌ನಲ್ಲಿ ಅದೇ ಹಳೆಯ ಲಯ ಕಂಡುಬಂದಿತು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಕೊಹ್ಲಿ ಮಾತು: ಪಂದ್ಯದ ನಂತರ ಮಾತನಾಡಿದ 37 ವರ್ಷದ ಕೊಹ್ಲಿ, “ನಾನು ಆಡುತ್ತಿರುವ ಕ್ರಿಕೆಟ್ ಪ್ರಮಾಣವನ್ನು ಗಮನಿಸಿದರೆ, ನಾನು ಸುಸ್ತಾಗುವ (Burn out) ಸಾಧ್ಯತೆ ಹೆಚ್ಚು. ಆದ್ದರಿಂದ ಈ ವಿರಾಮಗಳು ನನಗೆ ಮಾನಸಿಕವಾಗಿ ಮತ್ತು ದೈಹಿಕವಾಗಿ ಫ್ರೆಶ್ ಆಗಿರಲು ಸಹಾಯ ಮಾಡುತ್ತವೆ. ನಾನು ಮೈದಾನಕ್ಕೆ ಮರಳಿದಾಗ ಯಾವಾಗಲೂ 120% ಸಿದ್ಧತೆಯೊಂದಿಗೆ ಇರುತ್ತೇನೆ,” ಎಂದರು.”ಬರಿ ತಂಡದಲ್ಲಿ ಸ್ಥಾನ ಉಳಿಸಿಕೊಳ್ಳುವುದು ನನ್ನ ಗುರಿಯಲ್ಲ, ತಂಡದ ಗೆಲುವಿಗೆ ಸದಾ ಕೊಡುಗೆ ನೀಡುವುದು ಮತ್ತು ಸತತವಾಗಿ ಪ್ರದರ್ಶನ ನೀಡುವುದು ಮುಖ್ಯ,” ಎಂದು ಕೊಹ್ಲಿ ಹಿರಿಯ ಆಟಗಾರನ ಜವಾಬ್ದಾರಿಯನ್ನು ಒತ್ತಿ ಹೇಳಿದರು.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular