HomeBusinessಒಂದೇ ದಿನ ಚಿನ್ನದ ಬೆಲೆಯಲ್ಲಿ ₹5,950 ಇಳಿಕೆ, ಬೆಳ್ಳಿಯೂ ₹15,000 ಇಳಿಕೆ

ಒಂದೇ ದಿನ ಚಿನ್ನದ ಬೆಲೆಯಲ್ಲಿ ₹5,950 ಇಳಿಕೆ, ಬೆಳ್ಳಿಯೂ ₹15,000 ಇಳಿಕೆ

ಬೆಂಗಳೂರು: ನೀವು ಚಿನ್ನ ಖರೀದಿಸುವ ಪ್ಲಾನ್ ಮಾಡಿದ್ದೀರಾ? ಹಾಗಿದ್ದರೆ ಇಂದೇ ಜ್ಯುವೆಲ್ಲರಿ ಶಾಪ್‌ಗೆ ಹೋಗಲು ಸಕಾಲ ಜಾಗತಿಕ ಮಾರುಕಟ್ಟೆಯಲ್ಲಿನ ಬೆಳವಣಿಗೆಯಿಂದಾಗಿ ದೇಶೀಯ ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆ ಸತತ 5ನೇ ದಿನವೂ ಭಾರಿ ಕುಸಿತ ಕಂಡಿದೆ.ಯುಗಾದಿ ಮತ್ತು ರಂಜಾನ್ ಹಬ್ಬದ ಸಂಭ್ರಮದ ನಡುವೆಯೇ ಚಿನ್ನದ ಬೆಲೆ ಇಳಿಕೆಯಾಗಿರುವುದು ಸಾಮಾನ್ಯ ವರ್ಗದ ಜನರಲ್ಲಿ ಮಂದಹಾಸ ಮೂಡಿಸಿದೆ. ಇಂದಿನ (ಮಾರ್ಚ್ 23) ಕಂಪ್ಲೀಟ್ ಗೋಲ್ಡ್ ರೇಟ್ ಡಿಟೇಲ್ಸ್ ಇಲ್ಲಿದೆ:

24 ಕ್ಯಾರೆಟ್ ಚಿನ್ನ: 10 ಗ್ರಾಂ ಮೇಲೆ ₹5,950 ಇಳಿಕೆ.ಇಂದು ಶುದ್ಧ ಚಿನ್ನದ (24 ಕ್ಯಾರೆಟ್) ಬೆಲೆಯಲ್ಲಿ ಭಾರಿ ವ್ಯತ್ಯಾಸವಾಗಿದ್ದು, ಪ್ರತಿ ಗ್ರಾಮ್‌ಗೆ ಬರೋಬ್ಬರಿ 595 ರೂಪಾಯಿ ಇಳಿಕೆಯಾಗಿದೆ.

ಇಂದಿನ ದರ (1 ಗ್ರಾಮ್): ₹14,002

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

10 ಗ್ರಾಮ್ ಚಿನ್ನದ ಬೆಲೆ: ₹1,40,020 (₹5,950 ಕುಸಿತ)

22 ಕ್ಯಾರೆಟ್ ಆಭರಣ ಚಿನ್ನ: ₹5,450 ಕುಸಿತ
ಸಾಮಾನ್ಯವಾಗಿ ಆಭರಣ ತಯಾರಿಸಲು ಬಳಸುವ 22 ಕ್ಯಾರೆಟ್ ಚಿನ್ನದ ಬೆಲೆಯೂ ಪಾತಾಳಕ್ಕೆ ಇಳಿದಿದೆ.

ಇಂದಿನ ದರ (1 ಗ್ರಾಮ್): ₹12,835 (₹545 ಇಳಿಕೆ)

10 ಗ್ರಾಮ್ ಚಿನ್ನದ ಬೆಲೆ: ₹1,28,350 (₹5,450 ಕುಸಿತ)

ಕಳೆದ 10 ದಿನಗಳ ಮಹಾ ಕುಸಿತದ ಲೆಕ್ಕಾಚಾರ:

24 ಕ್ಯಾರೆಟ್ (10 ಗ್ರಾಂ): ಬರೋಬ್ಬರಿ ₹19,640 ಇಳಿಕೆ

22 ಕ್ಯಾರೆಟ್ (10 ಗ್ರಾಂ): ಬರೋಬ್ಬರಿ ₹18,000 ಇಳಿಕೆ

ಬೆಳ್ಳಿ ಬೆಲೆಯಲ್ಲೂ ಭಾರಿ ಕುಸಿತ

ಬಂಗಾರದ ಬೆನ್ನಲ್ಲೇ ಬೆಳ್ಳಿಯ ದರವೂ ಗಣನೀಯವಾಗಿ ಇಳಿಕೆಯಾಗಿದೆ. ಇಂದು ಒಂದೇ ದಿನ ಒಂದು ಕೆಜಿ ಬೆಳ್ಳಿ ಮೇಲೆ 15,000 ರೂಪಾಯಿ ಇಳಿಕೆಯಾಗಿದ್ದು, ಆಭರಣ ಪ್ರಿಯರಿಗೆ ಡಬಲ್ ಧಮಾಕಾ ಸಿಕ್ಕಂತಾಗಿದೆ.

ಇಂದಿನ ಕೆಜಿ ಬೆಳ್ಳಿ ಬೆಲೆ: ₹2,30,000

ಬೆಲೆ ಇಳಿಕೆಗೆ ಕಾರಣವೇನು?

ಒಂದು ಕಡೆ ಇರಾನ್-ಇಸ್ರೇಲ್ ಯುದ್ಧ ಮತ್ತು ಅಮೆರಿಕಾ ನಡುವಿನ ಉದ್ವಿಗ್ನ ಪರಿಸ್ಥಿತಿ ಜಾಗತಿಕವಾಗಿ ಆತಂಕ ಸೃಷ್ಟಿಸಿದೆ. ಕಚ್ಚಾ ತೈಲದ ಬೆಲೆ ಏರುತ್ತಿದ್ದರೂ, ಹೂಡಿಕೆದಾರರು ಲಾಭದ ಹಾದಿ ಹಿಡಿದಿರುವುದು ಮತ್ತು ಮಾರುಕಟ್ಟೆಯ ಕೆಲವು ಆಂತರಿಕ ಬದಲಾವಣೆಗಳಿಂದಾಗಿ ಚಿನ್ನದ ಬೆಲೆ ಇಳಿಕೆಯಾಗುತ್ತಿದೆ ಎನ್ನಲಾಗಿದೆ.

ಬೆಂಗಳೂರು ಸೇರಿದಂತೆ ಪ್ರಮುಖ ನಗರಗಳಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ

ಬೆಂಗಳೂರು ₹1,40,020

ನಾಗ್ಪುರ ₹1,40,020

ಮುಂಬೈ ₹1,40,020

ಚೆನ್ನೈ ₹1,41,280

ಕೋಲ್ಕತ್ತಾ ₹1,40,020

ಪಾಟ್ನಾ ₹1,40,070

ಸೂರತ್‌ ₹1,40,070

ಚಂಡೀಗಢ ₹1,40,170

ಲಕ್ನೋ ₹1,40,170

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

LEAVE A REPLY

Please enter your comment!
Please enter your name here

Most Popular