HomeKarnatakaಹಬ್ಬಕ್ಕೆ ಊರಿಗೆ ಹೋದವರು ವಾಪಸ್ ಆಗಲು ವಿಶೇಷ ರೈಲು ವ್ಯವಸ್ಥೆ: ಇಲ್ಲಿದೆ ವೇಳಾಪಟ್ಟಿ

ಹಬ್ಬಕ್ಕೆ ಊರಿಗೆ ಹೋದವರು ವಾಪಸ್ ಆಗಲು ವಿಶೇಷ ರೈಲು ವ್ಯವಸ್ಥೆ: ಇಲ್ಲಿದೆ ವೇಳಾಪಟ್ಟಿ

ಬೆಂಗಳೂರು:ಯುಗಾದಿ ಮತ್ತು ರಂಜಾನ್ ರಜೆಗಳಿಗಾಗಿ ಬೆಂಗಳೂರಿನಿಂದ ಊರಿಗೆ ತೆರಳಿದ್ದ ಪ್ರಯಾಣಿಕರು ಮರಳಲು ನೈಋತ್ಯ ರೈಲ್ವೆ ವಿಶೇಷ ರೈಲು ಸೇವೆ ಕಲ್ಪಿಸಿದೆ.

ಹೆಚ್ಚುವರಿ ದಟ್ಟಣೆ ನಿಭಾಯಿಸಲು ಬೆಂಗಳೂರು, ಬೆಳಗಾವಿ, ಹುಬ್ಬಳ್ಳಿ, ವಿಜಯಪುರ, ಹೊಸಪೇಟೆ ಮತ್ತು ಗೋವಾ ಮಾರ್ಗಗಳಲ್ಲಿ ಈ ರೈಲುಗಳು ಸಂಚರಿಸುತ್ತಿವೆ.

ರೈಲು ಸಂಖ್ಯೆ 06503 ಮಾರ್ಚ್ 18ರಂದು ಸಂಜೆ 7 ಗಂಟೆಗೆ ಸರ್ ಎಂ.ವಿಶ್ವೇಶ್ವರಯ್ಯ ಟರ್ಮಿನಲ್ (SMVT) ಬೆಂಗಳೂರಿನಿಂದ ಹೊರಟು, ಮುಂದಿನ ದಿನ ಬೆಳಿಗ್ಗೆ 7.35ಕ್ಕೆ ಬೆಳಗಾವಿ ತಲುಪಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ರಿಟರ್ನ್ ರೈಲು ಸಂಖ್ಯೆ 06504 ಮಾರ್ಚ್ 22ರಂದು ಸಂಜೆ 5.30ಕ್ಕೆ ಬೆಳಗಾವಿಯಿಂದ ಹೊರಟು, ಮಾರ್ಚ್ 23ರಂದು ಬೆಳಿಗ್ಗೆ 5ಕ್ಕೆ ಬೆಂಗಳೂರು ತಲುಪಲಿದೆ.

ಈ ರೈಲು ಚಿಕ್ಕಬಾಣಾವರ, ತುಮಕೂರು, ಅರಸೀಕೆರೆ, ಬೀರೂರು, ದಾವಣಗೆರೆ, ಹರಿಹರ, ಹಾವೇರಿ, ಹುಬ್ಬಳ್ಳಿ, ಧಾರವಾಡ, ಅಳ್ನಾವರ, ಲೊಂಡಾ ಮತ್ತು ಖಾನಾಪುರ ನಿಲ್ದಾಣಗಳಲ್ಲಿ ನಿಲುಗಡೆ ಹೊಂದಿದೆ.

ಬೆಂಗಳೂರು-ವಿಜಯಪುರ ವಿಶೇಷ ರೈಲು:
ರೈಲು ಸಂಖ್ಯೆ 06277 ಮಾರ್ಚ್ 18ರಂದು ರಾತ್ರಿ 9.50ಕ್ಕೆ ಯಶವಂತಪುರದಿಂದ ಹೊರಟು, ಮುಂದಿನ ದಿನ ಬೆಳಿಗ್ಗೆ 9.45ಕ್ಕೆ ವಿಜಯಪುರ ತಲುಪಿದೆ.

ರಿಟರ್ನ್ ರೈಲು ಸಂಖ್ಯೆ 06278 ಮಾರ್ಚ್ 22ರಂದು ಮಧ್ಯಾಹ್ನ 1.30ಕ್ಕೆ ವಿಜಯಪುರದಿಂದ ಹೊರಟು, ಮಾರ್ಚ್ 23ರಂದು ರಾತ್ರಿ 12.30ಕ್ಕೆ ಯಶವಂತಪುರ ತಲುಪಲಿದೆ.

ಈ ರೈಲು ತುಮಕೂರು, ಅರಸೀಕೆರೆ, ಬೀರೂರು, ದಾವಣಗೆರೆ, ಹರಿಹರ, ರಾಣಿಬೆನ್ನೂರು, ಹಾವೇರಿ, ಬಾದಾಮಿ, ಬಾಗಲಕೋಟೆ ಮತ್ತು ಆಲಮಟ್ಟಿ ನಿಲ್ದಾಣಗಳಲ್ಲಿ ನಿಲುಗಡೆ ಹೊಂದಿದೆ.

ಹುಬ್ಬಳ್ಳಿ-ಯಶವಂತಪುರ ವಿಶೇಷ ರೈಲು:
ರೈಲು ಸಂಖ್ಯೆ 07379 ಮಾರ್ಚ್ 18ರಂದು ಮಧ್ಯಾಹ್ನ 12ಕ್ಕೆ ಹುಬ್ಬಳ್ಳಿಯಿಂದ ಹೊರಟು, ಅದೇ ದಿನ ರಾತ್ರಿ 8.15ಕ್ಕೆ ಯಶವಂತಪುರ ತಲುಪಿದೆ. ಹಾವೇರಿ, ಹರಿಹರ, ದಾವಣಗೆರೆ, ಅರಸೀಕೆರೆ ಮತ್ತು ತುಮಕೂರು ನಿಲ್ದಾಣಗಳಲ್ಲಿ ನಿಲುಗಡೆ ಇರುತ್ತದೆ.

ಬೆಂಗಳೂರು-ಗೋವಾ ವಿಶೇಷ ರೈಲು:
ರೈಲು ಸಂಖ್ಯೆ 06267 ಮಾರ್ಚ್ 18ರಂದು ಮಧ್ಯಾಹ್ನ 12ಕ್ಕೆ ಯಶವಂತಪುರದಿಂದ ಹೊರಟು, ಮಾರ್ಚ್ 19ರಂದು ಬೆಳಿಗ್ಗೆ 6.45ಕ್ಕೆ ಮಡಗಾಂವ್ ತಲುಪಿದೆ.

ಕುಣಿಗಲ್, ಚನ್ನರಾಯಪಟ್ಟಣ, ಹಾಸನ, ಸಕಲೇಶಪುರ, ಸುಬ್ರಹ್ಮಣ್ಯ ರಸ್ತೆ, ಕಬಕಪುತ್ತೂರು, ಬಂಟ್ವಾಳ, ಸುರತ್ಕಲ್, ಮಂಗಳೂರು ಸಮೀಪದ ಹಲವಾರು ನಿಲ್ದಾಣಗಳಲ್ಲಿ ನಿಲುಗಡೆ ಇರುತ್ತದೆ.

ರಿಟರ್ನ್ ರೈಲು ಸಂಖ್ಯೆ 06268 ಮಾರ್ಚ್ 19ರಂದು ಬೆಳಿಗ್ಗೆ 11ಕ್ಕೆ ಮಡಗಾಂವ್‌ನಿಂದ ಹೊರಟು, ಮಾರ್ಚ್ 20ರಂದು ಬೆಳಿಗ್ಗೆ 5.20ಕ್ಕೆ ಬೆಂಗಳೂರು ಕ್ಯಾಂಟೋನ್ಮೆಂಟ್ ತಲುಪಲಿದೆ. ಈ ರೈಲು SMVT ಬೆಂಗಳೂರಲ್ಲಿಯೂ ನಿಲುಗಡೆ ಹೊಂದಿದೆ.

ಬೆಂಗಳೂರು-ಹೋಸಪೇಟೆ ವಿಶೇಷ ರೈಲು:
ರೈಲು ಸಂಖ್ಯೆ 06533 ಮಾರ್ಚ್ 18ರಂದು ಸಂಜೆ 6.15ಕ್ಕೆ ಯಶವಂತಪುರದಿಂದ ಹೊರಟು, ಮಾರ್ಚ್ 19ರಂದು ಮಧ್ಯಾಹ್ನ 4ಕ್ಕೆ ಹೋಸಪೇಟೆ ತಲುಪಲಿದೆ. ರಿಟರ್ನ್ ರೈಲು ಸಂಖ್ಯೆ 06534 ಮಾರ್ಚ್ 19ರಂದು ಬೆಳಿಗ್ಗೆ 9ಕ್ಕೆ ಹೋಸಪೇಟೆಯಿಂದ ಹೊರಟಿದ್ದು, ಸಂಜೆ 7.20ಕ್ಕೆ ಯಶವಂತಪುರ ತಲುಪಲಿದೆ.

ತುಮಕೂರು, ಅರಸೀಕೆರೆ, ಕಡೂರು, ಚಿಕ್ಕಜಜೂರು, ಚಿತ್ರದುರ್ಗ, ರಾಯದುರ್ಗ, ಬಳ್ಳಾರಿ ಕ್ಯಾಂಟೋನ್ಮೆಂಟ್ ಮತ್ತು ತೋರಣಗಲ್ಲು ನಿಲ್ದಾಣಗಳಲ್ಲಿ ಈ ರೈಲಿಗೆ ನಿಲುಗಡೆ ಇರುತ್ತದೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular