HomeLatest Newsಬಲು ರುಚಿಕರ ‘ಹೀರೆಕಾಯಿ ಚಟ್ನಿ’

ಬಲು ರುಚಿಕರ ‘ಹೀರೆಕಾಯಿ ಚಟ್ನಿ’

ಸಾಂಬಾರು, ಪಲ್ಯಕ್ಕೆಂದು ಹೀರೆಕಾಯಿ ತರುತ್ತೀರಿ. ಇದರ ಮೇಲುಗಡೆಯ ಸಿಪ್ಪೆ ತೆಗೆದಾಗ ಅದನ್ನು ಬಿಸಾಡುವ ಬದಲು ಹೀಗೆ ರುಚಿಯಾದ ಚಟ್ನಿ ಮಾಡಿದರೆ ಸೈಡ್ ಡಿಶ್ ಗೆ ಚೆನ್ನಾಗಿರುತ್ತದೆ.

ಬೇಕಾಗುವ ಸಾಮಗ್ರಿಗಳು : 3 – ಕಪ್ ಹೀರೆಕಾಯಿ ಸಿಪ್ಪೆ, 1 – ಕಪ್ ತೆಂಗಿನ ಕಾಯಿ ತುರಿ, 5 – ಎಸಳು ಬೆಳ್ಳುಳ್ಳಿ ,1 – ಟೀ ಸ್ಪೂನ್ ಧನಿಯಾ, 5 – 6 ಹಸಿಮೆಣಸು, ಸ್ವಲ್ಪ ಹುಣಸೆಹಣ್ಣು, ರುಚಿಗೆ ತಕ್ಕಷ್ಟು – ಉಪ್ಪು.

ಮಾಡುವ ವಿಧಾನ : ಮೊದಲಿಗೆ ಹೀರೆಕಾಯಿ ಸಿಪ್ಪೆಯನ್ನು ಚೆನ್ನಾಗಿ ತೊಳೆದು ಅದನ್ನು ಒಂದು ಪಾತ್ರೆಗೆ ಹಾಕಿ ನೀರು ಸೇರಿಸಿ ಬೇಯಿಸಿಕೊಳ್ಳಬೇಕು. ನಂತರ ಅದರ ನೀರು ಬಸಿದು ಸಿಪ್ಪೆಯನ್ನು ಒಂದು ಮಿಕ್ಸಿ ಜಾರಿಗೆ ಹಾಕಿ ಅದಕ್ಕೆ ತೆಂಗಿನಕಾಯಿ ತುರಿ, ಬೆಳ್ಳುಳ್ಳಿ, ಧನಿಯಾ, ಹಸಿಮೆಣಸು, ಹುಣಸೆಹಣ್ಣು ಮತ್ತು ರುಚಿಗೆ ತಕ್ಕಷ್ಟು ಉಪ್ಪು ಹಾಕಿ ರುಬ್ಬಿದರೆ ರುಚಿಯಾದ ಚಟ್ನಿ ಸವಿಯಲು ಸಿದ್ಧ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular