HomeIndiaಮನೆ ಬೀಗ ಒಡೆಯಲು ಆಗದಿದ್ದಾಗ ಮೆಟ್ಟಿಲು ಕೆಳಗಿದ್ದ ಇನ್ವರ್ಟರ್ ಕದ್ದೊಯ್ದ ಕಳ್ಳ

ಮನೆ ಬೀಗ ಒಡೆಯಲು ಆಗದಿದ್ದಾಗ ಮೆಟ್ಟಿಲು ಕೆಳಗಿದ್ದ ಇನ್ವರ್ಟರ್ ಕದ್ದೊಯ್ದ ಕಳ್ಳ

ಮನೆಬೀಗ ಒಡೆಯಲು ಸಾಧ್ಯವಾಗದ ನಂತರ ಕಳ್ಳ ಮೆಟ್ಟಿಲು ಕೆಳಗೆ ಇಟ್ಟಿದ್ದ ಇನ್ವರ್ಟರ್ ಕದ್ದು ಎಸ್ಕೇಪ್ ಆಗಿದ್ದಾನೆ. ರಾಜಸ್ಥಾನದ ಕೋಟಾದ ಮನೆಯೊಂದರಲ್ಲಿ ಈ ಘಟನೆ ನಡೆದಿದೆ.

ಇಡೀ ಘಟನೆ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಮನೆಯ ಮಾಲೀಕ ಸಂಜಯ್ ಸುಮನ್ ಸುತ್ತಮುತ್ತಲಿನವರಿಂದ ವಿಡಿಯೋ ದೃಶ್ಯಾವಳಿಗಳನ್ನು ಸಂಗ್ರಹಿಸಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಘಟನೆ ನಡೆದಾಗ ತಾನು ಕಚೇರಿಯಲ್ಲಿದ್ದೆ ಮತ್ತು ಮನೆಯವರು ಹೊರಗೆ ಹೋಗಿದ್ದರು ಎಂದು ಸುಮನ್ ದೂರಿನಲ್ಲಿ ತಿಳಿಸಿದ್ದಾರೆ.

“ಕಳ್ಳನೊಬ್ಬ ನಮ್ಮ ಮನೆಗೆ ನುಗ್ಗಿ ಬೀಗ ಒಡೆಯಲು ಯತ್ನಿಸಿದ್ದಾನೆ. ಆದರೆ ಅದನ್ನು ಒಡೆಯಲು ಸಾಧ್ಯವಾಗದ ಕಾರಣ ಇನ್ವರ್ಟರ್ ತೆಗೆದುಕೊಂಡು ಹೋಗಿದ್ದಾನೆ. ನಾನು ಬೋರಖೇಡದಲ್ಲಿ ವಾಸವಾಗಿದ್ದೇನೆ. ನನ್ನ ಅಕ್ಕಪಕ್ಕದ ಮನೆಗಳಲ್ಲಿ ಅಳವಡಿಸಲಾದ ಕ್ಯಾಮೆರಾಗಳಿಂದ ವೀಡಿಯೊ ಮತ್ತು ಫೋಟೋಗಳನ್ನು ಸಂಗ್ರಹಿಸಿ ದೂರು ದಾಖಲಿಸಿದ್ದೇನೆ” ಎಂದು ಅವರು ತಿಳಿಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular