HomeLive News'ಟಾಕ್ಸಿಕ್' ನಟಿ ತಾರಾ ಸುತಾರಿಯಾ ಲವ್ ಲೈಫ್‌ನಲ್ಲಿ ಬಿರುಗಾಳಿ? ವೈರಲ್ ಸುದ್ದಿಗೆ ಬ್ರೇಕ್ ಹಾಕಿದ ಓರಿ...

‘ಟಾಕ್ಸಿಕ್’ ನಟಿ ತಾರಾ ಸುತಾರಿಯಾ ಲವ್ ಲೈಫ್‌ನಲ್ಲಿ ಬಿರುಗಾಳಿ? ವೈರಲ್ ಸುದ್ದಿಗೆ ಬ್ರೇಕ್ ಹಾಕಿದ ಓರಿ ಕ್ಯಾರಿಯರ್ ಪಾರ್ಟಿ ಫೋಟೋಗಳು!

ಮುಂಬೈ: ಬಾಲಿವುಡ್ ನಟಿ ತಾರಾ ಸುತಾರಿಯಾ ಮತ್ತು ಅವರ ಗೆಳೆಯ ವೀರ್ ಪಹಾರಿಯಾ ಪ್ರೀತಿ ಮುರಿದುಬಿದ್ದಿದೆ ಎಂಬ ಸುದ್ದಿಗಳು ಕಳೆದ ಕೆಲವು ದಿನಗಳಿಂದ ಸೋಷಿಯಲ್ ಮೀಡಿಯಾದಲ್ಲಿ ಭಾರಿ ಸದ್ದು ಮಾಡುತ್ತಿದ್ದವು. ಇದಕ್ಕೆ ಮುಖ್ಯ ಕಾರಣ ಮುಂಬೈನಲ್ಲಿ ನಡೆದ ಎಪಿ ಧಿಲ್ಲೋನ್ ಅವರ ಸಂಗೀತ ಕಾರ್ಯಕ್ರಮ. ಈ ಶೋನಲ್ಲಿ ತಾರಾ ಮತ್ತು ಸಿಂಗರ್ ಎಪಿ ಧಿಲ್ಲೋನ್ ನಡುವಿನ ನಿಕಟವರ್ತನೆ ಹಾಗೂ ವೇದಿಕೆಯ ಮೇಲೆ ನಡೆದ ಕಿಸ್ಸಿಂಗ್ ದೃಶ್ಯ ವೈರಲ್ ಆಗಿತ್ತು. ಈ ವೇಳೆ ಪ್ರೇಕ್ಷಕರ ಸಾಲಿನಲ್ಲಿದ್ದ ವೀರ್ ಪಹಾರಿಯಾ ಅಸಮಾಧಾನಗೊಂಡಿದ್ದಾರೆ ಎಂಬ ಚರ್ಚೆಗಳು ನಡೆದಿದ್ದವು.

ವದಂತಿಗೆ ಮದ್ದು ಅರೆದ ನಟಿ ತಮ್ಮ ವಿರುದ್ಧದ ಟೀಕೆಗಳು ಮತ್ತು ಬ್ರೇಕಪ್ ಸುದ್ದಿಗಳು ಹೆಚ್ಚಾಗುತ್ತಿದ್ದಂತೆಯೇ, ತಾರಾ ಸುತಾರಿಯಾ ಇನ್‌ಸ್ಟಾಗ್ರಾಮ್‌ನಲ್ಲಿ ವಿಶೇಷ ಫೋಟೋ ಒಂದನ್ನು ಹಂಚಿಕೊಂಡಿದ್ದಾರೆ. ಬಾಲಿವುಡ್‌ನ ಖ್ಯಾತ ಸೆಲೆಬ್ರಿಟಿ ಫ್ರೆಂಡ್ ಓರಿ (Orry) ಹಂಚಿಕೊಂಡಿದ್ದ ಫೋಟೋವನ್ನು ತಾರಾ ಮರುಹಂಚಿಕೊಂಡಿದ್ದಾರೆ. ಈ ಫೋಟೋ ಕೊಲಾಜ್‌ನಲ್ಲಿ ವೀರ್ ಪಹಾರಿಯಾ ಮತ್ತು ತಾರಾ ಇಬ್ಬರೂ ಓರಿ ಜತೆ ಆತ್ಮೀಯವಾಗಿ ಪೋಸ್ ನೀಡಿದ್ದಾರೆ. “ಅವ್ವ.. ನನ್ನ ಹೃದಯಗಳು” (Aww my hearts) ಎಂದು ಬರೆದುಕೊಂಡು ರೆಡ್ ಹಾರ್ಟ್ ಎಮೋಜಿಗಳನ್ನು ಹಾಕುವ ಮೂಲಕ ವೀರ್ ಬಗ್ಗೆ ತಮಗಿರುವ ಪ್ರೀತಿಯನ್ನು ತಾರಾ ವ್ಯಕ್ತಪಡಿಸಿದ್ದಾರೆ. ಈ ಮೂಲಕ ತಾವಿಬ್ಬರೂ ಈಗಲೂ ಒಂದಾಗಿದ್ದೇವೆ ಎಂಬ ಸಂದೇಶವನ್ನು ಅಭಿಮಾನಿಗಳಿಗೆ ರವಾನಿಸಿದ್ದಾರೆ.

ಯಶ್ ನಟನೆಯ ‘ಟಾಕ್ಸಿಕ್’ನಲ್ಲಿ ತಾರಾ ಇನ್ನು ವೃತ್ತಿಜೀವನದ ವಿಚಾರಕ್ಕೆ ಬಂದರೆ, ತಾರಾ ಸುತಾರಿಯಾ ಅವರು ಸ್ಯಾಂಡಲ್‌ವುಡ್ ರಕಿಂಗ್ ಸ್ಟಾರ್ ಯಶ್ ಅಭಿನಯದ ಪ್ಯಾನ್ ಇಂಡಿಯಾ ಚಿತ್ರ ‘ಟಾಕ್ಸಿಕ್’ (Toxic) ನಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಗೀತು ಮೋಹನ್‌ದಾಸ್ ನಿರ್ದೇಶನದ ಈ ಚಿತ್ರದಲ್ಲಿ ನಯನತಾರಾ, ಕಿಯಾರಾ ಅಡ್ವಾಣಿ ಸೇರಿದಂತೆ ದೊಡ್ಡ ತಾರಾಬಳಗವೇ ಇದೆ. ಈ ಸಿನಿಮಾ 2026ರ ಮಾರ್ಚ್ 19 ರಂದು ಅದ್ಧೂರಿಯಾಗಿ ತೆರೆಕಾಣಲಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಮತ್ತೊಂದೆಡೆ, ವೀರ್ ಪಹಾರಿಯಾ ಅವರು ಅಕ್ಷಯ್ ಕುಮಾರ್ ನಟನೆಯ ‘ಸ್ಕೈ ಫೋರ್ಸ್’ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದು, ಮುಂದಿನ ದಿನಗಳಲ್ಲಿ ಮಾಧುರಿ ದೀಕ್ಷಿತ್ ಮತ್ತು ತೃಪ್ತಿ ದಿಮ್ರಿ ನಟನೆಯ ‘ಮಾ ಬೆಹೆನ್’ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ವರದಿಯಾಗಿದೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular