ಕೋಲಾರ : ಕೋಲಾರದಲ್ಲಿ ಘೋರ ಘಟನೆಯೊಂದು ಸಂಭವಿಸಿದ್ದು, ಕಲ್ಲು ಗಣಿಗಾರಿಕೆ ವೇಳೆ ಬಂಡೆ ಬಿದ್ದು ಹಿಟಾಚಿ ಚಾಲಕ ದುರ್ಮರಣಕ್ಕೀಡಾದ ಘಟನೆ ನಡೆದಿದೆ. ಕೋಲಾರ ತಾಲೂಕಿನ ಬುಸನಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದೆ.
ಮೃತನನ್ನು ಆಂಧ್ರ ಮೂಲದ ಹಿಟಾಚಿ ಚಾಲಕ ಶಣ್ಮುಗಂ (45) ಎಂದು ಗುರುತಿಸಲಾಗಿದೆ.
ಚೌಡಪ್ಪ ಎಂಬುವವರು ನಡೆಸುತ್ತಿದ್ದ ಕಲ್ಲಿ ಗಣಿಗಾರಿಕೆ ವೇಳೆ ಈ ದುರ್ಘಟನೆ ನಡೆದಿದೆ. ಮೊದಲು ಲಾರಿಗೆ ಡಿಕ್ಕಿಯಾಗಿ ಸಾವು ಎಂದು ಬಿಂಬಿಸಲು ಯತ್ನ ನಡೆದಿದೆ ಎಂದು ಆರೋಪಿಸಲಾಗಿತ್ತು. ವೇಮಗಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

