HomeSportsUnder 19 WC Final: 15 ಸಿಕ್ಸ್, 15 ಫೋರ್; ಬರೋಬ್ಬರಿ 175 ರನ್ ಚಚ್ಚಿದ...

Under 19 WC Final: 15 ಸಿಕ್ಸ್, 15 ಫೋರ್; ಬರೋಬ್ಬರಿ 175 ರನ್ ಚಚ್ಚಿದ ವೈಭವ್ ಸೂರ್ಯವಂಶಿ

ಹರಾರೆ ಕ್ರೀಡಾಂಗಣದಲ್ಲಿ ಅಂಡರ್ 19 ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯ ಇಂದು ( ಫೆಬ್ರವರಿ 6 ) ನಡೆಯುತ್ತಿದ್ದು, ಭಾರತ ಹಾಗೂ ಇಂಗ್ಲೆಂಡ್ ತಂಡಗಳು ಮುಖಾಮುಖಿಯಾಗಿವೆ.

ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ಬ್ಯಾಟಿಂಗ್ ಆರಿಸಿಕೊಂಡಿತು. ಅದರಂತೆ ಬ್ಯಾಟಿಂಗ್ ಆರಂಭಿಸಿದ ಭಾರತಕ್ಕೆ ಸೆಮಿಫೈನಲ್ ಪಂದ್ಯದಲ್ಲಿ ಶತಕ ಬಾರಿಸಿದ್ದ ಆರನ್ ಜಾರ್ಜ್ ಕೇವಲ 9 ರನ್‌ಗೆ ಔಟ್ ಆಗಿ ವಿಕೆಟ್ ಒಪ್ಪಿಸಿದರು. ಹೀಗೆ ಆರಂಭಿಕ ಆಘಾತ ಕಂಡ ಭಾರತಕ್ಕೆ ಮತ್ತೋರ್ವ ಆರಂಭಿಕ ಆಟಗಾರ ವೈಭವ್ ಸೂರ್ಯವಂಶಿ ಅಬ್ಬರಿಸಿ ಬೊಬ್ಬಿರಿದು ಆಸರೆಯಾದರು.

ತನ್ನ ಇನ್ನಿಂಗ್ಸ್ ಉದ್ದಕ್ಕೂ ಬೌಂಡರಿ ಹಾಗೂ ಸಿಕ್ಸರ್ ಸುರಿಮಳೆಯನ್ನೇ ಸುರಿಸಿದ ವೈಭವ್ ಸೂರ್ಯವಂಶಿ ಐಸಿಸಿ 50 ಓವರ್‌ಗಳ ಟೂರ್ನಿಗಳ ಫೈನಲ್‌ನಲ್ಲಿ ಅತಿ ಬೇಗನೆ ಶತಕ ಬಾರಿಸಿದ ದಾಖಲೆಯನ್ನು ತಮ್ಮ ಹೆಸರಿಗೆ ಬರೆದುಕೊಂಡರು. ಕೇವಲ 55 ಎಸೆತಗಳಿಗೆ ತನ್ನ ಶತಕವನ್ನು ಪೂರೈಸಿದ ವೈಭವ್ 80 ಎಸೆತಗಳಲ್ಲಿ 15 ಸಿಕ್ಸರ್ ಹಾಗೂ 15 ಬೌಂಡರಿಗಳನ್ನು ಬಾರಿಸಿ ಒಟ್ಟು 175 ರನ್ ಚಚ್ಚಿದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
Srinivasa A Kollegala
Srinivasa A Kollegala
Srinivasa A has over 6 years of experience in journalism. He has worked as a Social Media Executive at OneIndia, Sub-Editor at MyKhel and Filmibeat Kannada, and led the digital team at Andolana newspaper as Digital Head.
RELATED ARTICLES

Most Popular