HomeLifestyleರೋಸ್ ಡೇ ಯಿಂದ ಕಿಸ್ ಡೇ ವರೆಗೆ: ನಿಮ್ಮ ಪ್ರೀತಿಯನ್ನು ಸಂಭ್ರಮಿಸಲು ಇಲ್ಲಿದೆ 2026ರ ವ್ಯಾಲಂಟೈನ್ಸ್...

ರೋಸ್ ಡೇ ಯಿಂದ ಕಿಸ್ ಡೇ ವರೆಗೆ: ನಿಮ್ಮ ಪ್ರೀತಿಯನ್ನು ಸಂಭ್ರಮಿಸಲು ಇಲ್ಲಿದೆ 2026ರ ವ್ಯಾಲಂಟೈನ್ಸ್ ವಾರದ ಪೂರ್ಣ ಪಟ್ಟಿ

ಪ್ರತಿ ವರ್ಷ ಜನರು ಫೆಬ್ರವರಿ 7 ರಿಂದ ಫೆಬ್ರವರಿ 14ರವರೆಗೆ ವ್ಯಾಲೆಂಟೈನ್ಸ್ ವೀಕ್ ಅನ್ನು ಆಚರಿಸುತ್ತಾರೆ.ಫೆಬ್ರವರಿ ಬಂತೆಂದರೆ ಸಾಕು, ಗಾಳಿಯಲ್ಲೂ ಪ್ರೀತಿಯ ಸಂಚಲನ ಶುರುವಾಗುತ್ತದೆ. ಹರೆಯದ ಮನಸುಗಳಲ್ಲಿ ಹೊಸ ಕನಸುಗಳು ಅರಳುತ್ತವೆ. ಫೆಬ್ರವರಿ 14 ರಂದು ಆಚರಿಸಲಾಗುವ ಪ್ರೇಮಿಗಳ ದಿನಕ್ಕೆ (Valentine’s Day) ಇಡೀ ಜಗತ್ತೇ ಸಜ್ಜಾಗುತ್ತಿದೆ. ಆದರೆ, ಪ್ರೀತಿಯ ಈ ಸಂಭ್ರಮ ಕೇವಲ ಒಂದು ದಿನಕ್ಕೆ ಸೀಮಿತವಲ್ಲ. ಫೆಬ್ರವರಿ 7 ರಿಂದ ಈ ರೋಮ್ಯಾಂಟಿಕ್ ವಾರ ಅದ್ದೂರಿಯಾಗಿ ಆರಂಭವಾಗುತ್ತದೆ.

ಈ ವರ್ಷ ವ್ಯಾಲೆಂಟೈನ್ಸ್ ವೀಕ್ ಫೆಬ್ರವರಿ 7 (ಶನಿವಾರ) ರಿಂದ ಆರಂಭವಾಗಿ ಫೆಬ್ರವರಿ 14 (ಶನಿವಾರ)ರಂದು ವ್ಯಾಲೆಂಟೈನ್ಸ್ ಡೇಯೊಂದಿಗೆ ಮುಕ್ತಾಯವಾಗಲಿದೆ

ವ್ಯಾಲೆಂಟೈನ್ಸ್ ವೀಕ್ 2026 – ದಿನಾಂಕಗಳು

ಫೆಬ್ರವರಿ 7 (ಶನಿವಾರ) – ರೋಸ್ ಡೇ

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಫೆಬ್ರವರಿ 8 (ಭಾನುವಾರ) – ಪ್ರಪೋಸ್ ಡೇ

ಫೆಬ್ರವರಿ 9 (ಸೋಮವಾರ) – ಚಾಕ್ಲೆಟ್ ಡೇ

ಫೆಬ್ರವರಿ 10 (ಮಂಗಳವಾರ) – ಟೆಡ್ಡಿ ಡೇ

ಫೆಬ್ರವರಿ 11 (ಬುಧವಾರ) – ಪ್ರಾಮಿಸ್ ಡೇ

ಫೆಬ್ರವರಿ 12 (ಗುರುವಾರ) – ಹಗ್ ಡೇ

ಫೆಬ್ರವರಿ 13 (ಶುಕ್ರವಾರ) – ಕಿಸ್ ಡೇ

ಫೆಬ್ರವರಿ 14 (ಶನಿವಾರ) – ವ್ಯಾಲೆಂಟೈನ್ಸ್ ಡೇ

ಈ ವರ್ಷ ವಿಶೇಷವೇನು?

ಹೂಗುಚ್ಛ ವಿನಿಮಯವಾಗಲಿ, ಚಾಕ್ಲೆಟ್ ಹಂಚಿಕೊಳ್ಳುವುದಾಗಲಿ ಅಥವಾ ಒಟ್ಟಿಗೆ ಗುಣಮಟ್ಟದ ಸಮಯ ಕಳೆಯುವುದಾಗಲಿ – ವ್ಯಾಲೆಂಟೈನ್ಸ್ ವೀಕ್ ಎಂದರೆ ಪ್ರೀತಿಯ ಸಣ್ಣ ಸಣ್ಣ ಆದರೆ ಅರ್ಥಪೂರ್ಣ ಕ್ಷಣಗಳ ಸಂಭ್ರಮ.ಈ ಬಾರಿ ದಿನಾಂಕಗಳು ವಾರದ ದಿನಗಳು ಹಾಗೂ ವೀಕೆಂಡ್‌ಗಳಲ್ಲಿ ಬಿದ್ದಿರುವುದರಿಂದ, ಸರ್ಪ್ರೈಸ್‌ಗಳು, ಡೇಟ್ ಪ್ಲ್ಯಾನ್‌ಗಳು ಮತ್ತು ಮಿನಿ ಸೆಲೆಬ್ರೇಷನ್‌ಗಳನ್ನು ಮುಂಚಿತವಾಗಿ ಯೋಜಿಸಲು ಇದು ಸೂಕ್ತ ಸಮಯ.ಜನರು ಈ ದಿನಗಳನ್ನು ಉಪಹಾರ, ಮಾತುಕತೆ ಅಥವಾ ಒಟ್ಟಿಗೆ ಸಮಯ ಕಳೆಯುವುದರ ಮೂಲಕ ಆಚರಿಸಬಹುದು. ಪ್ರತಿ ದಿನವು ತನ್ನದೇ ಆದ ವಿಶೇಷ ಅರ್ಥವನ್ನು ಹೊಂದಿದೆ.

ಫೆಬ್ರವರಿ 7 – ರೋ​ಸ್‌ ಡೇ -Rose Day

ಪ್ರೀತಿ ಎಂಬ ಎರಡಕ್ಷರದ ಅದ್ಭುತ ಭಾವನೆಗೆ ಇಂದಿನಿಂದ (ಫೆಬ್ರವರಿ 7) ಹೊಸ ಕಳೆ ಬಂದಿದೆ. ಹೌದು, ವ್ಯಾಲಂಟೈನ್ಸ್ ವೀಕ್‌ನ ಅದ್ಧೂರಿ ಆರಂಭಕ್ಕೆ ಇಂದು ಸಾಕ್ಷಿಯಾಗುತ್ತಿದೆ ರೋಸ್ ಡೇ. ಪ್ರೇಮಿಗಳು ತಮ್ಮ ಮನದ ತುಡಿತವನ್ನು ಒಂದು ಕೆಂಗುಲಾಬಿಯ ಮೂಲಕ ಹಂಚಿಕೊಳ್ಳುವ ಮೂಲಕ ಈ ವಸಂತ ಕಾಲದ ಪ್ರೇಮೋತ್ಸವಕ್ಕೆ ಚಾಲನೆ ನೀಡುತ್ತಿದ್ದಾರೆ.

ಪ್ರೀತಿ ಎನ್ನುವುದು ಪದಗಳಿಗೆ ಸಿಗದ ಭಾವನೆಗಳ ಸಮ್ಮಿಲನ. ಅದೆಷ್ಟೋ ಮುನಿಸುಗಳು, ಸಣ್ಣಪುಟ್ಟ ತಪ್ಪು ಕಲ್ಪನೆಗಳು ಪ್ರೀತಿಯಿಂದ ನೀಡುವ ಒಂದು ಪುಟ್ಟ ಗುಲಾಬಿಯಿಂದ ಕರಗಿ ಹೋಗುತ್ತವೆ ಎಂದರೆ ನೀವು ನಂಬಲೇಬೇಕು ಗುಲಾಬಿಯ ಪಕಳೆಗಳು ಹಂತಹಂತವಾಗಿ ಅರಳುವಂತೆ, ಪ್ರೀತಿಯೂ ಕೂಡ ನಂಬಿಕೆ ಮತ್ತು ಸೌಂದರ್ಯದೊಂದಿಗೆ ಅರಳುತ್ತದೆ. ಅದಕ್ಕಾಗಿಯೇ ವ್ಯಾಲಂಟೈನ್ಸ್ ವಾರದ ಮೊದಲ ದಿನವನ್ನೇ ರೋಸ್ ಡೇ ಎಂದು ಕರೆಯಲಾಗುತ್ತದೆ.

ನಿಮ್ಮ ಸಂಗಾತಿಯ ಮನಗೆಲ್ಲಲು ಇಲ್ಲಿದೆ ಒಂದು ಸಣ್ಣ ಐಡಿಯಾ

ನಿಮ್ಮ ಪ್ರೀತಿಯ ವ್ಯಕ್ತಿಗೆ ಈ ದಿನವನ್ನು ಚಿರಸ್ಮರಣೀಯವಾಗಿಸಬೇಕು ಎಂದು ನೀವು ಯೋಚಿಸುತ್ತಿದ್ದರೆ ಈ ಕೆಳಗಿನ ಟಿಪ್ಸ್ ಫಾಲೋ ಮಾಡಿ:

ಸರ್ಪ್ರೈಸ್ ಬೊಕ್ಕೆ: ಕೇವಲ ಒಂದು ಹೂವಿಗಿಂತ ತಾಜಾ ಕೆಂಪು ಗುಲಾಬಿಗಳ ಸುಂದರವಾದ ಬೊಕ್ಕೆ (Bucket of Roses) ನೀಡಿ ಅವರ ಮುಖದಲ್ಲಿ ನಗು ತರಿಸಿ.

ಸಮಯವೇ ದೊಡ್ಡ ಉಡುಗೊರೆ: ಕೆಲಸದ ಒತ್ತಡದ ನಡುವೆಯೂ ಅವರಿಗಾಗಿ ಸ್ವಲ್ಪ ಸಮಯ ಮೀಸಲಿಡಿ. ನೆನಪಿಡಿ, ನೀವು ನೀಡುವ ಬೆಲೆಬಾಳುವ ಉಡುಗೊರೆಗಿಂತ ನೀವು ಕೊಡುವ ಕ್ವಾಲಿಟಿ ಟೈಮ್ ಅವರಿಗೆ ಹೆಚ್ಚು ಖುಷಿ ನೀಡುತ್ತದೆ.

ಭರವಸೆಯ ಮಾತು: ನಾನು ಯಾವಾಗಲೂ ನಿನ್ನ ಜೊತೆಗಿರುತ್ತೇನೆ ಎಂದು ಹೇಳಲು ಈ ದಿನಕ್ಕಿಂತ ಸುಸಮಯ ಬೇಕೆ?

ಪ್ರೀತಿಯ ಸಂಕೇತ ಕೆಂಪು ಗುಲಾಬಿ
ಕೆಂಪು ಗುಲಾಬಿ ಕೇವಲ ಹೂವಲ್ಲ ಅದು ನಿಮ್ಮ ಹೃದಯದ ಬಡಿತದ ಪ್ರತಿರೂಪ. ವರ್ಷಕ್ಕೆ ಒಮ್ಮೆ ಬರುವ ಈ ದಿನವನ್ನು ಪೂರ್ಣ ಪ್ರಮಾಣದಲ್ಲಿ ಆನಂದಿಸಿ. ನಿಮ್ಮ ಸಂಗಾತಿಯೊಂದಿಗೆ ಕಳೆದ ಆ ಕ್ಷಣಗಳು ಮುಂದಿನ ಜೀವನಕ್ಕೆ ಮಧುರ ನೆನಪುಗಳಾಗಿ ಉಳಿಯುತ್ತವೆ.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

Most Popular