HomeLatest NewsBREAKING: ಮಾಜಿ ಶಾಸಕರ ತೋಟದ ಮನೆಯಲ್ಲಿದ್ದ ಡಬಲ್ ಬ್ಯಾರಲ್ ಗನ್ ಕಳ್ಳತನ

BREAKING: ಮಾಜಿ ಶಾಸಕರ ತೋಟದ ಮನೆಯಲ್ಲಿದ್ದ ಡಬಲ್ ಬ್ಯಾರಲ್ ಗನ್ ಕಳ್ಳತನ

ಕಾರವಾರ: ಮಾಜಿ ಶಾಸಕ ವಿ.ಎಸ್.ಪಾಟೀಲ್, ಅವರ ತೋಟದ ಮನೆಯಲ್ಲಿಟ್ಟಿದ್ದ ಡಬಲ್ ಬ್ಯಾರಲ್ ಗನ್ ಕಳ್ಳತನವಾಗಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ತಾಲೂಕಿನ ಅಂದಲಗಿಯಲ್ಲಿ ನಡೆದಿದೆ.

ಮಾಜಿ ಶಾಸಕ ವಿ.ಎಸ್.ಪಾಟೀಲ್ ಸ್ವರಕ್ಷಣೆಗಾಗಿ ಇಟ್ಟುಕೊಂಡಿದ್ದ ಬಂದೂಕು ಇದ್ದಕ್ಕಿದ್ದಂತೆ ನಾಪತ್ತೆಯಾಗಿದೆ. ಡಿ.31ರಂದು ತೋಟದ ಮನೆಯಲ್ಲಿರುವ ಪಂಪ್ ಹೌಸ್ ನಲ್ಲಿ ಬಂದೂಕು ಇಟ್ಟಿದ್ದರು. ಜನವರಿ 1ರಂದು ಬೆಳಿಗ್ಗೆ ನೋಡಿದಾಗ ಡಬಲ್ ಬ್ಯಾರಲ್ ಬಂದೂಕು ಅಲ್ಲಿರಲಿಲ್ಲ.

ಮನೆಯಲ್ಲಿ ಅಥವಾ ತೋಟದಲ್ಲಿ ಇಟ್ಟಿರಬಹುದು ಎಂದು ಕೆಲ ದಿಗಳ ಕಾಲ ಹುಡುಕಾಡಿದ್ದರು. ಆದರೆ ಎಲ್ಲಿಯೂ ಗನ್ ಪತ್ತೆಯಾಗಿಲ್ಲ. ಈ ಹಿನ್ನೆಲೆಯಲ್ಲಿ ಮುಂಡಗೋಡು ಪೊಲೀಸ್ ಠಾಣೆಯಲ್ಲಿ ಮಾಜಿ ಶಾಸಕರು ದೂರು ದಾಖಲಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular