HomeRecipiesಸೋಷಿಯಲ್ ಮೀಡಿಯಾದಲ್ಲಿ ಜಪಾನೀಸ್ ಮ್ಯಾಂಗೋ ಸ್ಯಾಂಡ್‌ವಿಚ್ ಕ್ರೇಜ್: ಕೇವಲ 3 ಪದಾರ್ಥಗಳಲ್ಲಿ ಮನೆಯಲ್ಲೇ ಮಾಡಿ ಸೂಪರ್...

ಸೋಷಿಯಲ್ ಮೀಡಿಯಾದಲ್ಲಿ ಜಪಾನೀಸ್ ಮ್ಯಾಂಗೋ ಸ್ಯಾಂಡ್‌ವಿಚ್ ಕ್ರೇಜ್: ಕೇವಲ 3 ಪದಾರ್ಥಗಳಲ್ಲಿ ಮನೆಯಲ್ಲೇ ಮಾಡಿ ಸೂಪರ್ ಡೆಸರ್ಟ್

ಬೆಂಗಳೂರು: ಬೇಸಿಗೆಯ ಬಿಸಿಲಿಗೆ ತಂಪಾದ ಮತ್ತು ಡಿಫರೆಂಟ್ ಆದ ಏನನ್ನಾದರೂ ಟ್ರೈ ಮಾಡಬೇಕಿತ್ತಾ? ಹಾಗಾದ್ರೆ ಸದ್ಯ ಇಂಟರ್ನೆಟ್‌ನಲ್ಲಿ ಸಖತ್ ಟ್ರೆಂಡ್ ಸೃಷ್ಟಿಸುತ್ತಿರುವ ಜಪಾನೀಸ್ ಮ್ಯಾಂಗೋ ಸ್ಯಾಂಡ್‌ವಿಚ್(Japanese Mango Sandwich) ನಿಮಗಾಗಿ ಸೂಕ್ತವಾಗಿದೆ. ಜಪಾನ್‌ನ ಪ್ರಸಿದ್ಧ ಕೆಫೆಗಳಲ್ಲಿ ಸಿಗುವ ಈ ಫ್ರೂಟ್ ಸ್ಯಾಂಡ್‌ವಿಚ್, ಈಗ ಕೇವಲ ಮೂರೇ ಮೂರು ಪದಾರ್ಥಗಳನ್ನು ಬಳಸಿ ಮನೆಯಲ್ಲೇ ಸುಲಭವಾಗಿ ಮಾಡುವಂತೆ ವೈರಲ್ ಆಗಿದೆ.ಅದರ ಆಕರ್ಷಕ ಲುಕ್ ಮತ್ತು ಹದವಾದ ಸಿಹಿಯಿಂದಾಗಿ ಸದ್ಯ ಇನ್‌ಸ್ಟಾಗ್ರಾಮ್ ಹಾಗೂ ಫೇಸ್‌ಬುಕ್‌ನಲ್ಲಿ ಫುಡ್ ಪ್ರೇಮಿಗಳ ಗಮನ ಸೆಳೆಯುತ್ತಿದೆ.

ಏನಿದರ ವಿಶೇಷತೆ?

ಮಾವಿನ ಹಣ್ಣಿನ ನೈಸರ್ಗಿಕ ಸಿಹಿ ಮತ್ತು ಕೆನೆಭರಿತ ವಿಪ್ಡ್ ಕ್ರೀಮ್‌ನ ಕಾಂಬಿನೇಷನ್ ಈ ಸ್ಯಾಂಡ್‌ವಿಚ್‌ನ ಹೈಲೈಟ್. ಇದು ತಿನ್ನಲು ತುಂಬಾ ಲೈಟ್ ಆಗಿರುವುದರಿಂದ ಬೇಸಿಗೆಯ ಕ್ರೇವಿಂಗ್ಸ್‌ಗೆ ಪರ್ಫೆಕ್ಟ್ ಆಪ್ಷನ್.

ಬೇಕಾಗುವ ಪದಾರ್ಥಗಳು:

ಸಾಫ್ಟ್ ವೈಟ್ ಬ್ರೆಡ್

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಮಾವಿನ ಹಣ್ಣಿನ ಸ್ಲೈಸ್‌ಗಳು

ವಿಪ್ಡ್ ಕ್ರೀಮ್ (ಅಥವಾ ವೆನಿಲ್ಲಾ ಐಸ್‌ಕ್ರೀಮ್)

ಮಾಡುವ ಅತ್ಯಂತ ಸರಳ ವಿಧಾನ:


ಮೊದಲು ಬ್ರೆಡ್ ಸ್ಲೈಸ್ ಮೇಲೆ ವಿಪ್ಡ್ ಕ್ರೀಮ್ ಅಥವಾ ವೆನಿಲ್ಲಾ ಐಸ್‌ಕ್ರೀಮ್ ಅನ್ನು ಸಮನಾಗಿ ಹರಡಿ.

ಅದರ ಮೇಲೆ ತಾಜಾ ಮಾವಿನ ಹಣ್ಣಿನ ತುಂಡುಗಳನ್ನು ಅಂದವಾಗಿ ಜೋಡಿಸಿ, ಮತ್ತೊಂದು ಬ್ರೆಡ್‌ನಿಂದ ಮುಚ್ಚಿ.

ನಂತರ ಇದನ್ನು ಪ್ಲಾಸ್ಟಿಕ್ ಕವರ್‌ನಲ್ಲಿ (Plastic Wrap) ಗಟ್ಟಿಯಾಗಿ ಸುತ್ತಿ ಸ್ವಲ್ಪ ಸಮಯ ಫ್ರೀಜರ್‌ನಲ್ಲಿ ಇಡಿ.

ಚೆನ್ನಾಗಿ ಸೆಟ್ ಆದ ಮೇಲೆ ಹೊರತೆಗೆದು, ಕ್ರಾಸ್ ಆಗಿ (ತ್ರಿಕೋನ ಆಕಾರದಲ್ಲಿ) ಕತ್ತರಿಸಿದರೆ ಇನ್‌ಸ್ಟಾಗ್ರಾಮ್ ಸ್ಟೈಲ್‌ನ ಜಪಾನೀಸ್ ಮ್ಯಾಂಗೋ ಸ್ಯಾಂಡ್‌ವಿಚ್ ಸವಿಯಲು ಸಿದ್ಧ

ನಮ್ಮ ಟಿಪ್: ಕತ್ತರಿಸುವಾಗ ಮಾವಿನ ಹಣ್ಣಿನ ಲೇಯರ್ ಮಧ್ಯದಲ್ಲಿ ಅಂದವಾಗಿ ಕಾಣುವಂತೆ ಕಟ್ ಮಾಡಿದರೆ ನಿಮ್ಮ ಸೋಷಿಯಲ್ ಮೀಡಿಯಾ ಪೋಸ್ಟ್‌ಗೆ ಸೂಪರ್ ಫೋಟೋ ಕೂಡ ಸಿಗುತ್ತದೆ

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

LEAVE A REPLY

Please enter your comment!
Please enter your name here

Most Popular