HomeCrimeUPI ಟಿಕೆಟ್ ಹಣ ಸ್ವಂತ ಖಾತೆಗೆ: ಮೂವರು ಬಿಎಂಟಿಸಿ ಕಂಡಕ್ಟರ್ ಸಸ್ಪೆಂಡ್

UPI ಟಿಕೆಟ್ ಹಣ ಸ್ವಂತ ಖಾತೆಗೆ: ಮೂವರು ಬಿಎಂಟಿಸಿ ಕಂಡಕ್ಟರ್ ಸಸ್ಪೆಂಡ್

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ)ಯ ಹಗರಣವೊಂದು ಎರಡು ದಿನಗಳಿಂದ ಸದ್ದು ಮಾಡುತ್ತಿತ್ತು. ಬಿಎಂಟಿಸಿ ಬಸ್‌ನ ಯುಪಿಐ ಹಣವನ್ನು ಸ್ವಂತ ಖಾತೆಗೆ ಕಂಡಕ್ಟರ್‌ಗಳು ಹಾಕಿಕೊಂಡಿದ್ದು, ಅಧಿಕಾರಿಗಳ ಪರಿಶೀಲನೆ ವೇಳೆ ಬೆಳಕಿಗೆ ಬಂದಿತ್ತು.

ಈ ಕುರಿತು ಈಗ ಬಿಎಂಟಿಸಿ ಕ್ರಮ ಕೈಗೊಂಡಿದೆ. ಮೂವರು ಕಂಡಕ್ಟರ್‌ಗಳನ್ನು ಅಮಾನತು ಮಾಡಿ ಆದೇಶಿಸಿದೆ. ಅಮಾನತುಗೊಂಡವರು 23ನೇ ಡಿಪೋ ಕಂಡಕ್ಟರ್ ಸುರೇಶ್, 3ನೇ ಡಿಪೋ ಕಂಡಕ್ಟರ್ ಕಂ ಡ್ರೈವರ್ ಮಂಚೇಗೌಡ ಮತ್ತು 14ನೇ ಡಿಪೋ ಕಂಡಕ್ಟರ್ ಅಶ್ವಕ್ ಖಾನ್.

ಘಟನೆ ವಿವರ: ಡಿಸೆಂಬರ್ 2025ರಲ್ಲಿ ಬಿಎಂಟಿಸಿಯ ಅಧಿಕಾರಿಗಳ ತಂಡ ನಿರಂತರವಾಗಿ ಪರಿಶೀಲನೆ ನಡೆಸಿದಾಗ ಅಮಾನತುಗೊಂಡ ಸಿಬ್ಬಂದಿಗಳು ಯುಪಿಐ ಟಿಕೆಟ್‌ ಹಣವನ್ನು ದುರುಪಯೋಗ ಮಾಡಿಕೊಂಡಿರುವುದು ತಿಳಿದುಬಂದಿತ್ತು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಬಿಎಂಟಿಸಿ ಅಧಿಕೃತ ಖಾತೆಯ ಸ್ಕ್ಯಾನರ್ ಬದಲು ತಮ್ಮ ವೈಯಕ್ತಿಕ ಖಾತೆಯ ಸ್ಕ್ಯಾನರ್ ಅನ್ನು ನೀಡಿ ಅದಕ್ಕೆ ಬಿಎಂಟಿಸಿ ಟಿಕೆಟ್ ಹಣವನ್ನು ಜಮೆ ಮಾಡಿಕೊಳ್ಳುತ್ತಿದ್ದರು. ಆದ್ದರಿಂದ ಸಂಸ್ಥೆಯ ನಿಯಮಗಳ ಉಲ್ಲಂಘನೆ, ಆರ್ಥಿಕ ಶಿಸ್ತು ಮೀರಿ ವರ್ತನೆ, ಟಿಕೆಟ್ ಹಂಚಿಕೆಯಲ್ಲಿ ಅಕ್ರಮ ಎಸಗಿದ ಕಾರಣಕ್ಕೆ ಮೂವರನ್ನು ತತ್‌ಕ್ಷಣದಿಂದ ಅಮಾನತುಗೊಳಿಸಲಾಗಿದೆ.

ಈ ಕುರಿತು ತನಿಖೆ ನಡೆಸಿದಾಗ ಸಿಬ್ಬಂದಿಗಳು ಅಕ್ರಮದಲ್ಲಿ ತೊಡಗಿದ್ದು ಸಾಬೀತಾಗಿದ್ದು, ತುರ್ತು ಕ್ರಮದ ಭಾಗವಾಗಿ ಅವರನ್ನು ಅಮಾನತು ಮಾಡಲಾಗಿದೆ. ಅವರ ವಿರುದ್ಧ ಇಲಾಖಾ ತನಿಖೆಗೆ ಶಿಫಾರಸು ಮಾಡಲಾಗಿದೆ ಎಂದು ಬಿಎಂಟಿಸಿ ಹೇಳಿದೆ.

ಭವಿಷ್ಯದಲ್ಲಿ ಇಂತಹ ಘಟನೆಗಳು ನಡೆಯದಂತೆ ಎಚ್ಚರಿಕೆ ಕೈಗೊಳ್ಳಬೇಕು ಎಂದು ಎಲ್ಲಾ ಡಿಪೋ ಮ್ಯಾನೇಜರ್‌ಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಬಿಎಂಟಿಸಿಯ ಯುಪಿಐ ಪಾವತಿ ವ್ಯವಸ್ಥೆ ಬಳಕೆ ಮಾಡಬೇಕು. ಯುಪಿಐ ಟಿಕೆಟ್ ಆದಾಯದ ಕುರಿತು ಆಗಾಗ ಪರಿಶೀಲನೆ ಮಾಡಬೇಕು ಎಂದು ನಿರ್ದೇಶಿಸಲಾಗಿದೆ.

ಕೆಲವೇ ದಿನಗಳಲ್ಲಿ ಬಿಎಂಟಿಸಿ ಡೈನಮಿಕ್ ಕ್ಯುಆರ್ ಕೋಡ್ ಆಧಾರಿತ ಯುಪಿಐ ಟಿಕೆಟ್ ವ್ಯವಸ್ಥೆಯನ್ನು ಜಾರಿಗೆ ತರಲಿದೆ. ಇದು ಬಹಳ ಪಾರದರ್ಶಕವಾಗಿದ್ದು, ಟಿಕೆಟ್ ಆದಾಯ, ಅಕ್ರಮ ತಡೆ ಮತ್ತು ಜನರ ವಿಶ್ವಾಸಾರ್ಹತೆಗೆ ತಕ್ಕಂತೆ ಇರಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಘಟನೆ ಕುರಿತು ಸಾರಿಗೆ ಸಚಿವರಿಗೆ ಸಹ ವಿವರಣೆ ನೀಡಲಾಗಿದ್ದು, ಘಟನೆಯನ್ನು ಗಂಭೀರವಾಗಿ ಪರಿಗಣಿಸಿ ಸಿಬ್ಬಂದಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಅವರು ಸೂಚನೆ ನೀಡಿದ್ದಾರೆ.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

Most Popular