HomeKarnatakaಬಿಜೆಪಿಯವರು ದೇಶಭಕ್ತರಾಗಿದ್ದರೆ ಗೋಡ್ಸೆಯನ್ನು ಭಯೋತ್ಪಾದಕನೆಂದು ಒಪ್ಪಿಕೊಳ್ಳಲಿ: ಬಿ.ಕೆ ಹರಿಪ್ರಸಾದ್

ಬಿಜೆಪಿಯವರು ದೇಶಭಕ್ತರಾಗಿದ್ದರೆ ಗೋಡ್ಸೆಯನ್ನು ಭಯೋತ್ಪಾದಕನೆಂದು ಒಪ್ಪಿಕೊಳ್ಳಲಿ: ಬಿ.ಕೆ ಹರಿಪ್ರಸಾದ್

ಶಿವಮೊಗ್ಗ: ಬಿಜೆಪಿಯವರು ನಿಜವಾದ ದೇಶಭಕ್ತರಾಗಿದ್ದರೆ ನಾಥುರಾಮ್ ಗೋಡ್ಸೆಯನ್ನು ಸ್ವಾತಂತ್ರ ಭಾರತದ ಮೊಟ್ಟ ಮೊದಲ ಭಯೋತ್ಪಾದಕನೆಂದು ಒಪ್ಪಿಕೊಳ್ಳಲಿ ಎಂದು ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ಆಗ್ರಹಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಹಾತ್ಮ ಗಾಂಧಿಯನ್ನು ಕೊಂದಿರುವ ಸಂಘಟನೆಗಳು ದೇಶದ ಮೊಟ್ಟ ಮೊದಲು ಭಯೋತಾದಕ ಸಂಘಟನೆ ಹಾಗೂ ಅವರನ್ನು ಕೊಲೆ ಮಾಡಿದ ನಾಥುರಾಮ್ ಗೋಡ್ಸೆ ಸ್ವಾತಂತ್ರ ಭಾರತದ ಮೊಟ್ಟ ಮೊದಲ ಭಯೋತ್ಪಾದಕ. ಬಿಜೆಪಿಯವರು ನಿಜವಾದ ದೇಶಭಕ್ತರಾಗಿದ್ದರೆ ಸ್ವಾತಂತ್ರ ಹೋರಾಟ, ತ್ರಿವರ್ಣ ಧ್ವಜ ಹಾಗೂ ಭಾರತ ದೇಶದ ಮೇಲೆ ನಂಬಿಕೆ ಇದ್ದರೆ ಇದನ್ನು ಒಪ್ಪಿಕೊಳ್ಳಬೇಕು ಎಂದರು.

ಸ್ಟಿಂಗ್ ಪಿತಾಮಹ ಆರ್‍ಎಸ್‍ಎಸ್:

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಸ್ಟಿಂಗ್ ಆಪರೇಷನ್ ಎಂಬ ಕೃತ್ಯ ಈಗಿನಿಂದ ರೂಪಗೊಂಡಿರುವುದಲ್ಲ. ಕಿತ್ತೂರಿನಿಂದ ಹಿಡಿದು ಹಾಗೂ ದೇವೇಂದ್ರಪ್ಪ ಕಾಳಪ್ಪನವರ ಕಾಲದಿಂದ ಹಿಡಿದು ಬಹಳಷ್ಟು ಜನ ರಾಜಕೀಯ ಸೇಡನ್ನು ತಿರಿಸಿಕೊಳ್ಳಲು ಇದನ್ನು ಮಾಡುತ್ತಾ ಬಂದಿದ್ದಾರೆ. ಆದರೆ ಸ್ಟಿಂಗ್ ಆಪರೇಷನ್ ಮೂಲ ಹಾಗೂ ಆಧುನಿಕ ಭಾರತದಲ್ಲಿ ಇದರ ಪಿತಾಮಹ ಯಾರೆಂದರೆ ಅದು ಆರ್‍ಎಸ್‍ಎಸ್ ಹಾಗೂ ಬಿಜೆಪಿಯ ಗುಜರಾತ್ ಮಹನೀಯರು. ಇವರೇ ಬಿಜೆಪಿಯ ಪ್ರಧಾನ ಕಾರ್ಯದರ್ಶಿ ಹಾಗೂ ಗುಜರಾತ್ ಉಸ್ತುವಾರಿಯಾಗಿದ್ದ ಸಂಜಯ್ ಜೋಷಿ ಅವರ ಸ್ಟಿಂಗ್ ಆಪರೇಷನ್ ಮಾಡಿ ಮುಗಿಸಿದರು. ಈ ಸ್ಟಿಂಗ್ ಆಪರೇಷನ್ ಸಂಪ್ರದಾಯದ ಕೀರ್ತಿ ಆ ಮಹನೀಯರಿಗೆ ಸಲ್ಲುತ್ತದೆ ಎಂದರು.

ಸ್ಲೀಪರ್ ಸೆಲ್ ಬಿಜೆಪಿ ಮತ್ತು ಆರ್‍ಎಸ್‍ಎಸ್:

ಸ್ಟಿಂಗ್ ಆಪರೇಷನ್ ಸಂಬಂಧಿಸಿದಂತೆ ಕಾಂಗ್ರೆಸ್‍ ನಲ್ಲಿ ಸ್ಲೀಪರ್ ಸೆಲ್ ಇದೆಯಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಕಾಂಗ್ರೆಸ್ ನಲ್ಲಿ ಯಾವ ಸ್ಲೀಪರ್ ಸೆಲ್ ಇಲ್ಲ. ಅದೇನಿದ್ದರೂ ಬಿಜೆಪಿ ಮತ್ತು ಆರ್‍ಎಸ್‍ಎಸ್‍ ನಲ್ಲಿ ಇರುವುದು. ಪಕ್ಷದಲ್ಲಿ ಏನಾದರೂ ಈ ತರ ನಡವಳಿಕೆ ಅಥವಾ ಪಾತ್ರ ಇದ್ದರೆ ಅದು ಯಾರೇ ಆಗಿದ್ದರೂ ಎಷ್ಟೇ ದೊಡ್ಡ ವ್ಯಕ್ತಿಯಾಗಿದ್ದರೂ ಸಾಕ್ಷಿ ಅಥವಾ  ಪುರಾವೆ ಸಹಿತ ಸಿಕ್ಕರೆ ಕ್ರಮ ತೆಗೆದುಕೊಳ್ಳುತ್ತೇವೆ ಎಂದರು.

ಸ್ಟಿಂಗ್ ಆಪರೇಷನ್ ವಿಚಾರದಲ್ಲಿ ಕೃಪಾ ಆಳ್ವಾ ಅವರ ಮೇಲೆ ಕ್ರಮ ತೆಗೆದುಕೊಳ್ಳುತ್ತಿರಾ ಎಂಬ ಪ್ರಶ್ನೆಗೆ, ಈಗಾಗಲೇ ಈ ಪ್ರಕರಣದಲ್ಲಿ ಯಾರ್ಯಾರು ಇದ್ದಾರೋ ಅವರ ಮೇಲೆ ಕ್ರಮ ತೆಗೆದುಕೊಳ್ಳತ್ತೇವೆ. ಇದಕ್ಕೆ ಸಂಬಂಧಪಟ್ಟವರಿಗೆ ಶೋಕಾಸ್ ನೋಟಿಸ್ ನೀಡಲು ಶಿಸ್ತು ಸಮಿತಿಯ ಅಧ್ಯಕ್ಷ ರೆಹಮಾನ್ ಖಾನ್ ಹಾಗೂ ಪಕ್ಷದ ಕಾರ್ಯದರ್ಶಿಗೆ ಸೂಚಿಸಿದ್ದೇನೆ ಎಂದರು. 

ಈ ಬಗ್ಗೆ ಸಚಿವ ಸಂಪುಟದಲ್ಲಿ ಚರ್ಚೆಯಾಗಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿ, ಈ ಕುರಿತು ಸಚಿವ ಸಂಪುಟದಲ್ಲಿ ಏನೇ ಚರ್ಚೆಯಾಗಿದೆ ಎಂಬುದು ನನಗೆ ಗೊತ್ತಿಲ್ಲ. ಮಾಧ್ಯಮದಲ್ಲಿ ಬಂದಿರುವುದಕ್ಕೆ ಉತ್ತರ ಕೊಡಲು ಆಗುವುದಿಲ್ಲ. ಆದರೆ  ಸಿದ್ದರಾಮಯ್ಯನವರು ಇವೆಲ್ಲವೂ ಸುಳ್ಳು. ನನ್ನನ್ನು ಬ್ಲಾಕ್ ಮೆಲ್ ಮಾಡಲು ಈ ರೀತಿಯಾಗಿ ಮಾಡಿದ್ದಾರೆ ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ಇದರ ತನಿಖೆಯಾದ ಮೇಲೆ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಸ್ಪಷ್ಟಪಡಿಸಿದರು.

ಸ್ವಾತಂತ್ರ ಹೋರಾಟಗಾರರ ನೆನೆಪು ಉಳಿಯಬೇಕು:

ಮಹಾತ್ಮ ಗಾಂಧಿಯವರು ಶಿವಮೊಗ್ಗ ಜಿಲ್ಲೆಯಲ್ಲಿ ಭೇಟಿ ನೀಡಿದ ಸ್ಥಳಗಳು ಹಾಗೂ ಅವರ ನೆನಪುಗಳು ಉಳಿಯುವ ಕೆಲಸವಾಗಬೇಕು. ಅವರ ಉದ್ದೇಶವೂ ಇಲ್ಲಿನ ಜನರಿಗೆ ಸ್ವಷ್ಟವಾಗಿ ತಿಳಿಯಬೇಕು. ಯಾಕೆಂದರೆ ಶಿವಮೊಗ್ಗ, ಉತ್ತರ ಕನ್ನಡ ಮತ್ತು ಬೆಳಗಾಂ ಕ್ರಾಂತಿಕಾರಿ ಜಿಲ್ಲೆಗಳು. ಈ ಜಿಲ್ಲೆಗಳು ಹಲವಾರು ವಿಚಾರಗಳಿಗೆ ಸೈದ್ದಾಂತಿಕವಾಗಿ ಭದ್ರ ಬುನಾದಿ ಹಾಕಿದೆ. ರೈತ ಹೋರಾಟ, ಕಾಗೋಡು ಹೋರಾಟ, ಉತ್ತರ ಕರ್ನಾಟಕ ಮತ್ತು ಬಯಲು ಸೀಮೆಯಲ್ಲಿ ಸ್ವಾತಂತ್ರ ಹೋರಾಟಕ್ಕೆ ಸಾವಿರಾರು ಜನ ಪ್ರಾಣ ತ್ಯಾಗ ಮಾಡಿದ್ದಾರೆ. ಅವರ ನೆನಪಿಗಾಗಿ ಏನಾದರೂ ಮಾಡಬೇಕಿದೆ. ಇದರ ಬಗ್ಗೆ ವಿಧಾನ ಪರಿಷತ್‍ ನಲ್ಲೂ ಪ್ರಸ್ತಾಪಿಸಿದ್ದೇನೆ. ಪರಿಷತ್ ಸದಸ್ಯರ ನಿಧಿ ಸೇರಿದಂತೆ ಅಗತ್ಯ ನೆರವು ನೀಡುವುದರ ಕುರಿತು ಚಿಂತನೆ ನಡೆಸಲಾಗುವುದು ಎಂದರು.

ನಿಗಮ, ಮಂಡಳಿಯ ಅಧ್ಯಕ್ಷರ ಬದಲಾವಣೆ ಕುರಿತು ಮಾತನಾಡಿ, ನಿನ್ನೆ ಚುನಾವಣೆಯಾಗಿದೆ. ವಿಧಾನ ಪರಿಷತ್, ಪದವೀಧರ ಕ್ಷೇತ್ರ, ಶಿಕ್ಷಣ ಕ್ಷೇತ್ರದ ಅದರ ಫಲಿತಾಂಶ ಬಂದ ಕೂಡಲೇ ಈ ಬಗ್ಗೆ ನಿರ್ಣಯ ಮಾಡಲಾಗುತ್ತದೆ. ನಾಲ್ಕು ಸ್ಥಾನ ಗೆಲ್ಲುವ ವಿಶ್ವಾಸ ಇದೆ. ಒಂದು ವಾರದೊಳಗೆ ನಿಗಮ ಮಂಡಳಿ ಅಧ್ಯಕ್ಷ ಮತ್ತು ನಿರ್ದೇಶಕರ ಸ್ಥಾನವನ್ನು ತುಂಬಲಾಗುತ್ತದೆ ಎಂದರು.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

Most Popular