HomeKarnatakaBIG NEWS: ನಿಂತಿದ್ದ ಕಾರಿನಲ್ಲಿ 1.14 ಕೋಟಿ ಹಣ ಪತ್ತೆ ಪ್ರಕರಣ: ಕಾರಿನಲ್ಲಿ ಹಲವು ನಂಬರ್...

BIG NEWS: ನಿಂತಿದ್ದ ಕಾರಿನಲ್ಲಿ 1.14 ಕೋಟಿ ಹಣ ಪತ್ತೆ ಪ್ರಕರಣ: ಕಾರಿನಲ್ಲಿ ಹಲವು ನಂಬರ್ ಪ್ಲೇಟ್ ಗಳು ಪತ್ತೆ; ಮಾಲೀಕನ ಬಗ್ಗೆಯೂ ಸಿಕ್ಕಿತು ಸುಳಿವು

ಅಂಕೋಲಾ: ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ರಾಮಗುಳಿ ಗ್ರಾಮದ ಬಳಿ ನಿಂತಿದ್ದ ಕಾರಿನಲ್ಲಿ ಬರ್ಬ್ಬರಿ 1.14 ಕೋಟಿ ಹಣ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನಷ್ಟು ಮಾಹಿತಿಗಳು ಲಭ್ಯವಾಗಿವೆ.

ನಿಂತಿದ್ದ ಕಾರಿನಲ್ಲಿ 1.14 ಕೋಟಿ ಹಣ ಪತ್ತೆ ಪ್ರಕರಣ ಸಂಬಂಧ ಸಿಕ್ಕಿರುವ ಹಣ ಯಾರಿಗೆ ಸೇರಿದ್ದು ಎಂಬುದು ತಿಳಿದುಬಂದಿಲ್ಲ. ಆದರೆ ಕಾರಿನ ನೋಂದಣಿ ಸಂಖ್ಯೆ ಆಧರಿಸಿ ಇದು ಮಂಗಳೂರಿನ ನಿವಾಸಿ ರಾಜೇಶ್ ಪವಾರ್ ಗೆ ಸೇರಿದ ಕಾರು ಎಂದು ತಿಳಿದುಬಂದಿದೆ.

ಕಾರಿನಲ್ಲಿ ಹಣದ ಜೊತೆಗೆ ಇನ್ನೂ ಹಲವು ನಂಬರ್ ಪ್ಲೇಟ್ ಗಳು ಪತ್ತೆಯಾಗಿವೆ. ಹಾಗಾಗಿ ಕಾರನ್ನು ಅಕ್ರಮ ವ್ಯವಹಾರಗಳಿಗೆ ಬಳಸಲಾಗುತ್ತಿದೆಯೇ ಎಂಬ ಶಂಕೆ ವ್ಯಕ್ತವಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

 

 

For Latest News Updates, Join Our Whatsapp Community🚩
RELATED ARTICLES

Most Popular