HomeKarnatakaವಿಧಾನಸಭೆಯಲ್ಲೂ ವಂದೇ ಮಾತರಂ ಗದ್ದಲ: 2 ಚರಣ ಮುಗಿದರೂ ಪೂರ್ಣ ಗೀತೆ ಹಾಡಿದ ಬಿಜೆಪಿ ಸದಸ್ಯರು:...

ವಿಧಾನಸಭೆಯಲ್ಲೂ ವಂದೇ ಮಾತರಂ ಗದ್ದಲ: 2 ಚರಣ ಮುಗಿದರೂ ಪೂರ್ಣ ಗೀತೆ ಹಾಡಿದ ಬಿಜೆಪಿ ಸದಸ್ಯರು: ಹಾಡಿನ ಮಧ್ಯೆಯೇ ಸಂತಾಪ ಸೂಚನೆ

ಬೆಂಗಳೂರು: ಇಂದಿನಿಂದ ರಾಜ್ಯ ವಿಧಾನ ಮಂಡಲ ವಿಶೇಷ ಅಧಿವೇಶನ ಆರಂಭವಾಗಿದ್ದು, ಮೂರು ದಿನಗಳ ಕಾಲ ನಡೆಯಲಿದೆ. ಅಧಿವೇಶನದ ಆರಂಭದಲ್ಲೇ ವಿಧಾನಸಭೆ ಹಾಗೂ ವಿಧಾನ ಪರಿಷತ್ ಉಭಯ ಸದನಗಳಲ್ಲಿ ವಂದೇ ಮಾತರಂ ಗೀತೆ ವಿಚಾರವಾಗಿ ಆಡಳಿತ ಹಾಗೂ ವಿಪಕ್ಷ ಸದಸ್ಯರ ನಡುವೆ ಗದ್ದಲ-ಕೋಲಾಹಲ ನಡೆಯಿತು.

ವಂದೇ ಮಾತರಂ ಗೀತೆ ಪೂರ್ಣವಾಗಿ ಹಾಡಬೇಕು ಎಂದು ವಿಪಕ್ಷ ಬಿಜೆಪಿ ಸದಸ್ಯರು ಪಟ್ಟು ಹಿಡಿದರು. ವಿಪಕ್ಷ ಸದಸ್ಯರ ಪಟ್ಟು ನಡುವೆಯೂ ವಿಧಾನಸಭೆಯಲ್ಲಿ ವಂದೇ ಮಾತರಂ ಗೀತೆ ಪ್ರಾರಂಭವಾಯಿತು. ಆದರೆ ಸರ್ಕಾರದ ಆದೇಶದಂತೆ ಕೇವಲ ಎರಡು ಚರಣಗಳಿಗೆ ಮುಗಿಸಲಾಯಿತು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ವಂದೇ ಮಾತರಂ ಗೀತೆ 2 ಚರಣಗಳು ಮುಗಿದರೂ ಬಿಜೆಪಿ ಹಾಗೂ ಜೆಡಿಎಸ್ ಶಾಸಕರು ಪೂರ್ಣವಾಗಿ ಹಾಡುವುದನ್ನು ಮುಂದುವರಿಸಿದರು. ವಿಪಕ್ಷ ಸದಸ್ಯರು ಗೀತೆ ಹಾಡುತ್ತಿದ್ದ ವೇಳೆಯಲ್ಲೇ ಸ್ಪೀಕರ್ ಅವರು ಸಂತಾಪ ಸೂಚನಾ ಪ್ರಕ್ರಿಯೆಯನ್ನು ಕೈಗೆತ್ತಿಕೊಂಡರು. ಸ್ಪೀಕರ್ ಕ್ರಮದ ನಡುವೆಯೂ ವಿಪಕ್ಷ ಸದಸ್ಯರು ಪೂರ್ಣ ಗೀತೆಯನ್ನು ಹಾಡಿ ಮುಗಿಸಿದರು.

ವಿಧಾನ ಪರಿಷತ್ ನಲ್ಲಿ ವಂದೇ ಮಾತರಂ ಗದ್ದಲ: ವಿಪಕ್ಷಗಳ ಗಲಾಟೆ ನಡುವೆಯೂ ಕಾಂಗ್ರೆಸ್ ಸದಸ್ಯರಿಂದ 2 ಚರಣ ಮಾತ್ರ ಗಾಯನ: ಕಲಾಪ ಆರಂಭ

ಬೆಂಗಳೂರು: ಇಂದಿನಿಂದ ಮೂರು ದಿನಗಳಕಾಲ ವಿಧಾನಮಂಡಲ ವಿಶೇಷ ಅಧಿವೇಶನ ಆರಂಭವಾಗಿದ್ದು, ವಿಧಾನಪರಿಷತ್ ಕಲಾಪ ಆರಂಭವಾಗುತ್ತಿದ್ದಂತೆಯೇ ವಂದೇ ಮಾತರಂ ಗೀತೆ ವಿಚಾರವಾಗಿ ಆಡಳಿತ ಮತ್ತು ವಿಪಕ್ಷಗಳ ನಡುವೆ ತೀವ್ರ ಗದ್ದಲ ನಡೆಯಿತು.

ವಂದೇ ಮಾತರಂ ಗೀತೆಯನ್ನು ಪೂರ್ಣವಾಗಿ ಹಾಡುವಂತೆ ವಿಪಕ್ಷಗಳು ಪಟ್ಟು ಹಿಡಿದಿದ್ದು, ಕಲಾಪದ ಆರಂಭದಲ್ಲೇ ಉಭಯ ನಾಯಕರ ನಡುವೆ ಸದನದಲ್ಲಿ ವಾಕ್ಸಮರ ಹಾಗೂ ಕೋಲಾಹಲ ಉಂಟಾಯಿತು. ಸಭಾಪತಿ ಸಲಿಂ ಅಹ್ಮದ್ ವಿಪಕ್ಷ ಸದಸ್ಯರನ್ನು ಸಮಾಧಾನ ಪಡಿಸಲು ಯತ್ನಿಸಿದರೂ ವಿಪಕ್ಷ ಸದಸ್ಯರು ಮಾತುಗಳನ್ನು ಕೇಳಿಸಿಕೊಳ್ಳಲಿಲ್ಲ. ಪೂರ್ತಿ ಹಾಡು ಹಾಡಲು ಅವಕಾಶ ನೀಡುವಂತೆ ಪಟ್ಟು ಹಿಡಿದರು.

ವಿಪಕ್ಷ ಸದಸ್ಯರ ಗದ್ದಲದ ನಡುವೆಯೇ ಪರಿಷತ್ ಕಲಾಪ ಆರಂಭವಾಯಿತು. ಈ ವೇಳೆ ವಿಧಾನಪರಿಷತ್‌ನಲ್ಲಿ 2 ಚರಣಗಳ ವಂದೇ ಮಾತರಂ ಗಾಯನ ಹಾಡಲಾಯಿತು. ಎರಡು ಚರಣ ಹಾಡು ಮುಗಿದರೂ ಬಿಜೆಪಿ ಸದಸ್ಯರು ಸಂಪೂರ್ಣ ಗೀತೆ ಹಾಡುವುದನ್ನು ಮುಂದುವರಿಸಿದರು. ಈ ಗದ್ದಲದ ನಡುವೆಯೇ ಸಭಾಪತಿಯವರು ತಕ್ಷಣವೇ ಸಂವಿಧಾನ ಪೀಠಿಕೆ ಬೋಧನೆ ಆರಂಭಿಸಿದ್ದು, ಕಾಂಗ್ರೆಸ್ ಸದಸ್ಯರು ಪೀಠಿಕೆ ಓದಿದರು. ಇದರಿಂದಾಗಿ ಸದನದಲ್ಲಿ ಕೋಲಾಹಲದ ವಾತಾವರಣ ನಿರ್ಮಾಣವಾಯಿತು.

ವಂದೇ ಮಾತರಂ ಪೂರ್ಣವಾಗಿ ಹಾಡದ ಸರ್ಕಾರಕ್ಕೆ ಧಿಕ್ಕಾರ ಎಂದು ಬಿಜೆಪಿ ಸದಸ್ಯರು ಘೋಷಣೆ ಕೂಗಿದರು. ಸಂವಿಧಾನ ಪೀಠಿಕೆ ಓದದ ಬಿಜೆಪಿ ನಾಯಕರಿಗೆ ಧಿಕ್ಕಾರ ಎಂದು ಸಭಾನಾಯಕ ಯತೀಂದ್ರ ಪ್ರತಿಘೋಷಣೆ ಕೂಗಿದರು.

ಇದುವರೆಗೂ ಪೂರ್ಣವಾಗಿ ಹಾಡಲಾಗುತ್ತಿದ್ದ ವಂದೇ ಮಾತರಂ ಗೀತೆಯನ್ನು ಈಗೇಕೆ ಎರಡು ಪ್ಯಾರಾಗಳಿಗೆ ಮುಕ್ತಾಯಗೊಳಿಸಿದ್ರಿ? ಎಂದು ಬಿಜೆಪಿ ಸದಸ್ಯರು ಸರ್ಕಾರವನ್ನು ಪ್ರಶ್ನಿಸಿ ತೀವ್ರ ಆಕ್ರೋಶ ಹೊರಹಾಕಿದರು.

ಗದ್ದಲ-ಕೋಲಾಹಲದ ನಡುವೆಯೇ ಪರಿಷತ್ ನಲ್ಲಿ ಕಲಾಪ ಆರಂಭವಾಗಿದೆ. ಕಸ್ತೂರಿ ರಂಗನ್ ವರದಿ ಬಗ್ಗೆ ಚರ್ಚೆಗೆ ಸರ್ಕಾರ ಮುಂದಾಯಿತು. ಡಿಸಿಎಂ ಪರಮೇಶ್ವರ್ ಅವರು ಕಸ್ತೂರಿ ರಂಗನ್ ವರದಿ ವಿಚಾರವನ್ನು ಪ್ರಸ್ತಾಪಿಸಿ ವರದಿಯಲ್ಲಿ ಹೇಳಲಾದ ಅಂಶಗಳನ್ನು ಪ್ರಸ್ತುತಪಡಿಸಿದರು.

ಮತ್ತೊಂದೆಡೆ ಬಿಜೆಪಿ ಸದಸ್ಯ ರವಿ ಕುಮಾರ್ ಹಾಗೂ ಇತರ ಸದಸ್ಯರು ವಂದೇ ಮಾತರಂ ವಿರೋಧಿ ಸರ್ಕಾರಕ್ಕೆ ಧಿಕ್ಕಾಅರ ಎಂದು ಧಿಕ್ಕಾರ ಕೂಗುತ್ತಲೆ ಇದ್ದರು. ವಿಪಕ್ಷ ಸದಸ್ಯರ ಗದ್ದಲದ ನಡುವೆಯೂ ಉಭಯಸದನದಲ್ಲಿ ಕಲಾಪ ಆರಂಭವಾಗಿದೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular