HomeEntertainmentಹೊಸ ವರ್ಷಕ್ಕೆ ಮತ್ತೊಂದು ಟೀಸರ್ ಬಿಡುಗಡೆ ಮಾಡಿದ 'ಉಪಾಧ್ಯಕ್ಷ' ಚಿತ್ರತಂಡ

ಹೊಸ ವರ್ಷಕ್ಕೆ ಮತ್ತೊಂದು ಟೀಸರ್ ಬಿಡುಗಡೆ ಮಾಡಿದ ‘ಉಪಾಧ್ಯಕ್ಷ’ ಚಿತ್ರತಂಡ

ಅನಿಲ್ ಕುಮಾರ್ ನಿರ್ದೇಶನದ ಚಿಕ್ಕಣ್ಣ ಅಭಿನಯದ ಬಹುನಿರೀಕ್ಷಿತ ‘ಉಪಾಧ್ಯಕ್ಷ’ ಸಿನಿಮಾ ಇದೇ ತಿಂಗಳು ಜನವರಿ 26ರಂದು ರಾಜ್ಯದ್ಯಂತ ತೆರೆ ಕಾಣಲಿದ್ದು, ಉಪಾಧ್ಯಕ್ಷ ಚಿತ್ರತಂಡ ಹೊಸ ವರ್ಷದ ಪ್ರಯುಕ್ತ ಮತ್ತೊಂದು ಟೀಸರ್ ಅನ್ನು ಇಂದು ಆನಂದ್ ಆಡಿಯೋ ಯುಟ್ಯೂಬ್ ಚಾನೆಲ್ ನಲ್ಲಿ  ರಿಲೀಸ್ ಮಾಡಿದ್ದಾರೆ.

ಡಿ ಎನ್ ಸಿನಿಮಾಸ್ ಬ್ಯಾನರ್ ನಡಿ ಸ್ಮಿತಾ ಉಮಾಪತಿ ಈ ಚಿತ್ರವನ್ನು ನಿರ್ಮಾಣ ಮಾಡಿದ್ದು, ಚಿಕ್ಕಣ್ಣ ಸೇರಿದಂತೆ ಮಲೈಕಾ ವಾಸುಪಾಲ್, ರವಿಶಂಕರ್, ಸಾಧು ಕೋಕಿಲ  ಬಣ್ಣ ಹಚ್ಚಿದ್ದಾರೆ. ಕೆ ಎಂ ಪ್ರಕಾಶ್ ಸಂಕಲನವಿದ್ದು, ಶೇಖರ್ ಚಂದ್ರ ಛಾಯಾಗ್ರಹಣವಿದೆ. ಮ್ಯೂಸಿಕ್ ಮಾಂತ್ರಿಕ ಅರ್ಜುನ್ ಜನ್ಯ ಸಂಗೀತ ಸಂಯೋಜನೆ ನೀಡಿದ್ದಾರೆ.

ಎರಡು ತಿಂಗಳ ಹಿಂದೆ ಉಪಾಧ್ಯಕ್ಷ ಸಿನಿಮಾದ ಟೀಸರ್ ಬಿಡುಗಡೆಯಾಗಿ ಭರ್ಜರಿ ವೀಕ್ಷಣೆ ಪಡೆದಿತ್ತು, ಇದೀಗ ಹೊಸ ವರ್ಷದ ಪ್ರಯುಕ್ತ ಮತ್ತೊಂದು ಟೀಸರ್ ಅನ್ನು ಇಂದು ರಿಲೀಸ್ ಮಾಡಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular