HomeLatest Newsನಮ್ಮ ಮೆಟ್ರೋ ಪಿಂಕ್ ಲೈನ್ ನಲ್ಲಿ ಚಾಲಕರಹಿತ ರೈಲು ಅನಾವರಣ

ನಮ್ಮ ಮೆಟ್ರೋ ಪಿಂಕ್ ಲೈನ್ ನಲ್ಲಿ ಚಾಲಕರಹಿತ ರೈಲು ಅನಾವರಣ

ಬೆಂಗಳೂರು: ನಮ್ಮ ಮೆಟ್ರೋ ಪಿಂಕ್ ಲೈನ್ ನಲ್ಲಿ ಚಾಲಕರಹಿತ ರೈಲು ಅನಾವರಣ ಮಾಡಲಾಗಿದೆ. ಬಿಎಂಆರ್‌ಸಿಎಲ್ ಅನಾವರಣ ಮಾಡಿದ್ದು, ಡಿಸೆಂಬರ್ 15 ಅಥವಾ 16ರಂದು ಹೊಸ ರೈಲುಗಳು ಬಿಎಂಆರ್‌ಸಿಎಲ್ ಡಿಪೋ ತಲುಪಲಿವೆ.

ಮೊದಲ ಪ್ರೋಟೋಟೈಪ್ ರೈಲು ಬಿಡುಗಡೆ ಮಾಡಲಾಗಿದ್ದು, ಚಾಲಕರಹಿತ ಹೊಸ ರೈಲು ಬೆಂಗಳೂರಿನ ಕೊತ್ತನೂರು ಡಿಪೋವನ್ನು ತಲುಪಲಿವೆ. ಮೊದಲ ಹಂತದಲ್ಲಿ ಪಿಂಕ್ ಲೈನ್ ಗೆ ಆರು ಡ್ರೈವರ್ಲೆಸ್ ರೈಲುಗಳು ಬರಲಿವೆ. ಇಂದು ಮೊದಲ ಪ್ರೋಟೋಟೈಪ್ ರೈಲಿನ ರೋಲ್ ಔಟ್ ಮಾಡಲಾಗಿದೆ.

ಕಾಳೇನ ಅಗ್ರಹಾರ- ನಾಗವಾರದ ನಡುವೆ ಪಿಂಕ್ ಲೈನ್ ರೈಲು ಸಂಚರಿಸಲಿದೆ. 21 ಕಿಲೋಮೀಟರ್ ಉದ್ದದ ಪಿಂಕ್ ಲೈನ್ ನಲ್ಲಿ 18 ಸ್ಟೇಷನ್ ಗಳು ಇವೆ. 12 ಅಂಡರ್ ಗ್ರೌಂಡ್, ಆರು ಎಲಿವೇಟೆಡ್ ಮೆಟ್ರೋ ಸ್ಟೇಷನ್ ಗಳಿವೆ. 2026ರ ಮೇ ತಿಂಗಳಲ್ಲಿ ಕಾಳೇನ ಅಗ್ರಹಾರ ತಾವರೆಕೆರೆ ನಡುವೆ ಸಂಚರಿಸಲಿವೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಆರು ಎಲಿವೇಟೆಡ್ ಮೆಟ್ರೋ ಸ್ಟೇಷನ್ ಓಪನ್ ಮಾಡಲು ಬಿಎಂಆರ್‌ಸಿಎಲ್ ಸಿದ್ದತೆ ಮಾಡಿಕೊಂಡಿದೆ. ರೈಲುಗಳು ಬರುತ್ತಿದ್ದಂತೆ ವಾಣಿಜ್ಯ ಸಂಚಾರ ಆರಂಭವಾಗಲಿದೆ. ವಾಣಿಜ್ಯ ಸಂಚಾರ ಆರಂಭಿಸಲು ಬಿಎಮ್ಆರ್‌ಸಿಎಲ್ ಸಿದ್ದತೆ ಮಾಡಿಕೊಂಡಿದೆ. ಮೆಟ್ರೋ ಪಿಂಕ್ ಲೈನ್ ನಲ್ಲಿ ಒಟ್ಟು 23 ಡ್ರೈವರ್ಲೆಸ್ ರೈಲುಗಳು ಸಂಚರಿಸಲಿವೆ. 23 ಡ್ರೈವರ್ಲೆಸ್ ರೈಲುಗಳಿಗೆ ಬಿಎಂಆರ್ಸಿಎಲ್ ಆರ್ಡರ್ ನೀಡಿದೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular