HomeKarnatakaBREAKING : ರಾಜ್ಯದಲ್ಲಿ ಮತ್ತೊಂದು ಅಮಾನವೀಯ ಘಟನೆ : ಕೂಲಿ ಕಾರ್ಮಿಕರನ್ನು ಹಿಡಿದು ಹಿಗ್ಗಾಮುಗ್ಗ ಥಳಿಸಿದ...

BREAKING : ರಾಜ್ಯದಲ್ಲಿ ಮತ್ತೊಂದು ಅಮಾನವೀಯ ಘಟನೆ : ಕೂಲಿ ಕಾರ್ಮಿಕರನ್ನು ಹಿಡಿದು ಹಿಗ್ಗಾಮುಗ್ಗ ಥಳಿಸಿದ ಇಟ್ಟಂಗಿಭಟ್ಟಿ ಮಾಲೀಕ.!

ವಿಜಯಪುರ: ಇಟ್ಟಂಗಿ ಭಟ್ಟಿ ಮಾಲೀಕನೊಬ್ಬ ಮೂವರು ಕಾರ್ಮಿಕರನ್ನು ಹಿಡಿದು ಹಿಗ್ಗಾಮುಗ್ಗಾ ಪೈಪ್ ನಿಂದ ಥಳಿಸಿರುವ ಅಮಾನುಷ ಘಟನೆ ವಿಜಯಪುರದಲ್ಲಿ ನಡೆದಿದೆ.

ಇಟ್ಟಂಗಿ ಭಟ್ಟಿ ಮಾಲೀಕ ಖೇಮು ರಾಠೋಡ್ ಎಂಬಾತ ಮೂವರು ಕಾರ್ಮಿಕರಿಗೆ ಮನಸೋ ಇಚ್ಛೆ ಹೊಡೆದಿದ್ದಾರೆ. ಮೂವರು ಕಾರ್ಮಿಕರು ಮುಂಗಡವಾಗಿ ಹಣ ಪಡೆದು ಬಳಿಕ ಕೆಲಸಕ್ಕೆ ಬಾರದೇ ಸತಾಯಿಸುತ್ತಿದ್ದರಂತೆ. ಕೆಲಸಕ್ಕೆ ಬಾರದೇ ವಿಳಂಬ ಮಾಡುತ್ತಿರುವುದಕ್ಕೆ ಕೋಪಗೊಂದ ಮಾಲೀಕ ಪೈಪ್ ಗಳಿಂದ ನಮಬಂದಂತೆ ಥಳಿಸಿದ್ದಾರೆ.

ವಿಜಯಪುರದ ಗಂಧಿ ಸ್ಟಾರ್ ಚೌಕ್ ಬಳಿ ಈ ಘಟನೆ ನಡೆದಿದೆ. ಸದಾಶಿವ ಮಾದರ, ಸದಾಶಿವ ಬಬಲಾದಿ ಹಾಗೂ ಉಮೇಶ್ ಎಂಬುವವರನ್ನು ಥಳಿಸಲಾಗಿದ್ದು, ಮಾಲಿಕನ ಏಟಿಗೆ ಮೂವರು ಕಾರ್ಮಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

 

For Latest News Updates, Join Our Whatsapp Community🚩
RELATED ARTICLES

Most Popular