ಸಮಾರಂಭದಲ್ಲಿ ಊಟಕ್ಕೆ ಕುಳಿತ ವೃದ್ಧರೆದುರು ಸಾಲುಸಾಲು ಸಿಹಿ ತಿಂಡಿ; ವಿಡಿಯೋ ಹಂಚಿಕೊಂಡು ತಮಾಷೆ ಮಾಡುತ್ತಿದ್ದಾರೆ ನೆಟ್ಟಿಗರು !

ಸಮಾರಂಭವೊಂದರಲ್ಲಿ ಊಟಕ್ಕೆ ಕುಳಿತ ವೃದ್ಧರ ಪಾಡು ನೋಡಿ….ಬಾಳೆಯ ತುಂಬೆಲ್ಲ ಬರಿ ಸಿಹಿ ತಿನಿಸುಗಳದ್ದೇ ರಾಶಿ… ಬಡಿಸಲು ಪಾತ್ರೆ ಹಿಡಿದು ಬಂದವರೆಲ್ಲ ಬರೀ ಸ್ವೀಟನ್ನೇ ಬಡಿಸಿ ಹೋಗುತ್ತಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋವೊಂದು ಭಾರಿ ವೈರಲ್ ಆಗಿದೆ. ಸಮಾರಂಭದಲ್ಲಿ ಊಟಕ್ಕೆಂದು ಹಿರಿಯರು ಸಾಲಾಗಿ ಕುಳಿತಿದ್ದಾರೆ. ಊಟ ಬಡಿಸಲು ಬಂದ ಯುವ ತಂಡ ಒಬ್ಬರಾದ ಮೇಲೊಬ್ಬರಂತೆ ಒಂದೊಂದೇ ಸ್ವೀಟುಗಳನ್ನು ಬಡಿಸುತ್ತಾ ಸಾಗಿದ್ದಾರೆ. ಬಾಳೆ ತುಂಬೆಲ್ಲ ಬರೀ ಸ್ವೀಟುಗಳದ್ದೇ ಕಾರುಬಾರು…. ಬರಿ ವಿವಿಧ ಬಗೆಯ ಸಿಹಿ ತಿಂಡಿಯನ್ನೇ ಬಡಿಸುತ್ತಿರುವುದನ್ನು ಕಂಡು ಊಟಕ್ಕೆ ಕುಳಿತ ವೃದ್ಧರ ಸಹನೆಯೂ ಮೀರುತ್ತಿದೆ. ಬಾಳೆಲೆ ತುಂಬ ಬರೀ ಸ್ವೀಟೇ ಆದರೆ ಶುಗರ್ ಇದ್ದವರ ಕಥೆ ಏನು? ಎಂದು ವಿಡಿಯೋ ನೋಡಿದರು ಕೇಳುತ್ತಿದ್ದಾರೆ.

ಬಿಪಿ, ಶುಗರ್ ನಂತ ಕಾಯಿಲಿಯಿದ್ದವರು ಪಾಪ ಏನು ಮಾಡಬೇಕು? ಅನ್ನ ಸಾಂಬಾರ್ ಆದ್ರೂ ಬಡಿಸಬಾರದೇ ಎಂದು ನೆಟ್ಟಿಗರು ಕಮೆಂಟ್ ಮಾಡಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read