ಬೆಂಗಳೂರು: ನಟ ಕಿಚ್ಚ ಸುದೀಪ್ ಹಾಗೂ ಮ್ಯಾನೇಜರ್ ಚಂದ್ರಚೂಡ್ ವಿರುದ್ಧ ಕಾಫಿ ತೋಟದ ಮಾಲೀಕರಿಬ್ಬರು ವಂಚನೆ ಆರೋಪ ಮಾಡಿದ್ದು, ಕಮಿಷನರ್ ಗೆ ದೂರು ನೀಡಿದ್ದಾರೆ.
ಕಾಫಿ ತೋಟದ ಮಾಲೀಕ ದೀಪಕ್ ಎಂಬುವವರು ಬೆಂಗಳೂರು ನಗರ ಪೊಲೀಸ್ ಆಯುಕ್ತರ ಕಚೇರಿಗೆ ಆಗಮಿಸಿ, ನಟ ಕಿಚ್ಚ ಸುದೀಪ್ ಹಾಗೂ ಅವರ ಮ್ಯಾನೇಜರ್ ಚಂದ್ರಚೂಡ್ ವಿರುದ್ಧ ವಂಚನೆ ದೂರು ನೀಡಿದ್ದಾರೆ. ದೀಪಕ್ ಅವರಿಗೆ ಸೇರಿದ್ದ ಮನೆ ಹಾಗೂ ಕಾಫಿತೋಟದಲ್ಲಿ ಧಾರಾವಾಹಿಯೊಂದರ ಚಿತ್ರೀಕರಣಕ್ಕಾಗಿ ಅಗ್ರಿಮೆಂಟ್ ಮಾಡಿಕೊಂಡಿದ್ದರು. ಅಗ್ರಿಮೆಂಟ್ ನಮ್ತೆ ಹಣ ನೀಡದೇ ವಂಚಿಸಿದ್ದಾರೆ ಎಂದು ಆರೋಪಿಸಿದ್ದಾರೆ.
‘ವಾರಸ್ದಾರ’ ಎಂಬ ಧಾರಾವಾಹಿಗಾಗಿ ಮನೆ ಹಗೂ ಕಾಫಿತೋಟದಲ್ಲಿ ಚಿತ್ರೀಕರಣ ಮಾಡಲು 2 ವರ್ಷಗಳ ಅಗ್ರಿಮೆಂಟ್ ಮಾಡಿಕೊಂಡಿದ್ದರು. ಚಿತ್ರೀಕರಣ ಶುರುಮಾಡಿದ ಕೆಲವೇ ದಿನಗಳಲ್ಲಿ ಚಿತ್ರೀಕರಣ ಸ್ಥಗಿತಗೊಳಿಸಿದ್ದಾರೆ. ಅಲ್ಲದೇ ಚಿತ್ರೀಕರಣಕ್ಕಾಗಿ ಕಾಫಿ ತೋಟ, ಮರಗಳನ್ನು ನಾಶ ಮಾಡಿದ್ದಾರೆ. ಅಗ್ರಿಮೆಂಟ್ ನಂತೆ ಹಣ ಪಾವತಿಸಿಲ್ಲ. ಈ ಹಿನ್ನೆಲೆಯಲ್ಲಿ 95 ಲಕ್ಷ ಪರಿಹಾರ ನೀಡುವಂತೆ ಕಿಚ್ಚ ಸುದೀಪ್ ಹಾಗೂ ಚಂದ್ರಚೂಡ್ ವಿರುದ್ಧ ಈ ಹಿಂದೆಯೇ ಕೇಸ್ ಹಾಕಿದ್ದರಂತೆ. ಕೇಸ್ ವಾಪಸ್ ಪಡೆಯಿರಿ 60 ಲಕ್ಷ ಹಣ ನೀಡುವುದಾಗಿ ನಟ ಕಿಚ್ಚ ಸುದೀಪ್ ಭರವಸೆ ನೀಡಿದ್ದರು. ಮಾತುಕತೆ ಬಳಿಕ ದಿಪಕ್ ಕೇಸ್ ವಾಪಸ್ ಪಡೆದಿದ್ದರಂತೆ.
ಹೀಗೆ ಕೇಸ್ ವಾಪಸ್ ಪಡೆಯುವ ಮುನ್ನ ಕಿಚ್ಚ ಸುದೀಪ್ ಮ್ಯಾನೇಜರ್ ಚಂದ್ರಚೂಡ್ 10 ಲಕ್ಷ ರೂಪಾಯಿ ಚೆಕ್ ನೀಡಿದ್ದರು. ಬಳಿಕ ಕೇಸ್ ವಾಪಸ್ ಪಡೆದ ನಂತರ ಬಾಕಿ ಹಣ ನೀಡದೇ ವಂಚಿಸಿದ್ದಾರೆ ಎಂದು ದೀಪಕ್ ಆರೋಪಿಸಿದ್ದಾರೆ. ಈ ಹಿನ್ನೆಲೆಯಲ್ಲಿ ನಟ ಕಿಚ್ಚ ಸುದೀಪ್, ಮ್ಯಾನೇಜರ್ ಚಂದ್ರಚೂಡ್ ವಿರುದ್ಧ ದೂರು ನೀಡಿದ್ದಾರೆ.

