HomeLatest NewsBREAKING: ಸಿನಿಮಾದಲ್ಲಿ ಚಾನ್ಸ್ ಕೊಡಿಸುವುದಾಗಿ ಗಾಯಕಿ ಮೇಲೆ ಅತ್ಯಾಚಾರ: ನಟ ಉತ್ತರ ಕುಮಾರ್ ಅರೆಸ್ಟ್

BREAKING: ಸಿನಿಮಾದಲ್ಲಿ ಚಾನ್ಸ್ ಕೊಡಿಸುವುದಾಗಿ ಗಾಯಕಿ ಮೇಲೆ ಅತ್ಯಾಚಾರ: ನಟ ಉತ್ತರ ಕುಮಾರ್ ಅರೆಸ್ಟ್

ಘಾಜಿಯಾಬಾದ್(ಉತ್ತರ ಪ್ರದೇಶ): ಅತ್ಯಾಚಾರ ಪ್ರಕರಣದಲ್ಲಿ ಹರಿಯಾಣ ನಟ, ನಿರ್ದೇಶಕ ಉತ್ತರ ಕುಮಾರ್ ಬಂಧಿಸಲಾಗಿದ್ದು, ಬಂಧನದ ಸ್ವಲ್ಪ ಸಮಯದ ನಂತರ ಆಸ್ಪತ್ರೆಗೆ ದಾಖಲಾಗಿದ್ದಾರೆ.

25 ವರ್ಷದ ಗಾಯಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಹರಿಯಾಣ ನಟ ಉತ್ತರ ಕುಮಾರ್ ಅವರನ್ನು ಸೋಮವಾರ ಬಂಧಿಸಲಾಯಿತು. ಆದರೆ ಬಂಧನದ ಸ್ವಲ್ಪ ಸಮಯದ ನಂತರ, ಅವರು ಅನಾರೋಗ್ಯದಿಂದ ಬಳಲುತ್ತಿದ್ದಾರೆ ಎಂದು ದೂರು ನೀಡಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಜನವರಿ 1, 2020 ರಿಂದ ಜುಲೈ 31, 2023 ರವರೆಗೆ ಮದುವೆ ಮತ್ತು ಚಲನಚಿತ್ರಗಳಲ್ಲಿ ಪಾತ್ರಗಳ ಕೊಡಿಸುವ ನೆಪದಲ್ಲಿ ಕುಮಾರ್ ತನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಿ ಮಹಿಳಾ ಗಾಯಕಿಯೊಬ್ಬರು ಜುಲೈ 18 ರಂದು ದೂರು ದಾಖಲಿಸಿದ್ದಾರೆ ಎಂದು ಅವರು ತಿಳಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಹರಿಯಾಣ ಮೂಲದ ನಟ ಉತ್ತರ ಕುಮಾರ್ ಅವರನ್ನು ಬಂಧಿಸಲಾಗಿದೆ. ಗಾಜಿಯಾಬಾದ್ ಪೊಲೀಸರು ಅಮ್ರೋಹಾದ ಫಾರ್ಮ್ ಹೌಸ್ ನಿಂದ ನಟನನ್ನು ಬಂಧಿಸಿದ್ದಾರೆ. ಶಾಲಿಮಾರ್ ಗಾರ್ಡನ್ ಪೊಲೀಸ್ ಠಾಣೆಯಲ್ಲಿ ಅವರ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಾಗಿದೆ. ಸಂತ್ರಸ್ತೆ ಅವರ ಮೇಲೆ ದೈಹಿಕ ಕಿರುಕುಳದ ಆರೋಪ ಮಾಡಿದ್ದಾರೆ. ವೈದ್ಯರು ಅವರ ಫಿಟ್ನೆಸ್ ವರದಿಯನ್ನು ನೀಡಿದ ನಂತರ ಕುಮಾರ್ ಅವರನ್ನು ಮತ್ತೆ ವಶಕ್ಕೆ ಪಡೆಯಲಾಗುವುದು ಎಂದು ಡಿಸಿಪಿ (ಟ್ರಾನ್ಸ್-ಹಿಂದಾನ್) ನಿಮಿಷ್ ಪಾಟೀಲ್ ತಿಳಿಸಿದ್ದಾರೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular