HomeIndiaರೈಲ್ವೆ ಹಳಿ ಮೇಲೆ ವಿಡಿಯೋ ಮಾಡುವಾಗಲೇ ಬಂದೆರಗಿತ್ತು ಸಾವು...!

ರೈಲ್ವೆ ಹಳಿ ಮೇಲೆ ವಿಡಿಯೋ ಮಾಡುವಾಗಲೇ ಬಂದೆರಗಿತ್ತು ಸಾವು…!

ಯುವಕರಿಬ್ಬರು ಮೊಬೈಲ್ ಮೂಲಕ ರೈಲು ಹಳಿ ಮೇಲೆ ವಿಡಿಯೋ ಮಾಡುತ್ತಿರುವಾಗ ದುರಂತ ಸಾವನ್ನಪ್ಪಿದ್ದಾರೆ. ವೇಗವಾಗಿ ಬಂದ ರೈಲು ಹರಿದ ಪರಿಣಾಮ ಈ ಘಟನೆ ಸಂಭವಿಸಿದೆ.

ಫೆಬ್ರವರಿ 22ರಂದು ನವದೆಹಲಿಯ ಕಾಂತಿನಗರ್ ಫ್ಲೈ ಓವರ್ ಬಳಿ ಈ ಘಟನೆ ನಡೆದಿದ್ದು, ಬಿ ಟೆಕ್ ಮೂರನೇ ವರ್ಷದಲ್ಲಿ ವ್ಯಾಸಂಗ ಮಾಡುತ್ತಿದ್ದ 23 ವರ್ಷದ ವಂಶ್ ಶರ್ಮಾ ಹಾಗೂ ವೃತ್ತಿಯಲ್ಲಿ ಸೇಲ್ಸ್ ಮ್ಯಾನ್ ಆಗಿದ್ದ 20 ವರ್ಷದ ಮೋನು ಸಾವನ್ನಪ್ಪಿದವರಾಗಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಇವರಿಬ್ಬರು ಈ ಮೊದಲಿನಿಂದಲೂ ರೈಲು ಹಳಿಗಳ ಬಳಿ ಲೈವ್ ವಿಡಿಯೋ ಮಾಡುವ ಅಭ್ಯಾಸ ಹೊಂದಿದ್ದರು ಎನ್ನಲಾಗಿದ್ದು, ಇದೇ ರೀತಿ ಗುರುವಾರ ಸಂಜೆಯೂ ಸಹ ತೆರಳಿದ್ದಾರೆ. ಆದರೆ ವೇಗವಾಗಿ ಬಂದ ರೈಲು ಇವರ ಮೇಲೆ ಹರಿದ ಪರಿಣಾಮ ಸಾವಿಗೀಡಾಗಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular