HomeLatest NewsBREAKING: ನಟಿ ಕಾರುಣ್ಯ ರಾಮ್ ವಿರುದ್ಧವೇ ವಂಚನೆ ಆರೋಪ: ದೂರು ದಾಖಲು

BREAKING: ನಟಿ ಕಾರುಣ್ಯ ರಾಮ್ ವಿರುದ್ಧವೇ ವಂಚನೆ ಆರೋಪ: ದೂರು ದಾಖಲು

ಬೆಂಗಳೂರು: ಸ್ಯಾಂಡಲ್ ವುಡ್ ನಟಿ ಕಾರುಣ್ಯ ರಾಮ್ ತನ್ನ ತಂಗಿ ವಿರುದ್ಧವೇ ವಂಚನೆ ಆರೋಪ ಮಾಡಿ ಸೈಬರ್ ಕ್ರೈಂಗೆ ದೂರು ದಾಖಲಿಸಿದ್ದರು. ಇದರ ಬೆನ್ನಲ್ಲೇ ಇದೀಗ ಮಹಿಳೆಯೊಬ್ಬರು ನಟಿ ಕಾರುಣ್ಯ ರಾಮ್ ವಿರುದ್ಧವೇ ದೂರು ದಾಖಲಿಸಿರುವ ಘಟನೆ ನಡೆದಿದೆ.

ನಟಿ ಕಾರುಣ್ಯ ರಾಮ್ ತನ್ನ ಸಹೋದರಿ ಸಮೃದ್ಧಿ ರಾಮ್ ವಿರುದ್ಧ 35 ಲಕ್ಷ ವಂಚನೆ ಆರೋಪ ಮಾಡಿದ್ದರು. ಸಮೃದ್ಧಿ ಬೆಟ್ಟಿಂಗ್ ಆಪ್ ನಲ್ಲಿ ಹಣ ತೊಡಗಿಸಿ ಹಣ ಕಳೆದುಕೊಂಡಿದ್ದಾಳೆ. ತನ್ನ ಹಣವನ್ನೂ ಬಳಸಿಕೊಂಡಿದ್ದಾಳೆ. ಬೈದಿದ್ದಕ್ಕೆ ತನ್ನನ್ನೇ ಮನೆಯಿಂದ ಹೊರ ಹಾಕಿದ್ದಾಳೆ ಎಂದು ಸಹೋದರಿ ಸಮೃದ್ಧಿ, ಪ್ರತಿಭಾ ಹಾಗೂ ಇನ್ನಿತರರ ವಿರುದ್ಧ ಸೈಬರ್ ಠಾಣೆಯಲ್ಲಿ ದೂರು ನೀಡಿದ್ದರು.

ಈ ಘಟನೆ ಬೆನ್ನಲ್ಲೇ ಪ್ರತಿಭಾ ಎಂಬ ಮಹಿಳೆ ನಟಿ ಕಾರುಣ್ಯ ರಾಮ್ ವಿರುದ್ಧವೇ ವಂಚನೆ ಆರೋಪ ಮಾಡಿ, ಆರ್.ಆರ್.ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಸ್ಟುಡಿಯೋ ಹಾಗೂ ಬ್ಯುಸಿನೆಸ್ ಗೆ ಹಣ ಶಾರ್ಟೇಜ್ ಇದೆ ಎಂದು 3 ಲಕ್ಷ ರೂಪಾಯಿ ಹಣ ಪಡೆದಿದ್ದ ಕಾರುಣ್ಯ ರಾಮ್, ವಾಪಸ್ ಕೇಳಿದರೆ ಧಮ್ಕಿ ಹಾಕಿದ್ದಾರೆ. ಕಾರುಣ್ಯ ರಾಮ್ ಹಾಗೂ ಆಕೆಯ ಸಹೋದರಿ ಇಬ್ಬರೂ ಸೇರಿ ಮೋಸ ಮಾಡಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಹಣ ವಾಪಸ್ ಕೇಳಿದ್ದಕ್ಕೆ ಬದುಕಿದ್ರೆ ಕೊಡ್ತೀನಿ. ನಿನ್ನ ಹೆಸರು ಬರೆದಿಟ್ಟು ಸಾಯುತ್ತೇವೆ ಎಂದು ಬೆದರಿಕೆ ಹಾಕಿದ್ದಾರೆ. ಕೊಟ್ಟ ಹಣ ವಾಪಸ್ ಕೊಡದೇ ವಂಚಿಸಿದ್ದಾರೆ ಎಂದು ಕಾರುಣ್ಯ ರಾಮ್ ಹಾಗೂ ಸಮೃದ್ಧಿ ವಿರುದ್ಧ ದೂರು ದಾಖಲಿಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular