HomeKarnatakaಗವಿಗಂಗಾಧರೇಶ್ವರನಿಗೆ ಸೂರ್ಯದೇವನ ನಮಸ್ಕಾರ: ಬೆಂಗಳೂರಿನ ಐತಿಹಾಸಿಕ ದೇಗುಲದಲ್ಲಿ ವಿಸ್ಮಯಕಾರಿ ಕ್ಷಣ ಕಣ್ತುಂಬಿಕೊಂಡ ಭಕ್ತರು

ಗವಿಗಂಗಾಧರೇಶ್ವರನಿಗೆ ಸೂರ್ಯದೇವನ ನಮಸ್ಕಾರ: ಬೆಂಗಳೂರಿನ ಐತಿಹಾಸಿಕ ದೇಗುಲದಲ್ಲಿ ವಿಸ್ಮಯಕಾರಿ ಕ್ಷಣ ಕಣ್ತುಂಬಿಕೊಂಡ ಭಕ್ತರು

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನ ಐತಿಹಾಸಿಕ ದೇವಸ್ಥಾನ ಗವಿ ಗಂಗಾಧರೇಶ್ವರ ದೇಗುಲದಲ್ಲಿ ಮಕರ ಸಂಕ್ರಮಣದ ಶುಭ ಸಂದರ್ಭದಲ್ಲಿ ವಿಸ್ಮಯವೊಂದು ನಡೆದಿದೆ. ಸೂರ್ಯ ತನ್ನ ಪಥ ಬದಲಿಸುವ ವೇಳೆ ಗವಿಗಂಗಾಧರೇಶ್ವರ ಸ್ವಾಮಿಗೆ ನಮಸ್ಕರಿಸುವ ಮೂಲಕ ಕೌತುಕ ಸಂದರ್ಭಕ್ಕೆ ಸಾಕ್ಷಿಸಿಯಾಗಿದ್ದಾನೆ.

ಬೆಂಗಳೂರಿನ ಗವಿಪುರಂನಲ್ಲಿರುವ ಗವಿಗಂಗಾಧರೇಶ್ವರ ದೇವಾಲಯದಲ್ಲಿ ಸೂರ್ಯನು ದಕ್ಷಿಣಾಯಣದಿಂದ ಉತ್ತರಾಯಣಕ್ಕೆ ತನ್ನ ಪಥ ಬದಲಿಸುವ ಸಂಕ್ರಾಂತಿಯ ದಿನದಂದು ಸಂಜೆ ಸೂರ್ಯದೇವ ದೇವಾಲಯದ ಗರ್ಭಗುಡಿಯ ಮೂಲಕ ತನ್ನ ರಶ್ಮಿಯನ್ನು ಗಂಗಾಧರನಿಗೆ ಸ್ಪರ್ಶಿಸುವ ಮೂಲಕ ಸೂರ್ಯರಶ್ಮಿಯ ಅಭಿಷೇಕ ಮಾಡಿದ್ದಾನೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಸೂರ್ಯದೇವನ ರಶ್ಮಿಯು ದೇಗುಲದ ಒಳಗಿರುವ ಶಿವಲಿಂಗವನ್ನು ಸಂಜೆ 5 ಗಂಟೆ 18 ನಿಮಿಷಕ್ಕೆ ಸ್ಪರ್ಶಿಸಿದೆ. ಗರ್ಭಗುಡಿಯ ಮುಂಭಾಗದಲ್ಲಿರುವ ನಂದಿಯ ವಿಗ್ರಹದ ಎರಡು ಕೊಂಬುಗಳ ಮೂಲಕವಾಗಿ ಸೂರ್ಯನ ಕಿರಣಗಳು ಮುಖ್ಯದ್ವಾರವನ್ನು ದಾಟಿ ಗರ್ಭಗುಡಿಯಲ್ಲಿರುವ ಶಿವಲಿಂಗವನ್ನು ಸ್ಪರ್ಶಿಸಿವೆ. ಈ ಮೂಲಕ ಸೂರ್ಯದೇವರು ಶಿವ ದೇವರಿಗೆ ನಮಸ್ಕರಿಸಿ ಅಭಿಷೇಕ ಮಾಡಿ ಮುಂದೆ ಚಲಿಸಿದ್ದಾರೆ ಎಂದು ವ್ಯಾಖ್ಯಾನಿಸಲಾಗುತ್ತಿದೆ. ಈ ವಿಸ್ಮಯಕಾರಿ ಬೆಳಕಿನ ಕೌತುಕವನ್ನು ಭಕ್ತರು ಕಣ್ತುಂಬಿಕೊಂಡರು.

ಗವಿಗಂಗಾಧರೇಶ್ವರ ದೇವಾಲಯ ಗೌತಮ ಮುನಿ ಹಾಗೂ ಭಾರದ್ವಾಜ ಮುನಿಗಳು ತಪಸ್ಸು ಮಾಡಿದ ಸ್ಥಳ ಎಂದು ಹೇಳಲಾಗುತ್ತದೆ. ಕಾಶಿಯವರೆಗೂ ಸುರಂಗ ಮಾರ್ಗವಿರುವ ನಿಗೂಢ ತಾಣ ಎಂಬ ಪ್ರತೀತಿಯೂ ಇದೆ.

ಈ ಬಾರಿ ಗವಿಗಂಗಾಧರೇಶ್ವರನಿಗೆ ಸೂರ್ಯಾಭಿಷೇಕದ ಪ್ಯಣ್ಯಕಾಲದ ಬಗ್ಗೆ ದೇವಸ್ಥಾನದ ಪ್ರಧಾನ ಅರ್ಚಕ ಸೋಮಸುಂದರ ದೀಕ್ಷಿತರು ವಿಶ್ಲೇಷಣೆ ನೀಡಿದ್ದು, ಸಂಕ್ರಮಣದ ಶುಭ ಸಂದರ್ಭದಲ್ಲಿ ಸೂರ್ಯದೇವರು ಶಿವ ದೇವರಿಗೆ ಈ ಬಾರಿ ಸಮಪೂಜೆ ಮಾಡಿದ್ದಾರೆ. ದೇವಾಲಯದಲ್ಲಿ ಸೂರ್ಯ ಕಿರಣಗಳು ಸುದೀರ್ಘವಾಗಿ ಇದ್ದವು. ಅದರಲ್ಲಿಯೂ ಶಿವಲಿಂಗದ ಮೇಲೆ ಸೂರ್ಯರಶ್ಮಿ 6 ಸೆಕೆಂಡುಗಳ ಕಾಲ ಸಂಪೂರ್ಣವಾಗಿ ಇದ್ದವು. ಈ ಸಂದರ್ಭದಲ್ಲಿ ಕ್ಷೀರಾಭಿಷೇಕ ಮಾಡಲಾಗುತ್ತಿತ್ತು. ಹಾಗಾಗಿ ಸೂರ್ಯದೇವರು ಸಂಪೂರ್ಣ ಪೂಜೆ ನೆರವೇರಿಸಿ ತೆರಳಿದ್ದಾರೆ. ಈ ಬಾರಿ ನಾಡಿಗೆ ಒಳಿತಾಗಲಿದೆ. ಯಾವುದೇ ತೊಂದರೆಗಳು ಇಲ್ಲ ಎಂದು ತಿಳಿಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular