HomeKarnatakaNWKRTC ಬಸ್‌ಗಳಿಗೆ ಶೀಘ್ರವೇ ವೆಹಿಕಲ್ ಟ್ರ್ಯಾಕಿಂಗ್ ಮ್ಯಾನೇಜಮೆಂಟ್ ಸಿಸ್ಟಮ್

NWKRTC ಬಸ್‌ಗಳಿಗೆ ಶೀಘ್ರವೇ ವೆಹಿಕಲ್ ಟ್ರ್ಯಾಕಿಂಗ್ ಮ್ಯಾನೇಜಮೆಂಟ್ ಸಿಸ್ಟಮ್

ಬಿಎಂಟಿಸಿ, ಕೆಎಸ್ಆರ್‌ಟಿಸಿ ಬಸ್‌ಗಳಲ್ಲಿ ವೆಹಿಕಲ್ ಟ್ರ್ಯಾಕಿಂಗ್ ವ್ಯವಸ್ಥೆ ಇದೆ. ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಬಸ್ಸುಗಳಲ್ಲಿಯೂ ವೆಹಿಕಲ್ ಟ್ರ್ಯಾಕಿಂಗ್ ಮ್ಯಾನೇಜಮೆಂಟ್ ಸಿಸ್ಟಮ್ (VTMS) ಅಳವಡಿಕೆ ಮಾಡಲು ಕೇಂದ್ರ ಸರ್ಕಾರದ ನೆರವು ಕೋರಲಾಗಿದೆ.

ಈ ಕುರಿತು ಬೆಳಗಾವಿ ಸಂಸದ ಜಗದೀಶ್ ಶೆಟ್ಟರ್ ಕೇಂದ್ರ ಸರ್ಕಾರಕ್ಕೆ ಪತ್ರವನ್ನು ಬರೆದಿದ್ದಾರೆ. ಈ ಬಗ್ಗೆ ಅವರು ಸಾಮಾಜಿಕ ಜಾಲತಾಣದ ಪೋಸ್ಟ್‌ನಲ್ಲಿ  ಮಾಹಿತಿ ನೀಡಿದ್ದಾರೆ. ರೂ. 29.39 ಕೋಟಿ ಅನುದಾನಕ್ಕೆ ಮಂಜೂರಾತಿ ಕೋರಿ ಸಲ್ಲಿಸಿದ ಪ್ರಸ್ತಾವನೆಗೆ ಅನುಮೋದನೆಯನ್ನು ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಈ ಮೊದಲು ರೂ. 63.55 ಕೋಟಿ ಸಲ್ಲಿಸಿದ ಪ್ರಸ್ತಾವನೆಗೆ ನೀಡಿದ ಅನುಮೋದನೆಗೆ ಅನುಗುಣವಾಗಿ ಇದರಲ್ಲಿ ರೂ. 33.26 ಕೋಟಿ ಮಾತ್ರ ಬಳಕೆ ಮಾಡಿದ್ದು, ಕೋವಿಡ್-19 ಕಾರಣ ತಿಳಿಸಿ ಈ ಪ್ರಸ್ತಾವನೆಯನ್ನು ಸ್ವತ್ತು ಮರುಸ್ವಾಧೀನ ಎಂದು ಪರಿಗಣಿಸಲು ಕೋರಿದ್ದು, ಆದರೆ ಈ ಯೋಜನೆಯಡಿ ಬಳಕೆ ಮಾಡಿದ ಅನುದಾನವನ್ನು ಮೂರನೇ ಪಕ್ಷದಿಂದ ಆಡಿಟ್ ಮಾಡಿಸಿದ್ದಾರೆ.

ವರದಿಯನ್ನಾಧರಿಸಿ ನೂತನ ರೂ. 29.39 ಕೋಟಿಯ ಪ್ರಸ್ತಾವನೆಗೆ ಅನುಮೋದನೆ ನೀಡುವ ಕುರಿತು ಅವಲೋಕಿಸಬಹುದಾಗಿದೆ ಎಂದು ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವರಾದ ಶ್ರೀ ನಿತಿನ್ ಗಡ್ಕರಿ ನನಗೆ ದಿನಾಂಕ 11-03-2026 ರಂದು ಬರೆದ ಪತ್ರಕ್ಕೆ ಉತ್ತರವನ್ನು ಪತ್ರದಲ್ಲಿ ತಿಳಿಸಿದ್ದಾರೆ ಎಂದು ಶೆಟ್ಟರ್ ಹೇಳಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ನಾನು ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಹೊಂದಿದ ಸುಮಾರು 5.292 ಬಸ್ಸುಗಳಲ್ಲಿ ವೆಹಿಕಲ್ ಟ್ರ್ಯಾಕಿಂಗ್ ಮ್ಯಾನೇಜಮೆಂಟ್ ಸಿಸ್ಟಮ್ ಅಳವವಡಿಸಲು ಅವಶ್ಯಕವಾದ ಸುಮಾರು ರೂ. 29.39 ಕೋಟಿ ಪ್ರಸ್ತಾವನೆಯನ್ನು ತಯಾರಿಸಿ, ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವಾಲಯಕ್ಕೆ ಕಳುಹಿಸಿದ್ದು, ಇದೇ ವಿಷಯವನ್ನು ಪ್ರಸ್ತಾಪಿಸಿ, ಈ ಪ್ರಸ್ತಾವನೆಗೆ ಶೀಘ್ರ ಅನುಮೋದನೆಗೆ ಕೇಂದ್ರ ಸಚಿವರಲ್ಲಿ ಪತ್ರದ ಮುಖೇನ ವಿನಂತಿಸಿದ್ದು ಇಲ್ಲಿ ಸ್ಮರಣೀಯ ಎಂದು ತಿಳಿಸಿದ್ದಾರೆ.

ಆದರೆ ಕೆಲವು ವರ್ಷಗಳ ಹಿಂದೆ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ (Central Assistance for Strengthening the ITS in the Public Transport System) ಯೋಜನೆ ಅಡಿ ಪ್ರತ್ಯೇಕವಾಗಿ ರೂ. 63.55 ಕೋಟಿ ಪ್ರಸ್ಥಾವನೆ ತಯಾರಿಸಿ, ವಿಟಿಎಸ್ ಅಳವಡಿಸಲು ಕೋರಿದ್ದು, ಇದಕ್ಕೆ ಒಪ್ಪಿದ ತದನಂತರ ರೂ. 33.29 ಕೋಟಿ ಇದರಲ್ಲಿ ಬಳಕೆ ಮಾಡಿ, ಕೋವಿಡ್ -19 ಕಾರಣ ತಿಳಿಸಿ, ಸ್ವತ್ತು ಮರುಸ್ವಾಧೀನ ಕೋರಿ ಮತ್ತೊಂದು ಹೊಸ ಪ್ರಸ್ತಾವನೆಯನ್ನು ಸಲ್ಲಿಸಿದ್ದು, ಈ ಪೂರ್ವದಲ್ಲಿ ಹಿಂದಿನ ಸಾಲಿನ ಕಾಮಗಾರಿ ಅನುಷ್ಠಾನವನ್ನು ಬಳಕೆ ಮಾಡಿದ ಅನುದಾನದ ಬಗ್ಗೆ ಮೂರನೇ ಪಾರ್ಟಿಯಿಂದ ಆಡಿಟ್ ವರದಿ ಪಡೆದು ಈ ವರದಿಯನ್ನಾಧರಿಸಿ ನೂತನ ಪ್ರಸ್ತಾವನೆಗೆ ಒಪ್ಪಿಗೆ ನೀಡುವ ಕುರಿತು ಕಾರ್ಯದರ್ಶಿಗಳು, ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಇವರ ಅಧ್ಯಕ್ಷತೆಯಲ್ಲಿ ದಿನಾಂಕ 05-10-2025 ನಡೆಸಿದ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿತ್ತು.

ಆದರೆ, ಈ ಯೋಜನೆಯ ಫೈನಾನ್ಸಿಯಲ್ ಆಡಿಟ್ ಸರ್ಟಿಫಿಕೇಟ್ ಮಾತ್ರ ಸಲ್ಲಿಕೆಯಾಗಿರುವುದು ಈ ಹಿನ್ನಲೆಯಲ್ಲಿ ನೂತನ ಪ್ರಸ್ತಾವನೆಗೆ ಅನುಮೋದನೆ ನೀಡುವ ಪೂರ್ವ ಹಿಂದಿನ ಸಾಲಿನ ಪ್ರಸ್ತಾವನೆಯ ಎಲ್ಲ ಸಂಬಂಧಿತ ವರದಿಗಳನ್ನು ಸಲ್ಲಿಸಿದ ತದನಂತರವೇ ನೂತನ ರೂ. 29.39 ಕೋಟಿ ಪ್ರಸ್ತಾವನೆಗೆ ಅನುಮೋದನೆ ನೀಡುವ ಕುರಿತು ವಿಷಯ ಪರಿಗಣಿಸಲು ಸಾಧ್ಯವೆಂದು ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವರು ನನಗೆ ಪತ್ರ ಬರೆದಿದ್ದಾರೆ ಎಂದು ಶೆಟ್ಟರ್ ಹೇಳಿದ್ದಾರೆ.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

LEAVE A REPLY

Please enter your comment!
Please enter your name here

Most Popular