HomeSpecialಕೂದಲಿನ ಸಮಸ್ಯೆಗೆ ಕಾರಣವಾಗುತ್ತೆ ನಿಮ್ಮ ಆಹಾರ ಕ್ರಮ, ಜೀವನ ಶೈಲಿ...!

ಕೂದಲಿನ ಸಮಸ್ಯೆಗೆ ಕಾರಣವಾಗುತ್ತೆ ನಿಮ್ಮ ಆಹಾರ ಕ್ರಮ, ಜೀವನ ಶೈಲಿ…!

ನಮ್ಮ ಆಹಾರ ಕ್ರಮ, ಜೀವನ ಶೈಲಿಯಿಂದ ಕೂದಲುದುರುವ ಸಮಸ್ಯೆ ಕಾಡುತ್ತದೆ. ಇದಕ್ಕೆ ಸರಿಯಾದ ಆರೈಕೆ ಮಾಡಬೇಕು. ಇಲ್ಲವಾದರೆ ಬೊಕ್ಕ ತಲೆಯ ಸಮಸ್ಯೆಗೆ ಕಾರಣವಾಗಬಹುದು. ಹಾಗಾಗಿ ಮಹಿಳೆಯರು ಹಾಗೂ ಪುರುಷರು ಕೂದಲಿನ ಸಮಸ್ಯೆಗೆ ಕಾರಣವಾಗುವಂತಹ ಈ ಆಹಾರಗಳನ್ನು ಸೇವಿಸಬೇಡಿ.

*ಸಕ್ಕರೆ : ಕೂದಲಿನ ಆರೋಗ್ಯಕ್ಕೆ ಪ್ರೋಟೀನ್ ಬೇಕು. ಆದರೆ ಸಕ್ಕರೆ ಪ್ರೋಟೀನ್ ಅನ್ನು ಹೀರಿಕೊಳ್ಳುತ್ತದೆ. ಇದರಿಂದ ಕೂದಲಿಗೆ ಬೆಳವಣಿಗೆ ಕುಂಠಿತವಾಗುತ್ತದೆ.

*ಎಣ್ಣೆಯುಕ್ತ ಆಹಾರ : ಇದು ನೆತ್ತಿಯ ತುರಿಕೆ, ತಲೆಹೊಟ್ಟು, ಜಿಡ್ಡಿಗೆ ಕಾರಣವಾಗುತ್ತದೆ. ಇದರಿಂದ ರಂಧ್ರಗಳು ಮುಚ್ಚಿಹೋಗಿ ಕೂದಲುದುರುತ್ತದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

* ಪಿಷ್ಟ ಆಹಾರ : ಹಿಟ್ಟಿನಿಂದ ತಯಾರಿಸಿದ ಬಿಳಿ ಬ್ರೆಡ್, ಬಿಳಿ ಪಾಸ್ತಾ ಮುಂತಾದ ಆಹಾರಗಳನ್ನು ಸೇವಿಸಬೇಡಿ. ಇದರಲ್ಲಿ ಸಕ್ಕರೆ ಅಂಶ ಅಧಿಕವಾಗಿದ್ದು ಕೂದಲುದುರುವಿಕೆಗೆ ಕಾರಣವಾಗುತ್ತದೆ.

*ಪ್ರೋಟೀನ್ ಕಡಿಮೆ ಇರುವ ಆಹಾರ : ಕೂದಲಿನ ಬೆಳವಣಿಗೆಗೆ ಪ್ರೋಟೀನ್ ಅತ್ಯವಶ್ಯಕವಾದ್ದರಿಂದ ಪ್ರೋಟೀನ್ ಹೆಚ್ಚಾಗಿರುವ ಆಹಾರ ಸೇವಿಸಿ. ಪ್ರೋಟೀನ್ ಕಡಿಮೆ ಇರುವ ಆಹಾರ ಸೇವಿಸಿದರೆ ಕೂದಲು ಸರಿಯಾಗಿ ಬೆಳೆಯುವುದಿಲ್ಲ.

For Latest News Updates, Join Our Whatsapp Community🚩
RELATED ARTICLES

Most Popular