HomeIndiaBIG NEWS: ಏಪ್ರಿಲ್ 1 ರಿಂದ ಅಗತ್ಯ ಔಷಧ ಬೆಲೆ ಏರಿಕೆ

BIG NEWS: ಏಪ್ರಿಲ್ 1 ರಿಂದ ಅಗತ್ಯ ಔಷಧ ಬೆಲೆ ಏರಿಕೆ

ನವದೆಹಲಿ: ಕೇಂದ್ರ ಸರ್ಕಾರ ಔಷಧಗಳ ವಾರ್ಷಿಕ ಬೆಲೆ ಪರಿಷ್ಕರಣೆ ಮಾಡಿದೆ. ಈ ವರ್ಷ ಶೇಕಡ 0.6 ರಷ್ಟು ದರ ಹೆಚ್ಚಳಕ್ಕೆ ಅವಕಾಶ ಕಲ್ಪಿಸಲಾಗಿದೆ.

ಅಗತ್ಯ ಔಷಧಗಳ ಬೆಲೆ ಏರಿಕೆ ಏಪ್ರಿಲ್ 1ರಿಂದ ಜಾರಿಗೆ ಬರಲಿದೆ. ನೋವು ನಿವಾರಕಗಳು ಆ್ಯಂಟಿಬಯಾಟಿಕ್ಸ್ ಮತ್ತು ಸೋಂಕು ನಿವಾರಕ, ಮಧುಮೇಹ ನಿರೋಧಕ ಮತ್ತು ಕ್ಯಾನ್ಸರ್ ಔಷಧಗಳ ದರ ಶೇಕಡ 0.6 ರಷ್ಟು ಹೆಚ್ಚಾಗಲಿದೆ. ಅಗತ್ಯ ಔಷಧಿಗಳ ಬೆಲೆ ಏಪ್ರಿಲ್ 1ರಿಂದ ಸಾಧಾರಣ ಏರಿಕೆಯಾಗಲಿದೆ. ಅಗತ್ಯ ಔಷಧಗಳ ಪಟ್ಟಿಯಲ್ಲಿರುವ 1000ಕ್ಕೂ ಹೆಚ್ಚು ಔಷಧಗಳಿಗೆ ಸರ್ಕಾರ ನಿಗದಿಪಡಿಸಿರುವ ಪರಿಷ್ಕೃತ ದರ ಅನ್ವಯವಾಗುತ್ತದೆ. ಸಾಮಾನ್ಯವಾಗಿ ರಾಷ್ಟ್ರೀಯ ಔಷಧಗಳ ಬೆಲೆ ಪ್ರಾಧಿಕಾರ ವರ್ಷಕ್ಕೊಮ್ಮೆ ಬೆಲೆಯನ್ನು ಪರಿಷ್ಕರಿಸುತ್ತದೆ. ಈ ವರ್ಷ ಅಗತ್ಯ ವಸ್ತುಗಳ ಮೇಲೆ ಏರಿಕೆ ಮಿತಿ ಅತ್ಯಲ್ಪವಾಗಿದೆ. ಅನೇಕ ವರ್ಷಗಳಿಂದ ಪ್ಯಾರಾ ಸೆಟಮಾಲ್, ರಕ್ತಹೀನತೆ ನಿವಾರಣೆ, ವಿಟಮಿನ್ ಮತ್ತು ಖನಿಜಗಳ ಅಗತ್ಯಕ್ಕೆ ಬಳಸುವ ಅಜಿಥ್ರೋಮೈಸಿನ್ ನಂತಹ ಆ್ಯಂಟಿಬಯಾಟಿಕ್ಸ್ ಕೂಡ ಅಗತ್ಯ ಔಷಧಗಳ ಪಟ್ಟಿಯಲ್ಲಿ ಸೇರಿವೆ. ಇಂತಹ ಔಷಧಗಳಿಗೆ 2022ರಲ್ಲಿ ಶೇ. 10ರಷ್ಟು, 2023ರಲ್ಲಿ ಶೇಕಡ 12ರಷ್ಟು ಏರಿಕೆ ಮಾಡಲಾಗಿತ್ತು.

ಜಾಗತಿಕ ಸಂಘರ್ಷದ ನಡುವೆ ಕಚ್ಚಾ ವಸ್ತುಗಳ ಬೆಲೆ ಏರಿಕೆಯಾಗಿದೆ. ಸಗಟು ಬೆಲೆ ಸೂಚ್ಯಂಕ ಏರುಗತಿಯಲ್ಲಿದ್ದು ಆತಂಕ ತಂದಿದೆ. ಇದರಿಂದಾಗಿ ಇನ್ನಷ್ಟು ಬೆಲೆ ಏರಿಸಬೇಕು. ಇಲ್ಲವಾದಲ್ಲಿ ಒಂದಷ್ಟು ರಿಯಾಯಿತಿ ಕೊಡಬೇಕು ಎಂದು ಔಷಧ ಉದ್ಯಮ ಒತ್ತಾಯಿಸಿದೆ. ಔಷಧ ತಯಾರಿಕೆ ಕಂಪನಿಗಳು ಕೇಂದ್ರ ಸರ್ಕಾರದ ಮೊರೆ ಹೋಗಲು ಸಜ್ಜಾಗಿವೆ. ಶೇಕಡ 0.6 ಕ್ಕಿಂತ ಹೆಚ್ಚು ದರ ಹೆಚ್ಚಳದ ಅಗತ್ಯವಿದೆ. ಈ ಸಂಗತಿಯನ್ನು ರಾಷ್ಟ್ರೀಯ ಔಷಧ ಬೆಲೆ ಪ್ರಾಧಿಕಾರದ ಮುಂದೆ ಮಂಡಿಸುತ್ತೇವೆ ಎಂದು ಔಷಧ ತಯಾರಿಕೆ ಕಂಪನಿಯೊಂದರ ಪ್ರತಿನಿಧಿ ಹೇಳಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

Most Popular