HomeLatest Newsವಂದೇ ಭಾರತ್ ರೈಲಿನಲ್ಲಿ ಅವ್ಯವಸ್ಥೆ: 12 ಗಂಟೆ ತಡವಾದರೂ ಸಿಗದ ಊಟ, ರೈಲ್ವೇ ಸಿಬ್ಬಂದಿಯ ಅಸಡ್ಡೆಗೆ...

ವಂದೇ ಭಾರತ್ ರೈಲಿನಲ್ಲಿ ಅವ್ಯವಸ್ಥೆ: 12 ಗಂಟೆ ತಡವಾದರೂ ಸಿಗದ ಊಟ, ರೈಲ್ವೇ ಸಿಬ್ಬಂದಿಯ ಅಸಡ್ಡೆಗೆ ಕಿಡಿ ಕಾರಿದ ಪ್ರಯಾಣಿಕರು

ಉತ್ತರ ಭಾರತದಾದ್ಯಂತ ಡಿಸೆಂಬರ್ 24 ರಿಂದ ಆವರಿಸಿರುವ ದಟ್ಟ ಮಂಜಿನಿಂದಾಗಿ ರೈಲ್ವೇ ಸಂಚಾರ ಸಂಪೂರ್ಣ ಹದಗೆಟ್ಟಿದೆ. ಪ್ರೀಮಿಯಂ ರೈಲುಗಳಾದ ವಂದೇ ಭಾರತ್ ಮತ್ತು ರಾಜಧಾನಿ ಎಕ್ಸ್‌ಪ್ರೆಸ್‌ಗಳು ಗಂಟೆಗಟ್ಟಲೆ ವಿಳಂಬವಾಗಿ ಸಂಚರಿಸುತ್ತಿವೆ. ಈ ನಡುವೆ ವಂದೇ ಭಾರತ್ ರೈಲಿನಲ್ಲಿ ಊಟದ ವಿಳಂಬದಿಂದ ಆಕ್ರೋಶಗೊಂಡ ಪ್ರಯಾಣಿಕರು ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡಿರುವ ಘಟನೆ ನಡೆದಿದೆ.

ಹಸಿದು ಬೆಂಡಾದ ಪ್ರಯಾಣಿಕರು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ, ಪ್ರಯಾಣಿಕರೊಬ್ಬರು ರೈಲ್ವೇ ಸಿಬ್ಬಂದಿಯೊಂದಿಗೆ ತೀವ್ರವಾಗಿ ವಾಗ್ವಾದ ನಡೆಸುತ್ತಿರುವುದು ಕಂಡುಬಂದಿದೆ. “ನಮ್ಮ ಟಿಕೆಟ್ ಪ್ಯಾಕೇಜ್‌ನಲ್ಲಿ ಊಟದ ವ್ಯವಸ್ಥೆ ಒಳಗೊಂಡಿದೆ. ಆದರೆ ಕಳೆದ 12 ಗಂಟೆಗಳಿಂದ ನಮಗೆ ಆಹಾರ ನೀಡಿಲ್ಲ. ರೈಲಿನಲ್ಲಿರುವ ಹಿರಿಯ ನಾಗರಿಕರು ಮತ್ತು ಮಕ್ಕಳು ಹಸಿವಿನಿಂದ ಕಂಗಾಲಾಗಿದ್ದಾರೆ. ಪ್ರಯಾಣಿಕರನ್ನು ಹೀಗೆ ಹಸಿವಿನಿಂದ ಸಾಯಿಸುತ್ತೀರಾ?” ಎಂದು ಪ್ರಯಾಣಿಕರು ಕಿಡಿ ಕಾರಿದ್ದಾರೆ.

ಸಿಬ್ಬಂದಿಯ ಉದ್ಧಟತನಕ್ಕೆ ತತ್ತರಿಸಿದ ಜನ ಸಹಾಯವಾಣಿ ಸಿಬ್ಬಂದಿಯ ಪ್ರತಿಕ್ರಿಯೆ ಪ್ರಯಾಣಿಕರ ಸಿಟ್ಟನ್ನು ಮತ್ತಷ್ಟು ಹೆಚ್ಚಿಸಿದೆ. ನೀವು ಯಾವ ರೈಲಿನಿಂದ ಕರೆ ಮಾಡುತ್ತಿದ್ದೀರಿ ಎಂದು ಸಿಬ್ಬಂದಿ ಅಸಡ್ಡೆಯಿಂದ ಕೇಳುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ಈ ವೇಳೆ ಪಕ್ಕದಲ್ಲೇ ಇದ್ದ ಮಹಿಳೆಯೊಬ್ಬರು ಕೂಡ ಸಿಬ್ಬಂದಿ ವಿರುದ್ಧ ಜೋರಾಗಿ ಕೂಗಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಒಂದು ಹಂತದಲ್ಲಿ ಸಿಬ್ಬಂದಿ ಕರೆಯನ್ನು ಅರ್ಧಕ್ಕೆ ಕಡಿತಗೊಳಿಸಿರುವುದು ಪ್ರಯಾಣಿಕರ ಕೆಂಗಣ್ಣಿಗೆ ಗುರಿಯಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಊಟದ ಬಾಕ್ಸ್‌ಗಳ ರಾಶಿ ಪತ್ತೆ ಮತ್ತೊಂದು ವಿಡಿಯೋದಲ್ಲಿ, ರೈಲಿನ ಪ್ಯಾಂಟ್ರಿ ಅಥವಾ ಶೇಖರಣಾ ಕೊಠಡಿಯಲ್ಲಿ ಐಆರ್‌ಸಿಟಿಸಿಯ ನೂರಾರು ಸಿದ್ಧ ಆಹಾರದ (Ready-to-eat) ಬಾಕ್ಸ್‌ಗಳು ಇರುವುದು ಪತ್ತೆಯಾಗಿದೆ. ಆಹಾರ ಸಂಗ್ರಹವಿದ್ದರೂ ಪ್ರಯಾಣಿಕರಿಗೆ ವಿತರಿಸದಿದ್ದನ್ನು ಕಂಡು ಕೆರಳಿದ ಜನರು, ತಾವೇ ಮುಂದೆ ನಿಂತು ಆಹಾರದ ಬಾಕ್ಸ್‌ಗಳನ್ನು ಹಂಚಿಕೊಂಡಿದ್ದಾರೆ. ನಂತರ ಸ್ಥಳಕ್ಕೆ ಬಂದ ಹಿರಿಯ ಅಧಿಕಾರಿಗಳು ಪರಿಸ್ಥಿತಿಯನ್ನು ತಿಳಿಗೊಳಿಸಲು ಪ್ರಯತ್ನಿಸಿದರು.

ಮಂಜಿನ ಹೊಡೆತಕ್ಕೆ ಸಿಲುಕಿದ ರೈಲ್ವೇ ದೆಹಲಿ, ಉತ್ತರ ಪ್ರದೇಶ, ಬಿಹಾರ ಮತ್ತು ಪಂಜಾಬ್ ಸೇರಿದಂತೆ ಹಲವು ರಾಜ್ಯಗಳಲ್ಲಿ ಮಂಜು ಕವಿದಿರುವುದರಿಂದ ರೈಲುಗಳು 8 ರಿಂದ 18 ಗಂಟೆಗಳ ಕಾಲ ವಿಳಂಬವಾಗಿ ಸಂಚರಿಸುತ್ತಿವೆ. ಪ್ರೀಮಿಯಂ ರೈಲುಗಳಲ್ಲಿಯೂ ಇಂತಹ ಅವ್ಯವಸ್ಥೆ ಉಂಟಾಗಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular