HomeLatest Newsರಣಹದ್ದುವಿನ ಮೇಲೆ ಟ್ರ್ಯಾಕರ್, ಜಿಪಿಎಸ್, ಕ್ಯಾಮರಾ ಪತ್ತೆ ಪ್ರಕರಣ: ರಹಸ್ಯ ಬಯಲು!

ರಣಹದ್ದುವಿನ ಮೇಲೆ ಟ್ರ್ಯಾಕರ್, ಜಿಪಿಎಸ್, ಕ್ಯಾಮರಾ ಪತ್ತೆ ಪ್ರಕರಣ: ರಹಸ್ಯ ಬಯಲು!

ವಿಜಯಪುರ: ಕೆಲ ದಿನಗಳ ಹಿಂದೆ ವಿಜಯಪುರದಲ್ಲಿ ಟ್ರ್ಯಾಕರ್, ಜಿಪಿಎಸ್, ಕ್ಯಾಮರಾ ಅಳವಡಿಸಿದ್ದ ರಣಹದ್ದುವೊಂದು ಪತ್ತೆಯಾಗಿದ್ದು, ಜಿಲ್ಲೆಯಲ್ಲಿ ಭಾರಿ ಆತಂಕ ಮೂಡಿಸಿತ್ತು. ವಿಜಯಪುರ ಜಿಲ್ಲೆಯ ಚಡಚಣ ತಾಲೂಕಿನ ಗೋಟ್ಯಾಳ ಗ್ರಾಮದ ತೋಟದಲ್ಲಿ ಈ ರಣಹದ್ದು ಪತ್ತೆಯಾಗಿತ್ತು.

ತೋಟದಲ್ಲಿ ಅಸಹಜ ಸ್ಥಿತಿಯಲ್ಲಿ ದೊಡ್ದ ಪಕ್ಷಿಯೊಂದು ಕುಳಿತಿತ್ತು. ಇದನ್ನು ಕಂಡು ಸ್ಥಳೀಯರು ಗಾಬರಿಯಾಗಿದ್ದರು. ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕಾಗಮಿಸಿದ ಪೊಲೀಸರು ಪರಿಶೀಲಿಸಿದಾಗ ರಣಹದ್ದುವಿನ ಕಾಲಿನಲ್ಲಿ ಗುರುತಿನ ಸಂಖ್ಯೆ ಅಳವಡಿಸಿರುವುದು ಪತ್ತೆಯಾಗಿದೆ. ಅಲ್ಲದೇ ಅದರಲ್ಲಿ ಜಿಪಿಎಸ್, ಟ್ರ್ಯಾಕರ್, ಕ್ಯಾಮರಾಗಳು ಅಳವಡಿಸಿರುವುದು ಕಂಡುಬಂದಿದೆ. ಇದು ಸಾಕಷ್ಟು ಅನುಮಾನಕ್ಕೆ ಕಾರಣವಾಗಿತ್ತು.

ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದರು. ವೈಜ್ಞಾನಿಕ ಅಧ್ಯಯನಕ್ಕಾಗಿ ರಣಹದ್ದುವಿಗೆ ಟ್ಯಾಗ್ ಅಳವಡಿಸಿದ್ದಾರೆ ಎಂದು ತಿಳಿದುಬಂದಿದೆ. ಈ ರಣಹದ್ದು ಮಹಾರಾಷ್ಟ್ರದ ನಾಗಪುರ ಬಳಿಯ ಮೇಲಘಾಟ ಪ್ರದೇಶದಿಂದ ಬಂದಿದೆ. ಮಹಾರಾಷ್ಟ್ರ ಅರಣ್ಯ ಇಲಾಖೆಯು ರಣಹದ್ದುಗಳ ಜೀವನಶೈಲಿ, ಸಂಚಾರ ಮಾರ್ಗ ಹಾಗೂ ಇತರೆ ಪಕ್ಷಿಗಳ ಕುರಿತು ಮಾಹಿತಿ ಸಂಗ್ರಹಿಸುವ ನಿಟ್ಟಿನಲ್ಲಿ ಜಿಪಿಎಸ್ ಹಾಗೂ ಟ್ರ್ಯಾಕರ್ ಅಳವಡಿಸಿದೆ ಎಂಬ ಮಾಹಿತಿ ಲಭ್ಯವಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಜಿಪಿಎಸ್ ಹಾಗೂ ಟ್ರ್ಯಾಕರ್ ಗಳ ಭಾರದಿಂದಾಗಿ ರಣಹದ್ದು ಬಳಲಿದ್ದು, ಹಾರಲು ಸಾಧ್ಯವಾಗದ ಸ್ಥಿತಿ ತಲುಪಿತ್ತು ಎಂದು ಅರಣ್ಯಾಧಿಕಾರಿಗಳು ಮಾಹಿತಿ ನೀಡಿದ್ದಾರೆ. ಸದ್ಯ ವಿಜಯಪುರ ಜಿಲ್ಲಾ ಅರಣ್ಯಾಧಿಕಾರಿಗಳು ರಣಹದ್ದುವನ್ನು ತಮ್ಮ ಸುಪರ್ಧಿಗೆ ಪಡೆದು ಅಗತ್ಯ ಆರೈಕೆ ಮಾಡುತ್ತಿದ್ದಾರೆ. ರಣಹದ್ದುವಿನ ಆರೋಗ್ಯ ಸುಧಾರಿಸಿದ ಬಳಿಕ ಮತ್ತೆ ಅದನ್ನು ಹಾರಿ ಬಿಡುವ ಬಗ್ಗೆ ಮಹಾರಾಷ್ಟ್ರ ಅರಣ್ಯ ಇಲಕಹೆ ಅಧಿಕಾರಿಗಳ ಜೊತೆ ಸಮಾಲೋಚನೆ ನಡೆಸಲಾಗುವುದು ಎಂದು ವಿಜಯಪುರ ಅರಣ್ಯ ಅಧಿಕಾರಿಗಳು ತಿಳಿಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular